ಕಲಿಕಾ ಕಿಟ್ ವಿತರಣೆ
ಮಹಾಲಿಂಗಪುರ 28: ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಸ್ಕಿಲ್ ಇನ್ ವಿಲ್ಲೇಜ್ ವಿಶೇಷ ತರಬೇತಿಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕಾ ಸಲಕರಣೆಗಳ ಕಿಟ್ ವಿತರಿಸಲಾಯಿತು. ಪ್ರಾಚಾರ್ಯ ಡಿ.ಬಿ.ಕೋಳಿ, ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಮುಖ್ಯಶಿಕ್ಷಕಿ ಆರ್.ಎ.ಬನ್ನೂರ, ತರಬೇತಿ ಶಿಕ್ಷಕಿ ಭಾರತಿ ನಡುವಿನಮನಿ ಇದ್ದರು.