ಇದ್ದ ನೌಕರಿ ಬಿಟ್ಟು ನರ್ಸರಿಯಲ್ಲಿ ಯಶಸ್ಸು ಕಂಡ : ರಾಜಾ ರಮೀಜ
ಸರ್ಕಾರಿ ನೌಕರಿಯೇ ಬೇಕು ಎನ್ನುವವರಿಗೆ ಮಾದರಿಯಾದ ಈ ಯುವಕ

ಮಹೇಶ ಆರಿ.
ಮಹಾಲಿಂಗಪುರ : ಇಂದಿನ ಯುಗದಲ್ಲಿ ಪದವಿ ಮುಗಿದರೆ ಸಾಕು ಸರ್ಕಾರೀ ನೌಕರಿನೇ ಬೇಕು ಎನ್ನುವ ಕಾಲ ಇದು ಇಂತಹ ಪರಸ್ಥಿತಿಯಲ್ಲಿ ಎಂ.ಬಿ.ಎ ಮುಗಿಸಿದ್ದರು ಇರುವ ನೌಕರಿ ಬಿಟ್ಟು ಸ್ವಂತ ಉದೋಗದತ್ತ ಮನಸ್ಸು ಮಾಡಿ ನರ್ಸರಿ ಆರಂಭಿಸಿ ಯಶಸ್ಸು ಕಂಡ ಸಾಧಕ ಯುವಕ ರಾಜಾರಮಿಜ ಡಾಂಗೆ
ಮಹಾಲಿಂಗಪುರದ ನಿವೃತ್ತ ಶಿಕ್ಷಕ ಮತ್ತು ಹಿರಿಯ ಪತ್ರಕರ್ತರಾದ ಎಂ.ಐ ಡಾಂಗೆಯವರ ಸುಪುತ್ರ ರಾಜಾರಮೀಜ ಡಾಂಗೆ ರಾಜ್ಯದ ಅತೀ ಹಳೆಯ ಸಕ್ಕರೆ ಕಾರ್ಖಾನೆಯಾದ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಸೇಲ್ಸ ಮ್ಯಾನೇಜರ ಆಗಿ ಕೆಲಸ ಮಾಡುತ್ತಿದ್ದು ಕೇವಲ ಕೆಲವೆ ವರ್ಷದಲ್ಲಿ ಇದ್ದ ಹುದ್ದೆ ತೊರೆದು ಸ್ವಂತ ಉದ್ಯೋಗ ನರ್ಸರಿ ಪ್ರಾರಂಭ ಮಾಡಿ, ಮನೆ, ಕಚೇರಿ,ಅಲಂಕಾರಿಕ ನರ್ಸರಿಗಳ ವಿನ್ಯಾಸ ಮಾಡುತ್ತಾರೆ. ಬಾಲ್ಯದಿಂದಲೇ ಸಸಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಇವರು ತಮ್ಮ ಕನಸ್ಸನ್ನು ಉದ್ಯಮವಾಗಿ ಬೆಳೆಸಿ ಎಲ್ಲರ ಚಿತ್ತ ಇವರ ನರ್ಸರಿಯತ್ತ ನೋಡುವ ಹಾಗೆ ಮಾಡಿದ್ದು ವಿಶೇಷ.
ಆರಂಭದಲ್ಲಿ ಗೆಳೆಯರೊಂದಿಗೆ ಸೇರಿ ಬೆಂಗಳೂರಿನಲ್ಲಿ ವಾಟರ ಹಿಟರ ಕಂಪನಿ ಆರಂಭಿಸಿದ ಇವರು ಕೆಲವು ದಿನಗಳ ನಂತರ ಆವರ ಮನೆಯ ಪರಸ್ಥಿತಿಗೆ ಹೊಂದಿಕೊಳ್ಳಲು ಸ್ವಂತ ಊರು ಮಹಾಲಿಂಗಪುರಕ್ಕೆ ಬಂದು ಸಮೀಪದ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡು ಉತ್ತಮ ನಿರ್ವಹಣೆ ತೋರಿ ಮೇಲಾಧಿಕಾರಿಗಳು ಮೆಚ್ಚುಗೆ ಗಳಿಸಿ ಮುಂಬಡ್ತಿ ಪಡೆದು ಲೆಕ್ಕಾಧಿಕಾರಿಯಾಗಿ ಬಡ್ತಿ ಪಡೆದು ನೌಕರಿ ಮಾಡುತ್ತಲೇ ಇಂಡಿಯನ್ ಹಾರ್ಟಿಕಲ್ಚರ್ ಟೇಕ್ನಲಾಜಿ ವಿಶ್ವ ವಿದ್ಯಾಲಯದಲ್ಲಿ ಗಾರ್ಡನಿಂಗ್ ಮತ್ತು ಲ್ಯಾಂಡ್ ಸ್ಕೆಪ ಕೋಸ್ರ್ನ್ನು ಆನ್ ಲೈನ್ ಮೂಲಕ ಮುಗಿಸಿ ಪದವಿ ಪಡೆದುಕೊಂಡು ಅದರತ್ತ ಆಶಕ್ತಿ ವಹಿಸಿ ನೌಕರಿ ಬಿಡುವ ನಿರ್ಧಾರ ಮಾಡಿ ನೌಕರಿ ಬಿಟ್ಟು ರಾಣಿ ಚನ್ನಮ್ಮ ವೃತ್ತದಲ್ಲಿ ಹ್ಯಾಪಿ ಹೋಂ ನರ್ಸರಿ ಉದ್ಯೋಗ ಆರಂಭಸಿದರು.
ಟೆರೇಸ್ ಗಾರ್ಡನಿಂಗ್ ಪದ್ಧತಿ ಮೂಲಕ ಮನೆಯಲ್ಲಿ ಇರುವಷ್ಟೆ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಮುಂದಾದ ಅವರು ಅದರಲ್ಲಿ ಯಶಸ್ಸನ್ನು ಕಂಡು ನೌಕರಿ ಮಾಡಿದರೆ ತಮ್ಮಲ್ಲಿನ ಕೌಶಲ್ಯಯುತ ಪ್ರತಿಭೆ ಹಾಳಾಗಬಾರದೆಂದು ನಿಶ್ಚಯಿಸಿ ನೌಕರಿ ಬಿಟ್ಟು ನರ್ಸರಿಯತ್ತ ದೃಢ ಹೆಜ್ಜೆ ಇಟ್ಟರು, ದಿನದಿಂದ ದಿನಕ್ಕೆ ಬೆಳೆಯುತ್ತಾ ಸಾಗಿ ಸಣ್ಣ ಉದ್ಯಮವನ್ನಾಗಿ ಪ್ರಾರಂಭಿಸಿದ್ದಾರೆ.
ಮನೆಯ ಓಳಂಗಣ ಹೊರಾಂಗಣ ವಿನ್ಯಾಶಕ್ಕೆ ತರಿಸುವ ವಸ್ತುಗಳನ್ನು ಇರಿಸಲು ಜಾಗದ ಕೊರತೆಯಿಂದಾಗಿ ಮಹಾಲಿಂಗಪುರ ಬೆಳಗಲಿಯ ರಸ್ತೆಯ ಬದಿ 20 ಗುಂಟೆ ಜಾಗ ಬಾಡಿಗೆ ಪಡೆದು ನರ್ಸರಿ ಆರಂಭಿಸಿ ಮನೆಯ ಮಾಳಿಗೆಯ ಮೇಲೆ ಇದ್ದ ಸಸಿಗಳನ್ನು ನರ್ಸರಿಗೆ ವರ್ಗಾಯಿಸಿ ಇನ್ನು ಅನೇಕ ಸಸಿಗಳನ್ನು ಬೆಳೆಸಿದರು ಈಗ ಇವರ ನರ್ಸರಿಯಲ್ಲಿ 120 ಕ್ಕೂ ಹೆಚ್ಚುದೇಶ ವಿದೇಶಗಳ ವಿವಿಧ ಸಂಪದ್ಭರಿತ ಸಸಿಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ.
ಇವರ ನರ್ಸರಿಯಲ್ಲಿರುವ ವಿಶೇಷ ಗಿಡಗಳಾದ ಬೋನ್ಸಾಯಿ ಗಿಡ, ಹೂವಿನ ಗಿಡ, ಕ್ಯಾಕ್ಪಸ, ಇನ್ನು ಅನೇಕ ಅಲಂಕಾರಿಕ ಸಸಿಗಳು ಹಣ್ಣಿನ ಗಿಡಗಳು ಮಣ್ಣಿನ ಕಲಾಕೃತಿಗಳು ಮನಿಪ್ಲಾಂಟ್ ಅಲೋವೆರಾ, ಅರ್ಕಿಡ್, ಜತ್ರೇಪಾ, ಇನ್ನು ಅನೇಕ ಓಷಧಿ ಸಸ್ಯಗಳು ಇವರ ನರ್ಸರಿಯಲ್ಲಿವೆ.ಇವುಗಳ ಉಪಯೋಗ, ಗುಣಧರ್ಮ, ಸಂರಕ್ಷಣೆ ಬಗ್ಗೆ ನಿಖರ ಸೂಕ್ತ ಸಲಹೆ ಮಾರ್ಗದರ್ಶನ ಮಾಡುತ್ತಿರುವುದು ಇವರ ಸಸ್ಯ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರ ಪತ್ನಿ ತಸ್ಕಿನ್ ಡಾಂಗೆಯವರು ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತಂದೆ ನಿವೃತ್ತ ಶಿಕ್ಷಕರು ತಾಯಿ ಕೂಡಾ ಶಿಕ್ಷಕರಾಗಿದ್ದಾರೆ, ಇವರ ಉದ್ಯೋಗಕ್ಕೆ ಮನೆಯಲ್ಲಿ ಎಲ್ಲರೂ ಪ್ರೋತ್ಸಾಹ ಕೊಡುತ್ತಿದ್ದಾರೆ.
ನೌಕರಿಯಲ್ಲಿ ಗಳಿಸುವುದಕ್ಕಿಂತ ಸ್ವಂತ ಉದ್ದೋಗದಲ್ಲಿ ಆತ್ಮ ವಿಶ್ವಾಸದಿಂದ ದುಡಿದರೆ ಹೆಚ್ಚು ಹಣ ಗಳಿಸಬಹುದು ಅಲ್ಲದೆ ಸ್ವಂತ ಉದ್ಯೋಗದಲ್ಲಿ ಕೆಲಸ ಮಾಡುವ ಮಜಾನೇ ಬೇರೆ ಎನ್ನುತ್ತಾರೆ,ಅಲ್ಲದೆ ಇತ್ತಿಚಿನ ದಿನಗಳಲ್ಲಿ ಎಲ್ಲರೂ ತಮ್ಮ ಮನೆಗಳಿಗೆ ಗಾರ್ಡನ ರೂಪ ಕೊಡುತ್ತಿದ್ದ ಇದಕ್ಕೆ ನಮ್ಮ ನರ್ಸರಿ ಗಿಡಗಳಿಗೆ ಹೆಚ್ಚಿನ ಬೆಲೆ ಬರುತ್ತಿದೆ ಎಂದರು. ಆದ್ದರಿಂದ ಎಲ್ಲ ಯುವಕರು ಬರೀ ಸರ್ಕಾರಿ ನೌಕರಿಯನ್ನೆ, ಬೇರೆ ಕೆಲಸಗಳನ್ನು ನಂಬಿ ತಮ್ಮ ವಯಸ್ಸು, ಹಣ ಎರಡನ್ನು ಹಾಳು ಮಾಡಿಕೊಳ್ಳದೆ ಇರುವ ತಮ್ಮ ಪ್ರತಿಭೆಗಳನ್ನು ಬಳಸಿ ಉದ್ಯೋಗ ಮಾಡಿದರೆ ಖಂಡಿತವಾಗಿಯೂ ನಾವು ಯಶಸ್ಸು ಗಳಿಸಲು ಸಾಧ್ಯ ಎನ್ನುತ್ತಾರೆ ರಾಜು ಡಾಂಗೆ.