ಕಾನೂನು ಅರಿವು ಕಾರ್ಯಕ್ರಮ
ಮಹಾಲಿಂಗಪುರ 28 : ಇತ್ತೀಚಿಗೆ ನಗರದಲ್ಲಿ ಓಷಧಗಳ ಸಗಟು ವ್ಯಾಪಾರಿಗಳಿಗೆ ಓಷಧ ಮತ್ತು ಕಾಂತಿ ವರ್ಧಕ ಕಾಯ್ದೆಯ ಅನುಷ್ಠಾನ ಕುರಿತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಓಷಧ ನಿಯಂತ್ರಣ ಅಧಿಕಾರಿಗಳು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಮುಧೋಳ ಮತ್ತು ಮಹಾಲಿಂಗಪುರದಲ್ಲಿ ಪ್ರತ್ಯೇಕ ಸಭೆ ನಡೆಸಿ ಕಾಯ್ದೆಯ ಬಗ್ಗೆ ಅರಿವು ಮೂಡಿಸುವದರೊಂದಿಗೆ ಕಾಯ್ದೆಯ ಪಾಲನೆಯನ್ನು ತುಂಬು ಜವಾಬ್ದಾರಿಯಿಂದ ಪಾಲಿಸಲು ತಿಳಿಸಿದರು. ಸಭೆಯಲ್ಲಿ ಓಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ನಗರದ ಹೋಲ್ಸೇಲ್ ಅಂಗಡಿಯ ಮಾಲೀಕರು ಹಾಜರಿದ್ದು, ಕಾನೂನು ಕ್ರಮದ ಬಗ್ಗೆ ತಿಳಿದುಕೊಂಡರು.