ಹಗರಿಬೊಮ್ಮನಹಳ್ಳಿ

ವಿವಿಧ ಕಾಮಗಾರಿಗಳಿಗೆ ಶಾಸಕ ಭೀಮನಾಯ್ಕ್‌ ಭೂಮಿ ಪೂಜೆ

ವಿವಿಧ ಕಾಮಗಾರಿಗಳಿಗೆ ಶಾಸಕ ಭೀಮನಾಯ್ಕ್‌ ಭೂಮಿ ಪೂಜೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 02: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ಸಿಸಿ ರಸ್ತೆ ಹಾಗೂ ಚರಂಡಿ ಸೇರಿದಂತೆ ಮುಖ್ಯ ರಸ್ತೆಯ ಅಗಲೀಕರಣದ 4ಕೋಟಿ 20ಲಕ್ಷದ ಭೂಮಿ ಪೂಜೆಗೆ  ಶಾಸಕ ಎಸ್‌.ಭೀಮಾನಾಯ್ಕ್‌ ಮಂಗಳವಾರ ಚಾಲನೆ ನೀಡಿದರು. 


ನಗರದ ಪೋಲೀಸ್ ವಸತಿ ಗೃಹಗಳ ಬಳಿ ಭೂಮಿ ಪೂಜೆಗೆ ಚಾಲನೆ ನೀಡಿ ಮಾತನಾಡಿ ಎಸ್‌ಸಿಪಿ, ಟಿಎಸ್‌ಪಿಯಲ್ಲಿ ತಲಾ ಒಂದು ಕೋಟಿಯಲ್ಲಿ 6ವಾರ್ಡ್‌ಗಳಿಗೆ  ತಲಾ 25ಲಕ್ಷದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಹಾಗೂ 12ನೇ ವಾರ್ಡ್‌ಗೆ 50ಲಕ್ಷದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಲಾಗುವುದು, ಮೈನಿಂಗ್ ಫಂಡ್‌ನಲ್ಲಿನ 2ಕೋಟಿ20 ಲಕ್ಷದಲ್ಲಿ ರಾಮನಗರ ವೃತ್ತದಿಂದ ಸಾರ್ವಜನಿಕ ಆಸ್ಪತ್ರೆಯ ವರೆಗೆ 60ಅಡಿಗಳ ರಸ್ತೆ, ದೀಪ, ಸೇರಿದಂತೆ ರಸ್ತೆ ಡಿವೈಡರ್ ನಿರ್ಮಾಣ ಮಾಡಲಾಗುವುದು, ಮಾರ್ಚ್‌ನಲ್ಲಿ ಕೆಲಸ ಮುಗಿಸಲಾಗುವುದು, ಪಟ್ಟಣದ ಸಂಪೂರ್ಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡತ್ತಿದ್ದೆವೆ, ಹಾಲಸ್ವಾಮಿ ಮಠ, ಕೂಡ್ಲಗಿ ರಸ್ತೆ, ಎಪಿಎಂಸಿ ಸೇರಿದಂತೆ ವಿವಿಧ ಮುಖ್ಯ ರಸ್ತೆಗಳ ಅಗಲೀಕರಣ ಮಾಡುತ್ತಿದ್ದೆವೆ. ನಗರ ಸಭೆ,ಪಟ್ಟಣ ಪಂಚಾಯತಿ, ಪುರಸಭೆಯ ನಡೆದ ಚುನಾವಣೆಗಳು ನಡೆದಿವೆ ಅದಕ್ಕೆ ಮೀಸಲಾತಿ ನೀಡುವುದರಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ, ಮೀಸಲಾತಿ ಪ್ರಕಟವಾದರೆ ಅಧಿಕಾರಿಗಳು ಸೂಕ್ರ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತಾರೆ ಇಲ್ಲವೆಂದರೆ ಮದ್ಯವರ್ತಿಗಳ ಮೂಲಕ ಕೆಲಸಗಳು ಆಗುತ್ತಿವೆ ಎಂದು ಪುರಸಭೆ ಸದಸ್ಯರ ವಾದವು ಆಗಿದೆ. ಸರ್ಕಾರಕ್ಕೆ ಸಂವಿಧಾನದ ಮೇಲೆ ಗೌರವವಿಲ್ಲದಂತಾಗಿದೆ.ಅಭಿವೃಧ್ಧಿ ಬಗ್ಗೆ ಕಾಳಜಿ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುಧ್ಧ ಕಿಡಿಕಾರಿದರು. 


ಈ ಸಂಧರ್ಭಧಲ್ಲಿ ಪುರಸಭೆ ಸದಸ್ಯರಾದ ಮರಿರಾಮಪ್ಪ, ಪವಾಡಿ ಹನುಮಂತಪ್ಪ, ಗಣೇಶ್ ಲಮಾಣೀ, ನೆಲ್ಲು ಇಸ್ಮಾಯಿಲ್, ಮಂಜುಳಾ ನಾಯ್ಕ್‌, ಮುಖಂಡರಾದ ಅಕ್ಕಿ ತೋಟೇಶ್, ಸೆರೆಗಾರ ಹುಚ್ಚಪ್ಪ, ಹಾಲ್ದಾಳ್ ವಿಜಯಕುಮಾರ, ಮುಟುಗನ ಹಳ್ಳಿ ಕೊಟ್ರೇಶ್, ಅಂಬಾಡಿ ನಾಗರಾಜ, ಡಿಶ್ ಮಂಜುನಾಥ್, ಹೆಗ್ಡಾಳ್ ರಾಮಣ್ಣ, ಚಿಂತ್ರಪಳ್ಳಿ ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಪುರುಷೋತ್ತಮ, ಪುರಸಭೆ ಅಭಿಯಂತರ ಮಂಜುನಾಥ್, ಜೆಸ್ಕಾಂನ ಪಕ್ಕಿರ​‍್ಪ ಗುತ್ತಿಗೆದಾರರಾದ ದೊಡ್ಡಬಸಪ್ಪ, ತಿರುಮಲೇಶ್,ಕೇಶವರೆಡ್ಡಿ, ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ