ಹಗರಿಬೊಮ್ಮನಹಳ್ಳಿ

ಉಪಾಧ್ಯಕ್ಷರಾಗಿ ಲತಾ ರಾಜಕುಮಾರ್ ಅವಿರೋಧ ಆಯ್ಕೆ

ಉಪಾಧ್ಯಕ್ಷರಾಗಿ ಲತಾ ರಾಜಕುಮಾರ್ ಅವಿರೋಧ ಆಯ್ಕೆ


ಲೊಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 23:  ತಾಲೂಕಿನ ಕಡಲಬಾಳು ಗ್ರಾಮ ಪಂಚಾಯತಿ ಉಪಾಧ್ಯಾಕ್ಷರ ಸ್ಥಾನಕ್ಕೆ ಲತಾ ರಾಜಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನೆಡದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಮಹಿಳೆ ಮಿಸಲಾಗಿದ್ದ ಉಪಾಧ್ಯಕ್ಷೆ ಸ್ಥಾನಕ್ಕೆ  ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಹೊಸ ಆನಂದದೇವನಹಳ್ಳಿ 6ನೇ ವಾರ್ಡ್‌ ಗ್ರಾಮ ಪಂಚಾಯತಿ ಸದಸ್ಯೆ ಲತಾ ರಾಜಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಶರಣಮ್ಮ ತಿಳಿಸಿದರು.                                  

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಲವಾದಿ ರಮೇಶ್, ಬಿಜೆಪಿ ಪಕ್ಷದ ತಾಲೂಕ ಪ್ರಧಾನ ಕಾರ್ಯದರ್ಶಿ ಮುಖಂಡ ಬ್ಯಾಟಿ ನಾಗರಾಜ ಮಾತನಾಡಿದರು. ಗ್ರಾ.ಪಂ ಸದಸ್ಯರಾದ ಕೆ.ಸಂತೋಷ, ದೊಡ್ಡಬಸವರಾಜ ಹೆಚ್, ಓ ವಿರುಪಣ್ಣ, ಶಾಂಭವಿ ವಿಶ್ವನಾಥ, ಎಂಎಂ ಅನ್ನಪೂರ್ಣ, ಸುನೀತಾ ಜ್ಞಾನೇಶ್, ಬ್ಯಾಟಿ ಅನ್ನಪೂರ್ಣಮ್ಮ, ಸಿ.ಶಾಂತ ನಾಗರಾಜ, ಮುಖಂಡರಾದ ಬಾರಿಕರ ನಾಗರಾಜ, ಮಂಜುನಾಥ ಗೌಡ್ರು, ಕೊಟ್ರಗೌಡ್ರು, ಬಸವರಾಜ, ಕೆ.ಮಂಜುನಾಥ, ಅರುಣಕುಮಾರ್, ವಿಶ್ವನಾಥ, ಬಿ,ಬಸವರಾಜ, ಜಿ ಬಸವರಾಜ, ಪಿಡಿಒ ಚನ್ನನಾಯ್ಕ, ಕಾರ್ಯದರ್ಶಿ ರೇವಣ್ಣ, ಗ್ರಾಮಲೆಕ್ಕಾಧಿಕಾರಿ ಗುರುಬಸವರಾಜ, ಮಂಜುನಾಥ ನಾಗರಾಜ ಇತರರು ಇದ್ದರು. 


ಸುದ್ದಿ ಓದಿ