ನಗುವುದರಿಂದ ಆಯುಷ್ ವೃದ್ದಿ ಸಾಧ್ಯ- ಗೋವಿಂದೆಗೌಡ
ಜೆ.ಸಿ ಶಾಲೆಯಲ್ಲಿ ಮಕ್ಕಳೊಂದಿಗೆ ಮಗುವಾದ ಕಾಮಿಡಿಕಿಂಗ್ ಗೋವಿಂದೆಗೌಡ
ಮಹಾಲಿಂಗಪುರ 21: ಎಲ್ಲರ ಜೀವನದಲ್ಲಿ ತೊಂದರೆಗಳು ಇದ್ದೆ ಇವೆ ಆದರೆ ಮನುಷ್ಯನು ನಗು ನಗುತ್ತಿದ್ದರೆ ಅವನ ಆಯುಷು ವೃದ್ದಿಯಾಗುವುದರಲ್ಲಿ ಯಾವ ಸಂದೇಹವಿಲ್ಲ ಕಾರಣ ದಿನಕ್ಕೆ 20 ನಿಮಿಷಗಳಾದರೂ ಎಲ್ಲರು ನಗುವುದನ್ನು ರೂಡಿಸಿಕೊಳ್ಳಿ ಎಂದು ಖ್ಯಾತ ಜೀ ಟಿವಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ್ ಗೋವಿಂದೆಗೌಡ ್ಲ ಜಿ.ಜಿ.್ವ ಹೇಳಿದರು.
ಸ್ಥಳೀಯ ಜೆ.ಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ಕಲಾವಿದರಿಗೆ ನಿಮ್ಮ ಚಪ್ಪಾಳೆ ಮತ್ತು ಸಿಳ್ಳೆಗಳೆ ಪ್ರೇರಣೆ, ಕಲೆ ಎಂದು ಯಾರ ಸೊತ್ತಲ್ಲ, ಕಲಾವಿದರಿಗೆ ಪ್ರೇಕ್ಷಕರೆ ಜೀವಾಳ, ನಮ್ಮ ನಿತ್ಯ ಜೀವನದಲ್ಲಿ ಎಷ್ಟೆ ತೊಂದರೆಗಳು, ಕಷ್ಟ ಕಲಾಪಗಳಿದ್ದರು ನಾವು ವೇದಿಕೆ ಮೇಲೆ ಬಂದ ತಕ್ಷಣ ಅವುಗಳೆಲ್ಲ ಮಾಯವಾಗುವುದು ನಿಮ್ಮ ನಗುಮುಖನೋಡಿದಾಗ ಮಾತ್ರ. ನಾನು ಕೂಡಾ ನಿಮ್ಮ ಹಾಗೆ ಶಾಲೆಯಲ್ಲಿಯೇ ನನ್ನ ನಾಟಕ ಪ್ರದರ್ಶನವನ್ನು ಮಾಡುತ್ತಲೆ ಬೆಳೆದುಬಂದವನು. ನಾನುಕೂಡ ಹಳ್ಳಿಯಿಂದಲೇ ನನ್ನ ಕಲಾ ಸೇವೆ ಪ್ರಾರಂಬಿಸಿ ಜನರ ಮೆಚ್ಚುಗೆ ಮತ್ತು ಚಿತ್ರ ನಟ ಜಗ್ಗೇಶ, ಸಂಗೀತ ನಿಧೇರ್ಶಕ ಯೋಗರಾಜ ಬಟ್ ರ ಅನುಗ್ರಹದಿಂದ ನಾನು ಚಿತ್ರರಂಗ ಸೇರುವಂತಾಗಿದೆ. ಅಷ್ಟೆ ಅಲ್ಲದೆ ದೊಡ್ಡ ದೊಡ್ಡ ನಟರೊಂದಿಗೆ ನಾನು ಅನೇಕ ಚಿತ್ರಗಳನ್ನು ಮಾಡಿದ್ದೇನೆ. ಇದಕ್ಕೆಲ್ಲ ನಿಮ್ಮಂತ ಕಲಾ ಪ್ರೋತ್ಸಹಕರೆ ಕಾರಣ, ಇಲ್ಲಿ ಜನರ ಒತ್ತಾಯದ ಮೇರೆಗೆ ಹಾಗೂ ನನ್ನ ಅಣ್ಣ ನಾರಾಣಗೌಡ ಉತ್ತಂಗಿಯವರ ಬಹುದಿನಗಳ ಆಸೆಯ ಮೇರೆ ಈ ವರ್ಷ ನಾನು ಶ್ರೀ ಮಹಾಲಿಂಗೇಶ್ವರ ಜಾತ್ರೆಯಲ್ಲಿ ನಮ್ಮ ರಸ್ ಮಂಜರಿ ಕಾರ್ಯಕ್ರಮ ನಡೆಸಲು ಅನುವಾಗಿದೆ. ಕಾರಣ ಯಾವುದೇ ಕಲಾವಿದರನ್ನು ಪ್ರೋತ್ಸಾಹಿಸುವ, ಗೌರವಿಸುವ ನಿಮ್ಮಂತ ಜನರ ಆಶಿರ್ವಾದ ನಮ್ಮ ಮೇಲಿರುವ ತನಕ ನಮ್ಮ ಕಲಾ ಸೇವೆ ಹೀಗೆ ಮುಂದುವರೆಯುವುದು ಎಂದರು.
ನಂತರ ಮಾತನಾಡಿದ ಜೆ.ಸಿ ಶಾಲೆಯ ಉಪಾಧ್ಯಕ್ಷರಾದ ಶಿವಾನಂದ ತಿಪ್ಪಾ ಮಾತನಾಡಿ ಕಲಾವಿದರು ಎಷ್ಟೆ ದೊಡ್ಡವರಾದರು ಕಲಿತ ಊರು, ಕಲಿತ ಶಾಲೆಯನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಜೀ ಟಿ.ವ್ಹಿ. ಕಲಾವಿದರಾದ ಗೋವಿಂದೆಗೌಡರ ಸಾಧನೆ ಬೇರೆಯೊಬ್ಬರಿಗೆ ಮಾದರಿಯಾಗಲಿ, ಅತಿ ಸಣ್ಣ ಕುಟುಂಬದಿಂದ ಬಂದಿದ್ದರು ಅವರಲ್ಲಿರುವ ಮನೋಭಾವ ಎಲ್ಲರೊಂದಿಗೆ ನಡೆದುಕೊಳ್ಳವ ಮೃದು ಸ್ವಭಾವ ಬೇರೆ ಕಲಾವಿದರಿಗೆ ಮಾದರಿಯಾಗಲಿ ಇಂಥ ಕಲಾವಿದರ ಅಣ್ಣ ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಎಂದರೆ ನಮಗೆ ಇದಕ್ಕಿಂತ ಹೆಮ್ಮೆ ಸಂಗತಿ ಬೇರೊಂದಿಲ್ಲ ಎಂದರು.
ಜೆ.ಸಿ ಶಾಲೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮತ್ತು. ಸಿಬ್ಬಂದಿ ಜೀ ಟಿ.ವಿ ಕ್ಯಾತಿಯ ನಟ ಗೋವಿಂದೆಗೌಡ ಮತ್ತು ನಟಿ ದಿವ್ಯೆಶ್ರೀಯವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾದ್ಯಾಯ ಎಸ್.ಜಿ ಕೌಜಲಗಿ, ಎನ್.ಎಂ ನಾಡಗೌಡ್, ಎಂ.ಎಸ್. ಕೊಪ್ಪ, ಉಮೇಶ ಬಾಗಲಕೋಟೆ, ಐ.ಎಂ ಬಡಿಗೇರ, ಎಸ್.ಬಿ ಸುತಾರ, ಸೌರಭ ಮಹಾಜನ್, ಕಲ್ಮೇಶ ಮಟಗಾರ, ಶಾರದಾ ಮನ್ನಯ್ಯನವರಮಠ, ಸುಜಾತಾ ಹೊಸಕೇರಿ, ಶಮಾ ಗಲಗಲಿ, ಪ್ರೇಮಾ ಕರ್ಜಗಿ, ಬಾನು ಕೆ.ಎಂ. ಪ್ರೀತಿ ಕಲ್ಯಾಣಿ, ತೃಪ್ತಿ ಕುಳ್ಳೋಳ್ಳಿ, ಲಕ್ಷ್ಮೀ ಕುಳ್ಳೋಳ್ಳಿ, ಗಾಯತ್ರಿ ಹುಂಬಿ. ಸರಸ್ವತಿ ಚನಪನ್ನವರ, ತೇಜಸ್ವೀನಿ ವಜ್ರಮಟ್ಟಿ, ದೀಪಾ ಬಡಿಗೇರ, ಶಬಾನಾ ಮುಂಡಗನೂರ, ವೀಣಾ ಹಡಪದ, ಮುತ್ತು ಅಂಗಡಿ, ಪಾರ್ವತಿ ಚನಪನ್ನವರ, ಗೀರಿಜಾ ಸೊನ್ನದ ಸೇರಿದಂತೆ ಹಲವರು, ಕಾರ್ಯಕ್ರಮವನ್ನು ನಾರಾಣಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು.