ಪರಿಷತ್ ಸದಸ್ಯತ್ವ, ಬಿಜೆಪಿಗೆ ರಾಜೀನಾಮೆ ನೀಡಲು ಬೆಂಗಳೂರಿಗೆ ಹಾರಿದ ಲಕ್ಷ್ಮಣ ಸವದಿ : ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ ಸಾಥ್

ಪರಿಷತ್ ಸದಸ್ಯತ್ವ, ಬಿಜೆಪಿಗೆ ರಾಜೀನಾಮೆ ನೀಡಲು ಬೆಂಗಳೂರಿಗೆ ಹಾರಿದ ಲಕ್ಷ್ಮಣ ಸವದಿ : ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ ಸಾಥ್

ಬೆಳಗಾವಿ : ಬಿಜೆಪಿ ಪಕ್ಷದಿಂದ ಅಥಣಿ ಕ್ಷೇತ್ರಕ್ಕೆ ಟಿಕೆಟು ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ತಿರುಗಿಬಿದ್ದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ರವಾನೆಯಾಗಿದ್ದು, ಅವರ ಜೊತೆ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಾಥ್ ನೀಡಿದ್ದಾರೆ. 

   ಶುಕ್ರವಾರ ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಪ್ರಯಾಣ ಬೆಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತೆರೆಮೆರೆಯಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದ ಸವದಿ ಅವರು ಟಿಕೆಟು ಕೈ ತಪ್ಪಿ ಶಾಸಕ ಮಹೇಶ ಕುಮಠಳ್ಳಿ ಅವರ ಪಾಲು ಆಗಿರುವದರಿಂದ ಬಿಜೆಪಿ ಪಕ್ಷಕ್ಕೆ ಬೈ ಬೈ ಹೇಳಲು ಮುಂದಾಗಿದ್ದಾರೆ. 

ಬಿಜೆಪಿ ಹಂಗಿನಿಂದ ಹೊರಬರುವೆ : ಚನ್ನರಾಜ್ ನೊಂದಿಗೆ ಬೆಂಗಳೂರಿಗೆ ಹೊರಟ ಸವದಿ 

   ಬೆಳಗಾವಿ : ಬಿಜೆಪಿ ಹಂಗಿನಿಂದ ಮೊದಲು ಹೊರ ಬರಬೇಕು. ಕಾಂಗ್ರೆಸ್ ಅಥವಾ ಜೆಡಿಎಸ್ ಇರಬಹುದು. ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಇಂದು ಅಥವಾ ನಾಳೆ ಸಂಜೆಯೊಳಗೆ ತೀರ್ಮಾನಕ್ಕೆ ಬರುತ್ತೇನೆ. ಏ. 18 ರಂದು ನಾಮಪತ್ರ ಸಲ್ಲಿಸುವೆ ಎಂದು ಲಕ್ಷ್ಮಣ ಸವದಿ ತಮ್ಮ ರಾಜೀನಾಮೆ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

   ಬಿಜೆಪಿ ತೊರೆಯುವ ತಮ್ಮ ನಿರ್ಧಾರದ ಕುರಿತು ಅವರು ಮಾತನಾಡಿ, ಈ ಬಗ್ಗೆ ಆಪ್ತರೊಂದಿಗೆ ಎಲ್ಲಾ ಸಾಧಕ- ಬಾದಕ ಚರ್ಚಿಸುವೆ. ಮೊದಲು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಕೊಡಬೇಕು ಎಂದು ಹೇಳಿದರು.ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರೊಂದಿಗೆರಾಜೀನಾಮೆ ಪತ್ರದೊಂದಿಗೆ ಲಕ್ಷ್ಮಣ ಸವದಿ ಅವರು ಇದೀಗ ಬೆಳಗಾವಿಯಿಂದ ಬೆಂಗಳೂರು ವಿಮಾನ ಏರಿದ್ದಾರೆ.

ಸುದ್ದಿ ಓದಿ