ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಮುದ್ದೇಬಿಹಾಳ: ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಯಾವುದೇ ಹಳ್ಳಿಗಳಲ್ಲಿ ನಾಲ್ಕು ಜನ ಕಾರ್ಯಕರ್ತ ಹೆಸರು ಕೂಡಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿಗೆದ್ದಿದ್ದು ಅವರ ದೈವ. ನಾವೆಲ್ಲರೂ ಸೇರಿಸಪೋರ್ಟ್ ಮಾಡಿದ್ದರಿಂದ ಅವರು ಶಾಸಕರಾಗಿದ್ದಾರೆ. ಈ ಬಾರಿನೂರಕ್ಕೆ ನೂರುಅವರು ಶಾಸಕರಾಗಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೆಳಿದರು.
ಬೆಂಗಳೂರಿನ ಕೆಪಿಸಿಸಿ ಕಾರ್ಯಲಯದಲ್ಲಿಕಾಂಗ್ರೆಸ್ ಪಕ್ಷದರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಚೀವ ಸಿ.ಎಸ್.ನಾಡಗೌಡ ಅಪ್ಪಾಜಿಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದುಕಾಂಗ್ರೆಸ್ ಪಕ್ಷವನ್ನು ಸೇರೆ್ಡಗೊಂಡು ನಂತರ ಸುದ್ದಿಗಾರರೊಂದಿಗೆಅವರು ಮಾತನಾಡಿದರು.
ಕಾರ್ಯಕರ್ತರು ಪಕ್ಷದ ಜೀವಾಳ. ಬಿಜೆಪಿಯ ಕಾರ್ಯಕರ್ತರನ್ನು ಎ.ಎಸ್.ಪಾಟೀಲರು ಮರೆತಕಾರಣಈ ಬಾರಿಯಚುನಾವಣೆಯಲ್ಲಿ ಸಿ.ಎಸ್.ನಾಡಗೌಡ ಅಪ್ಪಾಜಿಅವರನ್ನು ಅವರನ್ನು ಗೆಲ್ಲಿಸಲೇ ಬೇಕು ಎಂಬ ಹಟದಿಂದತಾಲೂಕಿನ ಬಹುತೇಕ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರೆ್ಡಯಾಗುತ್ತಿದ್ದೇವೆ. ಅನೇಕ ಜನ ಬಿಜೆಪಿಯ ಪ್ರಮುಖ ನಾಯಕರು, ಕಾರ್ಯರ್ತರು ಬಿಜೆಪಿಯ ಹೈಕಮಾಂಡ್ ಗೆ ಈ ಬಾರಿಯಚುನಾವಣೆಯಲ್ಲಿ ನಾವು ಪಕ್ಷದಲ್ಲಿಇದ್ದರೂ ಸಹಿತ ಪಕ್ಷಾತೀತವಾಗಿ ನಾಡಗೌಡರಿಗೆ ಬೆಂಬಲಿಸುವದಾಗಿ ಸ್ಪಷ್ಟವಾದ ಸಂದೇಶವನ್ನು ಕಳಿಸಿದ್ದಾರೆ.ನೂರಕ್ಕೆ ನೂರು ನಾಡಗೌಡರು ಈ ಬಾರಿ 15 ರಿಂದ 20 ಸಾವಿರ ಮತಗಳ ಅಂತರದಿಂದಗೆಲ್ಲುತ್ತಾರೆಎಂದರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಗುರು ತಾರನಾಳ, ಬಾಪುರಾಯ ದೇಸಾಯಿ,ಪ್ರಭುರಾಜ ಕಲಬುರ್ಗಿ, ಸುದೀರ ನಾವದಗಿ,ಮುತ್ತು ಕಡಿ,ರಾಯನ ಗೌಡತಾತ ರಡ್ಡಿ, ಪುರಸಭೆ ಸದಸ್ಯರಾದಅಲ್ಲಾಬಕ್ಷ ಢವಳಗಿ, ವಿರೇಶ ಹಡಲಗೇರಿ, ಮಾಜಿ ಸದಸ್ಯ ಕಾಮರಾಜ ಬಿರಾದಾರ, ರುದ್ದರಗೌಡ ಅಂಗಡಗೇರಿ, ವಿರೇಶ ಪಾಟೀಲ, ಸುರೇಶ ಪಾಟೀಲ,ಶ್ರೀಕಾಂತ ಚಲವಾದಿ ಸೇರಿದಂತೆ ಇತರರು ಇದ್ದರು.
ಬಾಕ್ಸ್ :
ಪ್ರಮುಖರಾದ ಸಿ.ಪಿ.ಸಜ್ಜನ, ಮಲ್ಲಣ್ಣ ಅಪರಾಧಿ, ಹುಲಗಪ್ಪ ನಾಯಕಮಕ್ಕಳ, ಬಹದ್ದೂರ ರಾಠೋಡ್, ಬಾಪೂಗೌಡ ಪೀರಾಪೂರ, ಚನ್ನಪ್ಪ ವಿಜಯಕರ, ಬಹದ್ದೂರ ರಾಠೋಡ್ ಸೇರಿದಂತೆ 60 ಕ್ಕೂ ಹೆಚ್ಚು ಮುಖಂಡರು ಬಿಜೆಪಿ ತೊರೆೆದು ಕಾಂಗ್ರೆಸ್ ಪಕ್ಷವನ್ನು ಸೇರೆ್ಡಯಾದರು.