ವಕೀಲ ಮಲ್ಲಿಕಾರ್ಜುನ ಕೋರಿ ಮೇಲಿನ ಹಲ್ಲೆ ಖಂಡಿಸಿ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ
ರಾಯಬಾಗ 03 : ಅಥಣಿ ವಕೀಲ ಮಲ್ಲಿಕಾರ್ಜುನ ಕೋರಿ ಅವರಿಗೆ ಅಥಣಿ ಪಿ.ಎಸ್.ಐ ಉಪ್ಪಾರ ಮತ್ತು ಇತರೆ ಪೋಲಿಸ ಪೇದೆಗಳು ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವುದನ್ನು ರಾಯಬಾಗ ವಕೀಲರ ಸಂಘದ ಸದಸ್ಯರು ಖಂಡಿಸಿ, ಅಥಣಿ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಪಟ್ಟಣದ ಝೇಡಾ ಕಟ್ಟೆ ಹತ್ತಿರ ವಕೀಲರು ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ಅಥಣಿ ಪಿ.ಎಸ್.ಐ ಮತ್ತು ಪೇದೆಗಳ ಮೇಲೆ ಎಫ್‌ಐಆರ್ ಮಾಡುವಂತೆ ಪೋಲಿಸ ಮೇಲಾಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ಆರ್.ಎಚ್ ಗೊಂಡೆ, ಟಿ.ಕೆ ಶಿಂಧೆ, ಆರ್.ಎ.ಗೆನ್ನೆನ್ನವ್ವರ, ಎ.ಎಮ್.ಗೆಜ್ಜೆ, ಎಮ್.ಎಮ್.ಹೊಸಮನಿ, ಸುರಜ ಪಾಟೀಲ್,ಆರ್.ಎಸ್.ಹಳೆಪ್ಪಗೋಳ, ವಿ. ಬಿ.ಬಂಡಗರ, ಎ.ಕೆ.ಭಜಂತ್ರಿ, ವಿ ಕೆ. ಕುಲಕರ್ಣಿ, ನಿಖಿತಾ ಕಾಂಬಳೆ, ಎಮ್.ಎಮ್.ಪೋತದಾರ, ಎಸ್.ಬಿ.ಶಿರಗೊಂಡೆ ಸೇರಿ ಅನೇಕರು ಇದ್ದರು.
ಫೋಟೊ ಶೀರ್ಷಿಕೆ: ರಾಯಬಾಗ: ಅಥಣಿ ವಕೀಲ ಮಲ್ಲಿಕಾರ್ಜುನ ಕೋರಿ ಅವರಿಗೆ ಅಥಣಿ ಪಿ.ಎಸ್.ಐ ಉಪ್ಪಾರ ಮತ್ತು ಇತರೆ ಪೋಲಿಸ ಪೇದೆಗಳು ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವುದನ್ನು ರಾಯಬಾಗ ವಕೀಲರ ಸಂಘದ ಸದಸ್ಯರು ಖಂಡಿಸಿ, ಅಥಣಿ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ ಸಲ್ಲಿಸಿದರು.