ಶಿಗ್ಗಾವ್

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ 25: ಮನುಷ್ಯ ಜೀವನದ ಅಂತ್ಯದ ಕಾಲದಲ್ಲಿ ಶಿವನು ಮುಕ್ತಿ ನೀಡುವ ಜಾಗ ರುದ್ರಭೂಮಿಯಾಗಿದ್ದು, ಅಲ್ಲಿಯ ಪರಿಸರ ಸ್ವಚ್ಚವಾಗಿರಬೇಕು ಎಂಬ ಉದ್ದೇಶದಿಂದ ರುದ್ರಭೂಮಿಯ ಅಭಿವೃದ್ದಿಯ ಜೊತೆಗೆ ಭಾರತ ಸೇವಾ ಸಂಸ್ಥೆಯು ಪಟ್ಟಣದ ವಿವಿಧ ಮುಖಂಡರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯ ಮಾಡುತ್ತಿರುವುದು ಭಾರತ ಸೇವಾ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ತಿಳಿಸುತ್ತದೆ ಎಂದು ಹಿರೇಮಣಕಟ್ಟಿಯ ಮುರುಘೇಂದ್ರ ಮಠದ ವಿಶ್ವಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಹೊರವಲಯದ ಹಿಂದೂ ರುದ್ರಭೂಮಿಯಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜನರಿಗೆ ಸದುಪಯೋಗವಾಗುವ ಕಾರ್ಯಗಳು ಬಹುಮುಖ್ಯ, ಸಂಪತ್ತಿನ ಮದದಲ್ಲಿ ಎಲ್ಲಿಯೋ ಹಣ ವ್ಯರ್ಥ ಮಾಡುವವರ ಮದ್ಯ ಜನೋಪಯೋಗಿ ಕಾರ್ಯಗಳನ್ನು ಮಾಡಿದರೆ ದೇವರ ಪ್ರಾಪ್ತಿ ಮತ್ತು ಜನರ ಏಳಿಗೆ ಸಾದ್ಯವಿದೆ, “ಸಿರಿಬಂದ ಕಾಲಕ್ಕೆ ಕರೆದು ಧಾನವ ಮಾಡು” ಎಂಬ ಶರಣರ ಮಾತಿನಂತೆ ತಮ್ಮ ಸಂಪತ್ತಿನ ಭಾಗವನ್ನು ಜೀವನದ ಒಂದು ಭಾಗವಾದ ರುದ್ರಭೂಮಿಯ ಅಭಿವೃದ್ದಿಗೆ ಮತ್ತು ಅಲ್ಲಿಯ ಪರಿಸರ ಖಾಳಜಿಗೆ ಸಂಸ್ಥೆಯ ಅದ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ ಅವರು ಮಾಡುತ್ತಿದ್ದಾರೆ ಇಂತವರಿಗೆ ಜನರು ಅದಿಕಾರ ನೀಡಬೇಕು ಅವರು ಜನ ಸೇವೆಯಲ್ಲಿ ಇರಬೇಕು ಎಂದು ಆಶಿಸಿದರು.  

ಭಾರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ರುದ್ರಭೂಮಿಯ ಉತ್ತಮ ಪರಿಸರಕ್ಕಾಗಿ ಪಣ ತೊಡಲಾಗಿದೆ, ರುದ್ರಭೂಮಿಯಲ್ಲಿ ಸ್ವಚ್ಚತೆಯ ಜೊತೆಗೆ ಇಲ್ಲಿ ಪೂಜಾ ಕಾರ್ಯಕ್ಕೆ ಬರುವ ಜನರಿಗೆ ಜೊತೆಗೆ ನಮ್ಮ ಅಕ್ಕ ತಂಗಿಯರಿಗೆ ಉತ್ತಮ ಪರಿಸರವನ್ನು ನೀಡಬೇಕೆಂಬ ಉದ್ದೇಶದಿಂದ ಪೂಜಾ ಕಾರ್ಯಕ್ಕೆ ಪತ್ರಿಗಿಡ ಮತ್ತು ಬನ್ನಿಗಿಡಗಳು ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಗುತ್ತಿದೆ ಇದಕ್ಕೆ ಪೂಜ್ಯರ ಆಶೀರ್ವಾದ ಹಾಗೂ ಪಟ್ಟಣದ ಗುರುಹಿರಿಯರ ಸಹಕಾರ ಮುಖ್ಯವಾಗಿದೆ ಎಂದರು.  

ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿದ್ಯ ವಹಿಸಿದ್ದರು, ರುಧ್ರಭೂಮಿ ಅಭಿವೃದ್ದಿ ಸೇವಾ ಸಮೀತಿಯ ಅಧ್ಯಕ್ಷ ಜಗದೀಶ ಯಲಿಗಾರ, ಕಾರ್ಯದರ್ಶಿ ಮಾಲತೇಶ ಯಲಿಗಾರ, ಮುಖಂಡರಾದ ಫಕ್ಕೀರಜ್ಜಾ ಯಲಿಗಾರ, ಫಕ್ಕೀರಾ​‍್ಪ ಕುಂದೂರ, ಬಸವರಾಜ ಹಾವೇರಿ, ಶಂಕರಗೌಡ ಪಾಟೀಲ, ರಮೇಶ ವನಹಳ್ಳಿ, ಸುರೇಶ ಹರಿಗೊಂಡ, ಆರ್ ಎಸ್ ಪಾಟೀಲ, ಈರಣ್ಣಾ ಬಡ್ಡಿ, ಅಶೋಕ ಕಾಳೆ, ಭರಮಜ್ಜ ನವಲಗುಂದ, ಮಂಜುನಾಥ ಯಲಿಗಾರ, ಶಂಬಣ್ಣಾ ಹಾವೇರಿ, ಶಶಿಧರ ಯಲಿಗಾರ, ಚನ್ನಪ್ಪಾ ಮೋಟೆಪ್ಪನವರ, ಶಿವಪ್ಪಾ ಗಂಜಿಗಟ್ಟಿ, ರುದ್ರಗೌಡ, ಪ್ರಶಾಂತ ಬಡ್ಡಿ, ಚಂದ್ರು ಜವಳಿ, ಶಿವಾನಂದ ಹೊಸಮನಿ, ರವಿ ಮಾಡಿವಾಳರ, ಮುತ್ತು ಯಲಿಗಾರ, ಪ್ರತೀಕ ಕೋಳೆಕಾರ, ವಿಶ್ವನಾಥ ಗಾಣಗೇರ, ನವೀನ ಸಾಸನೂರ ಸೇರಿದಂತೆ ಸಮೀತಿ ಸದಸ್ಯರು, ಭಾರತ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಪಟ್ಟಣದ ವಿವಿಧ ಮುಖಂಡರು ಇದ್ದರು. 

ತಾಲೂಕಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಭಾರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರ ಕಾರ್ಯ ಮಾದರಿ ಕಾರ್ಯವಾಗಿದೆ, ಅಂಥವರಿಗೆ ಜನರು ಪ್ರೋತ್ಸಾಹ, ಅಧಿಕಾರ ನೀಡಬೇಕು, ಅವರು ಮಾಡಿರುವ ಕಾರ್ಯಗಳ ಆಧಾರದ ಮೇಲೆ ಜನತೆ ನೀರೀಕ್ಷೆಯನ್ನು ಇಟ್ಟುಕೊಂಡಿದ್ದು ನಮ್ಮ ಸಮಾಜ ಸುಖವಾಗಿರಬೇಕಾದರೆ ಇಂಥವರ ಸೇವೆಯನ್ನು ಜನತೆಯೂ ಗುರುತ್ತಿಸುತ್ತಾರೆ ಸಮಾಜಕ್ಕೂ ಒಳ್ಳೆಯದಾಗುತ್ತದೆ ಜೊತೆಗೆ ತಾಲೂಕು ಅಭಿವೃದ್ದಿಯಾಗುತ್ತದೆ.  

ವಿಶ್ವಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು 

ಮುರುಗೇಂದ್ರಮಠ ಹಿರೇಮಣಕಟ್ಟಿ 


ಸುದ್ದಿ ಓದಿ