ಬಿಜೆಪಿಗೆ ಗುಡ್ಬೈ ಹೇಳಿದ ಲಕ್ಕೊಳ್ಳಿಯ ಮುಖಂಡರು; ಕಾಂಗ್ರೆಸ್ ಸೇರೆ್ಡ
ಲೋಕದರ್ಶನ ವರದಿ
ಮುಂಡಗೋಡ 28 : ತಾಲೂಕಿನ ಚೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ಕಿಳ್ಳಿಕ್ಯಾತರ, ಮುಖಂಡರಾದ ನಾಗಪ್ಪ ವಡ್ಡರ, ಯುವ ಮುಖಂಡ ಅರ್ಜುನ್ ವಡ್ಡರ ಹಾಗೂ ರಾಜು ದೇಶಳ್ಳಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಯಾದರು.ಲಕ್ಕೊಳ್ಳಿ ಗ್ರಾಮದ ಮುಖಂಡ ಪಾಂಡುರಂಗ ಪವಾರ್ ಅವರ ಮುಂದಾಳತ್ವದಲ್ಲಿ ನಡೆದ ಸೇರೆ್ಡ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಯುವ ಮುಖಂಡ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಹಾಗೂ ಪಕ್ಷದ ಹಿರಿಯ ಮುಖಂಡ ಎಚ್.ಎಂ. ನಾಯ್ಕ್ ಅವರು ಪಕ್ಷದ ಶಾಲು ಹೊದಿಸಿ ನೂತನ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವೈ.ಪಿ. ಭುಜಂಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಕಟಗಿ, ಮಾರ್ಕೆಟಿಂಗ್ ಸೊಸೈಟಿ ಸದಸ್ಯ ಪರಶುರಾಮ ತಹಶೀಲ್ದಾರ್, ಕಾಂಗ್ರೆಸ್ ಪಕ್ಷದ ಚೌಡಳ್ಳಿ ಘಟಕದ ಅಧ್ಯಕ್ಷ ಪರಶುರಾಮ್ ಕುರಿಯವರು, ಮುಖಂಡರಾದ ಶಂಕರ್ ಓಣಿಕೇರಿ, ಚಂದ್ರು ಮಡ್ಲಿ, ಗೋಪಾಲ್ ಪಾಟೀಲ್, ಬಸವರಾಜ್ ಸಿಗ್ನಳ್ಳಿ, ಪಾಂಡುರಂಗ ಬದ್ರಾಪುರ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.