ಶಿರಹಟ್ಟಿ

ಶಿಕ್ಷಕ ವೃತ್ತಿ ಸಮರಾ​‍್ಣ ಭಾವದ ಸೇವೆ ಅದನ್ನು ಗೌರವಿಸೋಣ

ಶಿಕ್ಷಕ ವೃತ್ತಿ ಸಮರಾ​‍್ಣ ಭಾವದ ಸೇವೆ ಅದನ್ನು ಗೌರವಿಸೋಣ

ಶಿರಹಟ್ಟಿ 24: ಶಿಕ್ಷಕ ವೃತ್ತಿ ವೃತ್ತಿಯಲ್ಲ ಅದೊಂದು ಸಮರಾ​‍್ಣ ಭಾವದ ಸೇವೆ ಅದನ್ನು ಗೌರವಿಸಿ ನಾವು ಗೌರವಪಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ ಅಭಿಪ್ರಾಯಪಟ್ಟರು.  

ಶಿರಹಟ್ಟಿಯ ಸೇಂಟ್ ಪಾಲ್ಸ್‌ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನೂತನ ಪದವೀಧರ ಶಿಕ್ಷಕ ಶಿಕ್ಷಕಿಯರಿಗಾಗಿ ಹಮ್ಮಿಕೊಂಡ ಪ್ರೇರಣಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಹೊಸದಾಗಿ ನೇಮಕಗೊಂಡು ಎರಡೂ ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಇದೀಗ ಸೇವೆಗೆ ಅಣಿಯಾದ ನೂತನ ಶಿಕ್ಷಕರಿಗೆ ಸೇವಾ ಗೌರವ, ವೃತ್ತಿ ಧರ್ಮ ತಿಳಿಸುವ ಈ ಕಾರ್ಯಕ್ರಮ ರಾಜ್ಯದಲ್ಲೇ ವಿನೂತನವಾದುದು ಎಂದರು. 

ಕಾರ್ಯಕ್ರಮದಲ್ಲಿ ಬಿ.ಇ.ಓ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕರಾದ ಎಸ್‌.ವಿ.ತುಪ್ಪದ ಮುಖ್ಯ ಅತಿಥಿಗಳಾಗಿ, ಮುಖ್ಯೋಪಾಧ್ಯಾಯರಾದ ಸುನೀತಾ ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಇ.ಸಿ.ಓಗಳಾದ ಹರೀಶ್ ಎಸ್, ಉಮೇಶ್ ಹುಚ್ಚಯ್ಯನಮಠ, ಪ್ರೌಢ ವಿಭಾಗದ ಬಿ.ಆರ್‌.ಪಿ ಈಶ್ವರ ಮೆಡ್ಲೇರಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು. ಸಿ.ಆರ್‌.ಪಿ ಎನ್‌.ಎನ್‌.ಸಾವಿರಕುರಿ ಕಾರ್ಯಕ್ರಮ ನಿರೂಪಿಸಿದರು. ಕಂಪ್ಯೂಟರ್ ಪ್ರೋಗ್ರಾಮರ್ ರಾಜೇಶ್ವರಿ ಬಾರಕೇರ ವಂದಿಸಿದರು. 


ಸುದ್ದಿ ಓದಿ