ಶಿವಾಪೂರ, ಮೂಡಲಗಿ ಭಾಗದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಿಗೆ ಎಚ್ವರಿಕೆ ನೀಡಿದ ಅರಣ್ಯ, ಪೊಲೀಸ ಇಲಾಖೆ

ಶಿವಾಪೂರ, ಮೂಡಲಗಿ ಭಾಗದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಿಗೆ ಎಚ್ವರಿಕೆ ನೀಡಿದ ಅರಣ್ಯ, ಪೊಲೀಸ ಇಲಾಖೆ

ಬೆಳಗಾವಿ : ‌ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಮತ್ತು ಶಿವಾಪೂರ ಪ್ರದೇಶದ ಹೊಲಗದ್ದೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ದೃಶ್ಯ ಸೆರೆಯಾಗಿದ್ದು, ಈ ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಅರಣ್ಯ ಹಾಗೂ ಪೊಲೀಸ ಇಲಾಖೆಯವರು ಸೂಚನೆ ನೀಡಿದ್ದಾರೆ.


    ಶಿವಾಪುರ ಗ್ರಾಮದ ಕಬ್ಬು, ಜೋಳ, ಮೆಕ್ಕಜೋಳ ಸೇರಿದಂತೆ ಗದ್ದೆಯ ಪಕ್ಕದಲ್ಲಿ  ಖಾಲಿ ಇರುವ ಜಾಗದ ಗೀಡಗಂಟೆಗಳಲ್ಲಿ ಚಿರತೆ ಓಡಾಡುತ್ತಿರುವ ವಿಡಿಯೋ ಸೆರೆಯಾಗಿದೆ. ಅಲ್ಲದೆ ಶಿವಾಪೂರ ಗ್ರಾಮದ ಹೊಲಗದ್ದೆಗಳಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.

  ಈ ಹಿನ್ನೆಲೆ ಅರಣ್ಯ ಇಲಾಖೆ, ಪೊಲೀಸರು ಚಿರತೆ ಹಿಡಿಯಲು ಕಾರ್ಯಚರಣೆ ಕೈಗೊಂಡಿದ್ದಾರೆ. ಅಲ್ಲದೆ, ಚಿರತೆ ಓಡಾಡಿರುವ ಪ್ರದೇಶಗಳಲ್ಲಿ ಜನರು ಓಡಾಡದಂತೆ, ಕೃಷಿ ಜಮೀನುಗಳಲ್ಲಿ ಕೆಲಸ ಮಾಡದಂತೆ ಅರಣ್ಯ ಮತ್ತು ಪೊಲೀಸ ಇಲಾಖೆಗಳು ಜನರಿಗೆ ಎಚ್ಚರಿಕೆ ನೀಡಿವೆ.

ಸುದ್ದಿ ಓದಿ