ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ
ರೋಣ 05: ತಾಲೂಕಿನ ಹುನಗುಂಡಿ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ರೋಣ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮೂಡಿಸುವ ನಾಗರಿಕರ ಸಬಲೀಕರಣ ಕುರಿತು ಕಾರ್ಯಕ್ರಮ ನೇರವೆರಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ದೀವಾಣಿ ನ್ಯಾಯಾದೀಶರಾದ ವಿಜಯಕುಮಾರ ಎಸ್ ಹಿರೇಮಠ ರವರು ನೇರವೇರಿಸಿ ಮಾತನಾಡಿ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕಾನೂನಿನ ಬಗ್ಗೆ ತಿಳಿದೊಳ್ಳುವ ಅಗತ್ಯವಿದೆ ಈ ನಿಟ್ಟಿನಲ್ಲಿ ಯುವ ಸಮೊಹ ಸಾಕ್ಷರರಾಗಿ ಪಾಲನೆಗೆ ಮುಂದಾಗಬೇಕೆಂದರು.
ಕಾನೂನು ಸೇವೆಗಳ ಸಮಿತಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೇರವು ದೇಶದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ.ಹುಟ್ಟಿನಿಂದ ಕೊನೆಯವರೆಗೂ ಕಾನೂನುಗಳಿವೆ ರಾಷ್ಟ್ರದ್ವಜಕ್ಕೆ ನೀಡುವ ಗೌರವದಂತೆ ಕಾನೂನಿಗೂ ಪ್ರತಿಯೊಬ್ಬರು ಗೌರವ ಕೊಡಬೇಕು.ಸಂವಿದಾನ ಪರಿಚ್ಛೇದ 39/ಎ ನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಿಗಬೇಕಾದ ಹಕ್ಕುಗಳನ್ನು ಉಲ್ಲೆಖಿಸಲಾಗಿದೆ ಎಂದು ಮಾತನಾಡಿದರು. ಉಪನ್ಯಾಸಕರಾಗಿ ಎಸ್.ಎಲ್.ಬಾಣದ ವಕೀಲರು ಮಾತನಾಡಿ ದೇಶದಲ್ಲಿ ಇನ್ನೂ ಅನಕ್ಷರಸ್ಥರ ಸಂಖ್ಯೆ ಇದೆ.ಪ್ರತಿಯೊಬ್ಬರೀಗೀ ದೊರೆಯುವ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಕಾನೂನಿನ ಅರಿವಿಲ್ಲ. ಹಿಗಾಗಿ ಎಲ್ಲರೂ ಶಿಕ್ಷಣ ಪಡೆಯಬೇಕು ವ್ಯಕ್ತಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಸಂಧರ್ಭದಲ್ಲಿ ಕೇಸನ್ನೂ ಮುನ್ನಡೇಸಲು ಸಾಧ್ಯವಾಗದಿದ್ದಲ್ಲಿ ಅರ್ಜಿ ನೀಡಿದರೆ ಸಾಕು ನ್ಯಾಯಾಲಯ ವಕೀಲರನ್ನು ನೇಮಕ ಮಾಡುತ್ತದೆ ್ಲಪರಸ್ಪರ ರಾಜಿ ಸಂದಾನ ಮೂಲಕ ವಿವಾದ ಬಗೆ ಹರಿಸಿಕೊಳ್ಳಬಹುದಾಗಿದೆ.ಲೋಕ ಅದಾಲತ್ ಮೂಲಕ ತ್ವರಿತ ಗತಿಯಲ್ಲಿ ಉಚಿತವಾಗಿ ಕಾನೂನು ಅರಿವು ಪಡೆಯಲು ಸಾಧ್ಯ ಎಂದು ಮಾತನಾಡಿದರು.
ಇದೇ ಸಂಧರ್ಭದಲ್ಲಿ ಮಹಿಳೆಯರಿಗೆ ವರದಕ್ಷಿಣೆ ಕಿರುಕುಳ,ಬಾಲ್ಯವಿವಾಹದ ಪದ್ದತಿ ಇದರ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಈ ಸಭೆಯಲ್ಲಿ ಹೆಚ್ ಕಡಿಯವರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಎಮ್. ಆರಿ್ತಮ್ಮನಗೌಡ್ರ,ಗ್ರಾಮ ಪಂಚಾಯತಿ ಪಿ.ಡಿ.ಓ. ಎಸ್,ಹೆಚ್,ಮಂಡಸೊಪ್ಪಿ, ವಕೀಲರು,ಗ್ರಾಮಪಂಚಾಯತಿ ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ಆರಿ್ಬ,ಗೂಳಪ್ಪನವರ, ಗ್ರಾಮ ಪಂಚಾಯತಿ ಸದಸ್ಯರು, ಬಸವಂತಪ್ಪ ಹೆಚ್ ತಳವಾರ, ರೋಣ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು, ಶಿವಪುತ್ರಯ್ಯ ಡಿ ಹಿರೇಮಠ,ಅಮರ್ಪಗೌಡ ಸ ಗೌಡರ, ಎಸ್.ಡಿ.ಎಮ್.ಸಿ.ಅಧ್ಯಕ್ಷರು ಬಸವಪ್ರಭು ಸಿ ವಸ್ತ್ರದ,ಶ್ರೀಧರ ವಿ ವಸ್ತ್ರದ, ಅನ್ನಪ್ಪ ಬಿ ಮಂಡಸೊಪ್ಪಿ,ಶರಣಪ್ಪ ಕುರಿ,ರಾಮಪ್ಪ ಚಿಕ್ಕನಾಳ, ಕವಿತಾ ಬ ತಳವಾರ,(ಬೇವಿನಗಿಡದ) ಅಂಗನವಾಡಿ ಕಾರ್ಯಕರ್ತೆಯರಾದ ನಾಗಮ್ಮ ರಾ ನವಚಿದ್ರ ಗ್ರಾಮದ ಗುರು-ಹಿರಿಯರು ಯುವಕರು ಕಾರ್ಯಕ್ರಮದಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಮ್.ವಾಯ್, ಚಕ್ರಸಾಣಿ, ಮುಖ್ಯೋಪಾದ್ಯಾಯರು ಇವರು ನಿರೂಪಣೆ ಮಾಡಿದರು. ಕೊನೆಯಲ್ಲಿ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.