ಬಳ್ಳಾರಿ

‘ತುಂಗಭದ್ರ ಜಲಾಶಯಕ್ಕೆ ಸಚಿವ ನಾಗೇಂದ್ರ ಭೇಟಿ ನೀಡಲಿ’

‘ತುಂಗಭದ್ರ ಜಲಾಶಯಕ್ಕೆ ಸಚಿವ ನಾಗೇಂದ್ರ ಭೇಟಿ ನೀಡಲಿ’

ಬಳ್ಳಾರಿ 27:  ನವಂಬರ್ 1 ಅಥವಾ  2ರಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಎಚ್‌ಎಲ್‌ಸಿ ಕಾಲುವೆಯ ನೀರಿನ ಪರೀಶೀಲನೆ ಹಾಗೂ ಕರ್ನಾಟಕ ಮತ್ತು ಆಂಧ್ರ ಅಧಿಕಾರಿಗಳೊಂದಿಗೆ ಮಾತುಕತೆಗಾಗಿ ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಬೇಕು ಎಂದು ತುಂಗಭದ್ರ ರೈತ ಸಂಘ ಜಿಲ್ಲಾಧ್ಯಕ್ಷ ಜಿ ಪುರುಷೋತ್ತಮ್ ಗೌಡ ಅವರು ಒತ್ತಾಯಿಸಿದರು. 

ನಗರದಲ್ಲಿ ತುಂಗಭದ್ರ ರೈತ ಸಂಘದ ಕಾರ್ಯಾಲಯ ಮಯೂರ ಲಾಡ್ಜ್‌ ಎದುರುಗಡೆ ರಾಮಪ್ಪ ಕಾರ್ಯಾಲಯದಲ್ಲಿ ಜಿಲ್ಲೆಯ ತುಂಗಭದ್ರಾ ರೈತ ಸಂಘದ ವತಿಯಿಂದ ಏರಿ​‍್ಡಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ತುಂಗಭದ್ರ ಜಲಾಶಯದ ಮೇಲ್ಭಾಗದಲ್ಲಿರುವ ಸೀಂಗಟಾಲೂರು ಹಾಗೂ ತುಂಗಾ ಮತ್ತು ಭದ್ರ ಜಲಾಶಯಗಳಲ್ಲಿ ನೀರಿನ ಕೊರತೆ ಇದ್ದು ಅಲ್ಲಿಯ ರೈತರ ಬೆಳೆಗಳಿಗೆ ನೀರು ಕೊರತೆ ಅಗಲಿದೆ. ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಮತ್ತು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಗುಂಗ್ಲೆ ಇವರುಗಳನ್ನು ಭೇಟಿ ಮಾಡಿ ತುಂಗಭದ್ರ ಜಲಾಶಯದ ಹೆಚ್‌ಎಲ್‌ಸಿ ಕಾಲುವೆಯ ರೈತರ ಬೆಳೆಗಳ ಪರಿಸ್ಥಿತಿಗಳ ಕುರಿತು ವಿವರಣೆ ನೀಡಲಾಯಿತು. 

ತುಂಗಭದ್ರ ಜಲಾಶಯದಿಂದ ಹೆಚ್‌ಎಲ್‌ಸಿ ಕಾಲುವೆಗೆ ನವೆಂಬರ್ 10ರ ನಂತರ ಎಷ್ಟು ದಿನಗಳವರೆಗೆ ನೀರು ಹರಿಯಲಿವೆಯೋ ಅಲ್ಲಿಯವರೆಗೂ ಕಾಲುವೆಗೆ ನೀರು ಬಿಡಬೇಕೆಂದು ತುಂಗಭದ್ರ ಜಲಾಶಯದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳದ ಬಸವರಾಜ್  ಇವರಿಗೆ ದೂರವಾಣಿ ಕರೆಮಾಡಿ ತಿಳಿಸಿದ್ದಾರೆ. ಸಚಿವರು ಜಲಾಶಯಕ್ಕೆ ಭೇಟಿ ನೀಡುವ ದಿನಾಂಕವನ್ನು ಒಂದು ದಿನ ಮುಂಚಿತವಾಗಿಯೆ ಪತ್ರಿಕೆಗಳಿಗೆ ತಿಳಿಸಲಾಗುತ್ತದೆ.  

ಹೆಚ್‌ಎಲ್‌ಸಿ ಕಾಲುವೆ ರೈತರು ಸಚಿವರೊಂದಿಗೆ ತುಂಗಭದ್ರ ಜಲಾಶಯಕ್ಕೆ ಬನ್ನಿರಿ, ಹಾಗೂ ನವೆಂಬರ್ 10ರ ನಂತರ ಹೆಚ್‌ಎಲ್‌ಸಿ ಕಾಲುವೆಗೆ ನೀರಿನ ರಭಸ ಕಡಿಮೆಯಾದಲ್ಲಿ ಎತ್ತಿನಬೂದಿಹಾಳು, ಅಲ್ಲಿಪುರ, ಸಿದ್ಧಮನಹಳ್ಳಿ, ಕುಡುತಿನಿ ಗ್ರಾಮಗಳ ಹತ್ತಿರ ಕಾಲುವೆಗೆ ಇರುವ ನೀರಿನ ಗೇಟ್‌ಗಳನ್ನು ಇಳಿಸಿಕೊಂಡು ನಿಮ್ಮ ಉಪ ಕಾಲುವೆಗಳಿಗೆ ನೀರು ಪಡೆದುಕೊಳ್ಳಿರಿ ಎಂದು ತಿಳಿಸಿದರು. ಹಾಗೂ ನವೆಂಬರ್ 10ರ ನಂತರ ಹೆಚ್‌ಎಲ್‌ಸಿ ಕಾಲುವೆಗೆ ಮತ್ತು ನವೆಂಬರ್ 30ರ ನಂತರ ಎಲ್‌ಎಲ್‌ಸಿ ಕಾಲುವೆಗೆ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಕಾಲುವೆಗಳಿಗೆ ಪಂಪ್ ಸೆಟ್‌ಗಳನ್ನು ಅಳವಡಿಸಿದಾಗ ಯಾವುದೇ ಅಧಿಕಾರಿಗಳು ರೈತರಿಗೆ ತೊಂದರೆ ಕೊಟ್ಟರೆ ತುಂಗಭದ್ರ ರೈತ ಸಂಘದಿಂದ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.  

ರಂಜನ್ ಸಾಬ್, ವೀರಭದ್ರಗೌಡ, ವಾಸು, ಕೃಷ್ಣ ನಾಯಕ್, ವೀರಭದ್ರರಾವ್, ರಾಮಕೃಷ್ಣ,  ಸಂಘದ ಸದಸ್ಯರು ವಿವಿಧ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ