ಇಂಡಿ

ಪ್ರಯೋಗಾಲಯ ತಂತ್ರಜ್ಞ ಮನುಷ್ಯನ ಬೆನ್ನೆಲುಬು

ಪ್ರಯೋಗಾಲಯ ತಂತ್ರಜ್ಞ ಮನುಷ್ಯನ ಬೆನ್ನೆಲುಬು

ಇಂಡಿ: ಪ್ರಯೋಗಾಲಯ ತಂತ್ರಜ್ಞ: ವೈದ್ಯಕೀಯ ರಂಗದಲ್ಲಿ ಮನುಷ್ಯನ ಬೆನ್ನೆಲುಬು ಇದ್ದಂತೆ. ಅವರು ನೀಡಿದ ವರದಿ ಆಧರಿಸಿಯೇ ವೈದ್ಯರು ಮುಂದುವರೆದು ಚಿಕಿತ್ಸೆ ನೀಡುತ್ತಾರೆ ಎಂದು ಫೆಥಾಲಜಿ ಡಾ. ನಿವೇದಿತಾ ಜಾಮಗೊಂಡಿ ಹೇಳಿದರು.ಅವರು ಗುರುವಾರ ನಗರದ ವಿಜಯಪುರ ರಸ್ತೆಯಲ್ಲಿರುವ ಎಸ್.ಎಸ್.  ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಶಿಯನ್ ದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ವೈದ್ಯಕೀಯ ರಂಗದಲ್ಲಿ ಲ್ಯಾಬ್ ಟೆಕ್ನಿಶಿಯನ್ ಬಹಳಷ್ಟು ಅವಶ್ಯಕ. ಅವರು ಕಂಡುಕೊಂಡ ರೋಗದ ಲಕ್ಷಣಗಳ ಮೇಲೆ ವೈದ್ಯರಾದವರು ಮೆಡಿಶನ್ಸ ಮತ್ತು ಔಷಧಿ ನೀಡಿ ರೋಗಿಯನ್ನು ಗುಣಮುಖವಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.ಈ ಕೋರ್ಸ ಮುಗಿಸಿ ಸ್ವಂತ ಅಥವಾ ಬೇರೆ ವೈದ್ಯರ ಹತ್ತಿರ ಪ್ರಯೋಗಾಲಯದಲ್ಲಿ ಗುಣಮಟ್ಟದ ಸೇವೆ ನೀಡಿ ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಉಮೇಶ ಬಳಬಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅವಿನಾಶ ಬಗಲಿ, ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಕೆಂಭೋಗಿ ಪ್ರಾಚಾರ್ಯ ಎಂ.ಎಸ್. ಪಾಟೀಲ ಮಾತನಾಡಿದರು.ಕಾರ್ಯಕ್ರಮದಲ್ಲಿ ರಜಿಯಾಸುಲ್ತಾನ ಹವಾಲ್ದಾರ, ದಾನಯ್ಯ ಮಠಪತಿ, ಮುಕ್ತಾಮ್ ಮುಲ್ಲಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಸುದ್ದಿ ಓದಿ