ಧಾರವಾಡ - ಹುಬ್ಬಳ್ಳಿ

ಕಾನೂನು ಅರಿವು-ನೆರವು ಕಾರ್ಯಕ್ರಮ

ಕಾನೂನು ಅರಿವು-ನೆರವು ಕಾರ್ಯಕ್ರಮ

ಧಾರವಾಡ 14:  ವಿಶ್ವ ವಿಕಲಚೇತನರ ದಿನಾಚರಣೆ ಕುರಿತು ಧಾರವಾಡದ ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡು ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢ ವಸತಿ ಶಾಲೆಯಲ್ಲಿ, ಸದರಿ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಧಾರವಾಡ ಜಿಲ್ಲಾ ಹಿರಿಯ ನಾಗರೀಕರ ಸಬಲೀಕರಣ ಹಾಗೂ ವಿಶೇಷ ಚೇತನ ಕಲ್ಯಾಣ ಇಲಾಖೆಯ ಸಂಯೋಗದಲ್ಲಿ  ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ದಿ. 13ರಂದು ಆಯೋಜಿಸಲಾಗಿತ್ತು.   

ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್‌. ದೊಡ್ಡಮನಿ, ಅಧ್ಯಕ್ಷರಾಗಿ ಹಿರಿಯ ನಾಗರೀಕರ ಸಬಲೀಕರಣ ಹಾಗೂ ವಿಶೇಷ ಚೇತನ ಕಲ್ಯಾಣ ಇಲಾಖೆಯ ನಿರ್ದೇಶಕ ಜಗದೀಶ ಕೆ., ಮತ್ತು ಸದರಿ ಸಂಸ್ಥೆಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸದರಿ ಸಂಸ್ಥೆಯ ಮುಖ್ಯೋಪಾಧ್ಯಯ ಕವಿತಾ ಅ. ಕಳಸಾ ಅವರು ಭಾಗವಹಿಸಿದರು.   

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಅಂಗವೈಕಲ್ಯದ ಕಾರಣದಿಂದ ಯಾವುದೇ ಮಕ್ಕಳ ಜೀವಿಸುವ, ಅವಕಾಶಗಳನ್ನು ನಿರಾಕರಿಸುವ, ಶಿಕ್ಷಣ ವಂಚಿತರನ್ನಾಗಿ ಮಾಡುವ ಹಾಗಿಲ್ಲವೆಂದು, ಸದರಿ ಮಕ್ಕಳು ಸಹ ಎಲ್ಲರಂತೆ ಗೌರವದಿಂದ ಮತ್ತು ಸಮಾನತೆಯಿಂದ ಬದಕುವ ಹಕ್ಕು ಹೊಂದಿರುವರೆಂದು, ಆ ಮಕ್ಕಳಿಗೆ 18 ವರ್ಷಗಳವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿಯಾಗಿದೆಂದು, ಆ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದಲ್ಲಿ, ಕಾರ್ಮಿಕ ಪದ್ಧತಿಗೆ ದೂಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.  ಬಾಲ್ಯ ವಿವಾಹ ನಿರ್ಮೂಲನೆ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.  ಮಕ್ಕಳು ಮತ್ತು ಮಹಿಳೆಯರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೀಡಲಾಗುವದೆಂದು ತಿಳಿಸಲಾಯಿತು.   

ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ ಅಂಬಿಕಾ ನಾ. ಮಸಗಿ ಅವರು ಚದುರಂಗ ಸ್ಪರ್ದೆಯಲ್ಲಿ ರಾಜ್ಯ ಮಟ್ಟದಲ್ಲಿ ಮತ್ತು ಅಂತರಾಜ್ಯ ಮಟ್ಟದಲ್ಲಿ ಜಯಗಳಿಸಿ ಟರ್ಕಿ ದೇಶದಲ್ಲಿ ನಡೆಯುವ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುವುದನ್ನು ಪ್ರಸಂಶಿಸಲಾಯಿತು ಮತ್ತು ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಗದೀಶ ರವರು ತಮ್ಮ ಇಲಾಖೆಗಳ ಮೂಲಕ ವಿಶೇಷ ಚೇತನ ಮಕ್ಕಳಿಗೆ ಮತ್ತು ಇತರರಿಗೆ ಇರುವ ಸೌಲಭ್ಯ, ಸಹಾಯಧನ ಇತರ ಸೌಕರ್ಯಗಳ ಮಾಹಿತಿಯನ್ನು ತಿಳಿಯಪಡಿಸಿದರು.  ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪಡೆಯುವಂತೆ ಪಾಲಕರಿಗೆ ತಿಳಿಸಿದರು.  ಸಭೆಯಲ್ಲಿನ ಅತಿಥಿಗಳ ಭಾಷಣವನ್ನು ಸದರಿ ಸಂಸ್ಥೆಯ ಮುಖ್ಯೋಪಾಧ್ಯೆ ಕವಿತಾ ಅ. ಕಳಸಾ ಅವರು ಸಂಜ್ಞೆಗಳ ಮೂಲಕ ಮಕ್ಕಳಿಗೆ ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು ಅವರೊಂದಿಗೆ ಅವರ ಪಾಲಕರು ಮತ್ತು ಎಲ್ಲಾ ಗುರುವೃಂದದವರು ಭಾಗವಹಿಸಿದರು. 


ಸುದ್ದಿ ಓದಿ