ನಗರದ 76 ಮನೆಗಳಿಗೆ ಪ್ರಧಾನಿ ನಮೋ ಹುಟ್ಟುಹಬ್ಬದ ಪ್ರಯುಕ್ತ ದೀಪ ವಿತರಣೆ
ಬೆಳಗಾವಿ 17: ಹರೆಯದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದೀಜೀ ಅವರ ಹುಟ್ಟು ಹಬ್ಬದ ನಿಮಿತ್ತ ಸಕಲ ಸಜ್ಜನರ, ತಾಯಂದಿರ, ಹಿರಿಯರ ಆಶೀರ್ವಾದ ಅವರ ಮೇಲಿರಲಿ ಎಂಬ ಅಭಿಲಾಷೆಯಿಂದ ದಿ. ದಿ. 17 ರಂದು ಸಂಜೆ ಆಶೀರ್ವಾದದ ದೀಪವನ್ನು ಬೆಳಗಿ ನಮ್ಮ ಪ್ರಧಾನ ಸೇವಕರಿಗೆ ಶುಭ ಕೋರಿರಿ ಎಂದು ವಿನಂತಿಸಿ ಬೆಳಗಾವಿಯಲ್ಲಿ 76 ಮನೆಗಳಿಗೆ ದೀಪಗಳನ್ನು ವಿತರಿಸಲಾಯಿತು. ಈ ಸುಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ,ಉಪ ಮಹಾಪೌರರಾದ ಹಣಮಂತ ಕೊಂಗಾಲಿ , ಪಕ್ಷದ ಪದಾಧಿಕಾರಿಗಳು ಹಾಗೂ ಬಡಾವಣೆಯ ಪ್ರಮುಖರಾದ ಸಂತೋಷ ದೇಸಾಯಿ , ಬಸವರಾಜ ವರಜಣ್ಣವರ, ಶಶಿಕಾಂತ ಬಾಡಕರ, ಸಂತೋಷ, ಹೂಗಾರ,ನವೀನ ಹಿರೇಮಠ , ಈರಣ್ಣ ಅಂಗಡಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.