ಹಗರಿಬೊಮ್ಮನಹಳ್ಳಿ

ಅಂಬೇಡ್ಕರ್ ಭವನದಲ್ಲಿ ಬುದ್ದನ ಕುರಿತು ಉಪನ್ಯಾಸ, ಕವನ ಸ್ಪರ್ಧೆ

ಅಂಬೇಡ್ಕರ್ ಭವನದಲ್ಲಿ ಬುದ್ದನ ಕುರಿತು ಉಪನ್ಯಾಸ, ಕವನ ಸ್ಪರ್ಧೆ

ಹಗರಿಬೊಮ್ಮನಹಳ್ಳಿ.ಮೇ.14 : ಜಿಜೆ ಸ್ಟಾರ್ ಸನ್ ಸಂಸ್ಥೆ ವಿಶ್ವ ಕಲಾ ಮಾನವ ಸಾಂಸ್ಕೃತಿಕ ವೇದಿಕೆ, ಸುಯೋಧನ ಪ್ರಕಾಶನ ಬಂಡಾಯ ಸಾಹಿತ್ಯ ಸಂಘಟನೆ,ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಬುಧ್ಧ ಪೂರ್ಣಿಮಾ ದಿನದ ಅಂಗವಾಗಿ ಡಾ.ಅಂಬೇಡ್ಕರ್ ಭವನದಲ್ಲಿ ಬುಧ್ಧನ ಶಾಂತಿಯ ನಾಡು/ವೈವಿಧ್ಯಮಯ ಭಾರತದ ಸೊಗಡು ಕುರಿತು ಕವನ ಸ್ಪರ್ಧೆ, ಕನ್ನಡ ಕಾವ್ಯದಲ್ಲಿ ಬುಧ್ಧ ಉಪನ್ಯಾಸ ಕಾರ್ಯಕ್ರಮ ನಡೆಯಿತು. 

ಈ ವೇಳೆ ಜಯಸೂರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಪ್ರಗತಿ ಹಾಗೂ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಅಕ್ಷರ ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯ, ಕನ್ನಡ ಬಾಷಾಭಿಮಾನ ಎಲ್ಲಾ ಕನ್ನಡಿಗರಲ್ಲೂ ಹುಟ್ಟಿನಿಂದ ಬಂದಿರುವಂತಹ ಅಂಶ ಅದನ್ನು ಸಾಹಿತ್ಯ ರೂಪದಲ್ಲಿ ಸಮಾಜಕ್ಕೆ ನೀಡುವ ಕಾರ್ಯವಾಗಬೇಕಿದೆ ಎಂದರು. 

ಕಾರ್ಯಕ್ರಮವನ್ನು ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿ ಈ ಭಾಗದಲ್ಲಿ ಸಾಹಿತ್ಯ, ಕಲೆ ವಿಭಾಗದಲ್ಲಿ ಗುರುತಿಸಿಕೊಂಡು ಬಂದಿದ್ದೇವೆ ಇನ್ನು ಮುಂದೆ  ಈ ಜವಾಬ್ದಾರಿಯನ್ನು ಇಂದಿನ ಯುವ ಪೀಳಿಗೆಯ ಹೆಗಲಿಗಿದೆ, ತಾಲೂಕಿನಲ್ಲಿರುವ ಸಾಹಿತ್ಯಾಸಕ್ತರ ಮಾರ್ಗದರ್ಶನದಲ್ಲಿ ಸಾಹಿತ್ಯವನ್ನು ಉಳಿಸಿ ಬೆಳಸಬೇಕಿದೆ ಹಾಗೂ ಸಾಹಿತ್ಯಾ ಬೆಳವಣಿಗೆಗೆ ಸಹಕಾರಿಯಾಗುವಂತಹ ಇಂತಹ ಕಾರ್ಯಕ್ರಮಗಳು ಆಗಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ಎಲ್ ಹಾಲ್ಯಾನಾಯ್ಕ್‌, ವಿಶಾಲ್ ಮ್ಯಾಸರ್ ಫ್ರಥಮ ಸ್ಥಾನ ಗಿಟ್ಟಿಸಿಕೊಂಡರೆ ಅನ್ನಪೂರ್ಣ ಬಾಗಲಕೋಟೆ, ಶ್ವೇತ ಬಿ ಕುರುಗೋಡು, ಕೊಟ್ರೇಶ್ ನಾಯ್ಕ್‌ ದ್ವಿತೀಯ ಸ್ಥಾನ ಪಡೆದರೆ, ರೇಣು ವಿರುಪಣ್ಣ ಗೌಡ ಬಳ್ಳಾರಿ, ವಿ ಕೀರ್ತನ ಹರಪನ ಹಳ್ಳಿ, ಪೂರ್ಣಿಮಾ ಹಗರಿಬೊಮ್ಮನಹಳ್ಳಿ ತೃತೀಯ ಸ್ಥಾನ ಪಡೆದುಕೊಂಡರು. 

ಮರಿಯಮ್ಮನಹಳ್ಳಿ ಚಂದ್ರಶೇಖರ್ ಉಪನ್ಯಾಸ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧಾ ಚಿದಾನಂದಗೌಡ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅಕ್ಕಿ ಬಸವೇಶ, ಕಸಾಪ ತಾಲೂಕು ಅಧ್ಯಕ್ಷ ಗೂಳೆಪ್ಪ ಹುಲಿಮನಿ, ಸಾಹಿತಿ ಜಯಮ್ಮ, ಕವಿ ಮೇಟಿ ಕೊಟ್ರ​‍್ಪ, ಜೆಜೆ ಸ್ಟಾರ್ ಸನ್ ಸಂಸ್ಥೆಯ ಅದ್ಯಕ್ಷ ದುರುಗಪ್ಪ, ಜನಪದ ಕಲಾ ತಂಡದವರಾದ ಮಹಾಂತೇಶ್, ಗೋವಿಂದ, ಹನುಮಂತ, ಸರ್ದಾರ ಹುಲಿಗೆಮ್ಮ ಇದ್ದರು. ನಾಗರಾಜ್ ಗಂಟಿ ನಿರೂಪಿಸಿದರೆ, ಪ್ರಿಯಾಂಕ ಪ್ರಾರ್ಥಿಸಿದರು, ಜಯಶ್ರೀ ಸ್ವಾಗತಿಸಿದರು, ಅಬ್ದುಲ್ ಸುಭಾನ್ ವಂದಿಸಿದರು. 


ಸುದ್ದಿ ಓದಿ