ಮಹಲಿಂಗಪುರ

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ತೇರದಾಳ ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ 

ಮಹಾಲಿಂಗಪುರ 18: ಪಟ್ಟಣದ ಪಿಡಿ ಬುದ್ನಿ, ವಿಜಯಲಕ್ಷ್ಮಿ ನಗರ, ಬಸವನಗರ ಬಡಾವಣೆಗಳಲ್ಲಿ ತೇರದಾಳ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷರೂ ಆದ ಸಿದ್ದು ಸವದಿಯವರು ಸೋಮವಾರ ಭೂಮಿ ಪೂಜೆ ಮಾಡುವುದರ ಮೂಲಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. 

ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ, ಚರಂಡಿ ಇನ್ನಿತರ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿಯ ಧುರೀಣರಾದ ಬಸನಗೌಡ ಪಾಟೀಲ, ಶೇಖರ ಅಂಗಡಿ, ಜಿ.ಎಸ್‌.ಗೊಂಬಿ, ರವಿ ಜವಳಗಿ, ಶಿವಲಿಂಗ ಘಂಟಿ, ಹನುಮಂತ ಜಮಾದಾರ, ಶಿವಾನಂದ ಅಂಗಡಿ, ರಾಜು ಚಮಕೇರಿ, ಚೆನ್ನಪ್ಪ ರಾಮೋಜಿ, ಅನಿಲ ಮಮದಾಪುರ, ಚೆನ್ನಪ್ಪ ಪಟ್ಟಣಶೆಟ್ಟಿ, ಶ್ರೀಶೈಲ ಹಿಪ್ಪರಗಿ, ಪ್ರಶಾಂತ ಮುಖ್ಯನವರ, ರಮೇಶ ಕೆಸರಗೊಪ್ಪ, ಮಹಾದೇವ ಮೀರಾಪಟ್ಟಿ, ಬಸಪ್ಪ ಇಂಗಳಗಿ, ಗುತ್ತಿಗೆದಾರ ವಿಜಯ ಭಜಂತ್ರಿ ಮತ್ತು ಮುಖ್ಯಾಧಿಕಾರಿ ಎಚ್‌.ಎಸ್ ಚಿತ್ತರಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ