ಕಾರ್ಮಿಕ ನೋಂದಣಿ ನವೀಕರಣ ಅಗತ್ಯ:ಅನಿಲ ಬಗಟಿ
ಮಹಾಲಿಂಗಪುರ: ಕೇಂದ್ರ ಸರ್ಕಾರದ ಸೌಲಭ್ಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕ ತಪ್ಪದೆ ಇ- ಶ್ರಮ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ ಬಗಟಿ ಹೇಳಿದರು.
ಸ್ಥಳೀಯ ಸಾಧು ನಿರಂಜನ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ ಬಾಗಲಕೋಟೆ, ಸಾರಿಗೆ ಪ್ರಾದೇಶಿಕ ಇಲಾಖೆ ಜಮಖಂಡಿ, ಪೊಲೀಸ್ ಇಲಾಖೆ, ಪುರಸಭೆ ಮಹಾಲಿಂಗಪುರ, ಶಿಕ್ಷಣ ಇಲಾಖೆ, ಅಂಚೆ ಇಲಾಖೆ ಮತ್ತು ಸರ್. ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿ ಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿ ಕ ದಿನಾಚರಣೆ ಮತ್ತು ವಾಹನ ಚಾಲನ ಪರವಾನಿಗೆ ಹಾಗೂ ಕಾರ್ಮಿ ಕ ಕಾರ್ಡ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಲಾಖೆ ಮೇಲೆ ವೃಥಾ ಆರೋಪ ಮಾಡಬೇಡಿ, ಕಾರ್ಮಿಕರ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ನೋಂದಣಿ ಮತ್ತು ಸಕಾಲದಲ್ಲಿ ನವೀಕರಣ ಅಗತ್ಯ, ಅಪಘಾತ, ವಿವಾಹ, ಆರೋಗ್ಯ, ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳು ಲಭ್ಯವಿದ್ದು ಕೇವಲ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ನೀಡಿ ತಪ್ಪದೇ ನೋಂದಣಿ ಮಾಡಿಸಿಕೊಳ್ಳಿ ಎಂದರು.
ಕಾರ್ಮಿಕ ನಿರೀಕ್ಷಕ ಪಿ. ವ್ಹಿ.ಮಾವರಕರ ಮಾತನಾಡಿ, ಪ್ರತಿ ಕಾರ್ಮಿ ಕರು ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಕುಟುಂಬದ ರಕ್ಷಣೆ ಮಾಡಿಕೊಳ್ಳಿ ಎಂದರು.
ಅಂಚೆ ಸಹಾಯಕ ಮಹಾವೀರ ಹುಲ್ಲಳ್ಳಿ ಮಾತನಾಡಿ, ವರ್ಷಕ್ಕೆ ಕೇವಲ 399 ರೂಪಾಯಿಗಳಲ್ಲಿ ಆಕಸ್ಮಿಕ ಸಾವಿಗೆ 10 ಲಕ್ಷದ ಪರಿಹಾರ ಹಾಗೂ ಎರಡು ಮಕ್ಕಳಿಗೆ ತಲಾ 1 ಲಕ್ಷ, ಶಾಶ್ವತ ಅಂಗವೈಕಲ್ಯಕ್ಕೆ 10 ಲಕ್ಷ, ಸಣ್ಣಪುಟ್ಟ ಚಿಕಿತ್ಸೆಗೆ 60 ಸಾವಿರದವರೆಗೆ ಪರಿಹಾರ ನೀಡುವ ಅಂಚೆ ಇಲಾಖೆಯ ಟಾಟಾ ಏಸ್ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ, ಕಾಮರ್ಿಕ ಕಾಡರ್್ ಮತ್ತು ವಿವಾಹ ಸಹಾಯ ಧನ ಮತ್ತು ಮರಣ, ಅಂತ್ಯಕ್ರಿಯೆ ಪರಿಹಾರದ ತಲಾ 75 ಸಾವಿರ ರೂ. ಮಂಜುರಾತಿ ಆದೇಶ ಪತ್ರ ವಿತರಿಸಲಾಯಿತು.
ಪ್ರಗತಿಪರ ರೈತ ಬಂದೇನವಾಜ ಫಕಾಲಿ ಮಾತನಾಡಿದರು, ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿ ಕ ಸಂಘದ ಅಧ್ಯಕ್ಷ ಅರ್ಜು ನ ಬಂಡಿವಡ್ಡರ ಅಧ್ಯಕ್ಷತೆ ವಹಿಸಿದ್ದರು, ಕಾನಿಪ ಅಧ್ಯಕ್ಷ ಮಹೇಶ ಆರಿ, ಪುರಸಭಾ ಕಂದಾಯ ಅಧಿಕಾರಿ ನಾಮದೇವ ಲಮಾಣಿ, ಎಸ್.ಎನ್.ಪಾಟೀಲ, ಅಭಿಯಂತರರ ಸಂಘದ ಅಧ್ಯಕ್ಷ ಬಸವರಾಜ ಗಾಣಿಗೇರ, ಎ ಎಸ್ ಐ ಡಿ.ಆರ್.ಮಾದರ, ಹುಚ್ಚೇಶ್ ವಡ್ಡರ, ತಿಪ್ಪಣ್ಣ ಬಂಡಿವಡ್ಡರ, ಹನುಮಂತ ಬಂಡಿವಡ್ಡರ ಇತರರಿದ್ದರು.
ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು, ವೈಷ್ಣವಿ ಬಂಡಿವಡ್ಡರ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು