ಸರಕಾರಿ ಶಾಲೆ ಉಳಿಸಿ ಬೆಳೆಸೋಣ : ವರುಣಗೌಡ್ರ
ಶಿಗ್ಗಾವಿ 10 : ಪಟ್ಟಣದ 2 ನೇ ನಂಬರ್ ಶಾಲೆಗೆ ರೈತಸೇನಾ ಕರ್ನಾಟಕ(ರಿ) ಹಾವೇರಿ ಜಿಲ್ಲಾಧ್ಯಕ್ಷರು ಹಾಗೂ ಲ್ಯಾಂಡ್ ಲಾರ್ಡ್ ಸಮಾಜ ಸೇವಕರು ಶಿಕ್ಷಣ ಪ್ರೇಮಿಗಳು ಯುವ ಮುಖಂಡ ವರುಣಗೌಡ್ರ ಪಾಟೀಲ ಅವರು ಶಾಲೆಗೆ ಬೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ ಹಾಗೂ ಪ್ರಿಂಟರ್ ಒದಗಿಸುವ ಭರವಸೆ ನೀಡಿ ಸರ್ಕಾರ ಶಾಲೆ ಉಳಿಸಿ ಬೆಳಸೋಣ ಎಂದು ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ನಾಗರಾಜ ಕ್ಯಾಬಳ್ಳಿ, ಯುವ ರೈತ ಮುಖಂಡ ವಿನಯ ಹೊನ್ನಣ್ಣವರ, ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗರಾಜ ಬಡಿಗೇರ, ಮುಕ್ತಾರ ಅಹ್ಮದ, ಚೇತನ ಮುರಗೋಡ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕರು ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.