ಖಾನಾಪುರದ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ : ಬೆಚ್ವಿಬಿದ್ದ ಜನ

ಖಾನಾಪುರದ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ : ಬೆಚ್ವಿಬಿದ್ದ ಜನ

ಖಾನಾಪುರ: ತಾಲ್ಲೂಕಿನ ಹಲಸಿವಾಡಿ ಗ್ರಾಮದ ಬಳಿ ಕೃಷಿ ಜಮೀನಿನಲ್ಲಿ ಚಿರತೆಯ ಮರಿ ಕಾಣಿಸಿಕೊಂಡಿದೆ‌. ಇದರಿಂದ ಗ್ರಾಮಸ್ಥರು ಬೆಚ್ವಿ ಬಿದ್ದ ಪ್ರಸಂಗ ವರದಿಯಾಗಿದೆ.

  ಗ್ರಾಮದ ಜಮೀನಿನಲ್ಲಿ ರೈತರು ಕೃಷಿ ಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಚಿರತೆ ಜಮೀನಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಹಾದುಹೋಗಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಚಿರತೆ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದಿರಬಹುದು, ಈ ಘಟನೆ ಕುರಿತು ಪರಿಶೀಲಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ಸುದ್ದಿ ಓದಿ