ಕನ್ನಡಮ್ಮನ ಜಾತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗಿಸೋಣ: ಹಾಸಿಂಪೀರ ವಾಲೀಕಾರ
ಸಿಂದಗಿ 21: ಫೇ 26ರಂದು ಪಟ್ಟಣದ ಎಚ್.ಜಿ.ಕಾಲೇಜು ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಳ್ಳುತ್ತಿರುವ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲ ಕನ್ನಡ ಮನಸ್ಸುಗಳು ಕೂಡಿಕೊಂಡು ನಾಡದೇವಿಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಜರುಗಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಿನಂತಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಮ್ಮೇಳನದ ವೇದಿಕೆ ಸಜ್ಜಾಗಿದೆ. ಬಿತ್ತಿಪತ್ರಗಳ ಅಂಟಿಸುಕೆ ನಡೆಸಿದೆ ಅಲ್ಲದೆ ವಿವಿಧ ಬಗೆಯ ಜವಾರಿ ಊಟದ ವ್ಯವಸ್ಥೆ ನಡೆದಿದೆ. ಸುಮಂಗಲೆಯರ ಕುಂಭಮೇಳದೊಂದಿಗೆ ಸವಾಧ್ಯಕ್ಷರ ಮೆರವಣಿಗೆಗೆ ಸಾರವಾಡದ ಗೊಂಬೆ ಕುಣಿತ, ಕರಡಿ ಮಜಲು, ಲೇಝಿಮು, ಲಂಬಾಣಿ ನೃತ್ಯ, ಹಲಗೆ ಕುಣಿತ ಸೇರಿದಂತೆ ಸರಕಾರಿ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವು ಕಲಾ ತಂಡಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿವೆ ಕಾರಣ ಎಲ್ಲ ಕನ್ನಡದ ಮನಸ್ಸುಗಳು ಒಂದಾಗಿ ಕನ್ನಡಮ್ಮನ ಜಾತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗಿಸೋಣ ಎಂದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಸಿಂದಗಿಯಲ್ಲಿ ಆರನೇಯ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ನಮ್ಮೇಲರಿಗೆ ಹೆಮ್ಮೆಯ ವಿಷಯ. ತಾಲೂಕಿನ ಜನತೆ ಆಮಂತ್ರಣಕ್ಕಾಗಿ ಕಾಯದೆ ನಮ್ಮೇಲ್ಲರ ಹಬ್ಬ ಕನ್ನಡಮ್ಮ ಜಾತ್ರೆಗೆ ಕೈ ಜೋಡಿಸೋಣ ಎಂದು ಮನವಿ ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಮಾತನಾಡಿದರು.
ಶಾಂತಗಂಗಾಧರ ಸ್ವಾಮಿಗಳು, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮಾಜಿ ಅಧ್ಯಕ್ಷ ಸಿ.ಎಂ.ದೇವರಡ್ಡಿ, ಸಿದ್ದಲಿಂಗ ಚೌಧರಿ, ಹಾಗೂ ಶಿವನಗೌಡ ಬಿರಾದಾರ, ಎಂ.ಎ.ಖತೀಬ, ಶೋಭಾ ಚಿಗರಿ, ಭೀಮು ವಾಲೀಕಾರ, ಸುನಂದಾ ಯಂಪೂರೆ, ಮಹಾನಂದಾ ಬಮ್ಮಣ್ಣಿ, ಮಹಾದೇವಪ್ಪ ಗಾಯಕವಾಡ, ಅಂಬಿಕಾ ಪಾಟೀಲ, ಆನಂದ ಶಾಬಾದಿ, ರಮೇಶ ಪೂಜಾರಿ, ಸಾಯಬಣ್ಣ ದೇವರಮನಿ, ಪಂಡಿತ ಯಂಪೂರೆ, ಜಯಶ್ರೀ ಹದನೂರ, ಪ್ರತಿಬಾ ಚಳ್ಳಗಿ, ಶರಣಮ್ಮ ನಾಯಕ, ಡಾ ಪ್ರಕಾಶ ರಾಗರಂಜನಿ, ಅಣಾರಾಯ ವಾಲೀಕಾರ ಸೇರಿದಂತೆ ಅನೇಕರು ಇದ್ದರು.