ಮಹಲಿಂಗಪುರ

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಳುವಳಿಯಾಗಿ ನೀಡೋಣ: ಶಾಸಕ ಸವದಿ

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಳುವಳಿಯಾಗಿ ನೀಡೋಣ: ಶಾಸಕ ಸವದಿ

ಮಹಾಲಿಂಗಪುರ : ಪ್ರತಿಯೊಬ್ಬರೂ ತಮ್ಮ ಕೈಲಾದ ಮಟ್ಟಿಗೆ ಸಸಿಗಳನ್ನು ನೆಟ್ಟು ಮುಂಬರುವ ಪೀಳಿಗೆಗೆ ಒಳ್ಳೆಯ ಪರಿಸರ ಬಳುವಳಿಯಾಗಿ ನೀಡೋಣ ಎಂದು ಕನರ್ಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.ಶನಿವಾರ ರೇವಡಿಗಿಡದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ದೇವಸ್ಥಾನದ ದಾರಿಯುದ್ದಕ್ಕೂ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿಗೆ ಹೆಚ್ಚುತ್ತಿರುವ ಕೊರೋನಾ ರೋಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಪರಿಸರ ಸ್ವಚ್ಚವಾಗಿರಬೇಕು, ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪರಿಸರದಲ್ಲಿ ಆಮ್ಲಜನಕ ಹೆಚ್ಚುವಂತೆ ಮಾಡಬೇಕು, ಮನುಷ್ಯರ ಕೊಳ್ಳುಬಾಕತನ ಸಂಸ್ಕೃತಿ ಈ ಸ್ಥಿತಿಗೆ ಕಾರಣವಾಗಿದೆ, ಮಾನವನ ಐಶಾರಾಮಿ ಜೀವನದಿಂದ ಮನುಕುಲದ ವಿನಾಶ ಹತ್ತಿರವಾಗುತ್ತಿದೆ ಹೀಗಾಗಿ ಉಸಿರು ನಿಲ್ಲುವ ಮುನ್ನ ಎಲ್ಲ ಕಡೆಗಳಲ್ಲಿ ಸಸಿ ನೆಟ್ಟು ಹಸಿರು ಹೆಚ್ಚಿಸಿ ಎಂದರು.  ನಂತರ ಮಾತನಾಡಿದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಇತ್ತೀಚೆಗೆ ಅರಣ್ಯ ನಾಶದಿಂದ ಪರಿಸರ ಸೊರಗುತ್ತಿದೆ, ಇದೇ ರೀತಿ ಮುಂದುವರಿದರೆ ಮಾನವ ಕುಲಕ್ಕೆ ಅಳಿಗಾಲ ತಪ್ಪಿದ್ದಲ್ಲ, ಈ ದಿನಾಚರಣೆ ಒಂದು ದಿನಕ್ಕೆ ಸಿಮೀತವಾಗದೆ ವರ್ಷವಿಡಿ ಈ ಕಾಯಕ ನಡೆದರೆ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದರು.

ಲಸಿಕೆ ಕಾರ್ಯಕ್ರಮಕ್ಕೆ ಹಾಗೂ ಪೂರ್ಣಗೊಂಡ ಕಾರ್ಯಗಳಿಗೆ ಚಾಲನೆ : ತೇರದಾಳ ಶಾಸಕ ಸಿದ್ದು ಸವದಿ ಅವರು ರೋಡಗಿಡ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಈ ಭಾಗದ ಜನರಿಗೆ ಕೊರೋನಾ ಲಸಿಕೆ ನೀಡುವುದು, ಕೆಂಗೇರಿ ಮಡ್ಡಿ 14ನೇ ವಾಡರ್್ ಹಾಗೂ 07ನೇ ವಾಡರ್್ ಭಗಿರಥ ಸರ್ಕಲ್ ನಲ್ಲಿ ಹೈಮಾಸ್ಟ್ ವಿದ್ಯುದ್ದೀಪಗಳ ಉದ್ಘಾಟನೆ ಹಾಗೂ ಬಸವ ನಗರ 6ನೇ ವಾಡರ್ಿನಲ್ಲಿ ನೂತನವಾಗಿ ಮಾರ್ಗಗಳಲ್ಲಿ ಜೋಡಣೆಗೊಂಡ ವಿದ್ಯುದ್ದೀಪಗಳ ಮತ್ತು ಮಹಾಂತೇಶ್ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಚನಬಸು ಯರಗಟ್ಟಿ ಮತ್ತು ಬಿಜೆಪಿ ಧುರೀಣರಾದ ಈರಪ್ಪ ದಿನ್ನಿಮನಿ, ಮನೋಹರ ಶಿರೋಳ, ಎಂ.ಐ ಕೋಳಿಗುಡ್ಡ, ಜಿ.ಎಸ್ ಗೊಂಬಿ, ಚನ್ನಬಸು ಯರಗಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಡಾ. ಅಶೋಕ ದಿನ್ನಿಮನಿ, ಸಂಜಯ ಅಂಬಿ, ಬಸವರಾಜ ಚಮಕೇರಿ, ಗುರುಪಾದ ಅಂಬಿ, ಆನಂದ ಘಟ್ನಟ್ಟಿ, ಗಿರೀಶ ಸೂರಗೊಂಡ, ಚನ್ನಪ್ಪ ರಾಮೋಜಿ, ಶಿವಾನಂದ ಹುಣಶ್ಯಾಳ, ಸಂಜು ಅಂಬಿ, ಸುವರ್ಣ ಆಸಂಗಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ವಿಕ್ರಮ ಕುಳ್ಳೂರ, ಬಿ.ವಾಯ್,ಮಧರ್ಿ, ಮಹಾಲಿಂಗ ಗಸ್ತಿ, ರಾಜು ಹೂಗಾರ್, ಸಿದ್ದು ಅಳ್ಳಿಮಟ್ಟಿ ಸೇರಿದಂತೆ ಹಲವರು ಇದ್ದರು. ರೋಡಡಗಿಡದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ರಾಜೇಂದ್ರ ಶ್ರೀಗಳು, ಶಾಸಕ ಸಿದ್ದು ಸವದಿ ಉದ್ಘಾಟಿಸಿದರು 

ಸುದ್ದಿ ಓದಿ