ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಲ್ಐಸಿ ಪ್ರತಿನಿಧಿಗಳ ಪ್ರತಿಭಟನೆ
ಪ್ರತಿನಿಧಿಗಳ ಶ್ರಮದಿಂದಲೇ ನಿಗಮದ ಅಭಿವೃದ್ಧಿ ಸಾಧ್ಯ
ಮಹಾಲಿಂಗಪುರ19 ; ಇಲ್ಲಿನ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ತಮ್ಮ ವಿವಿಧ ಬೇಡಿಗಳ ಈಡೇರಿಕೆಗಾಗಿ ರಬಕವಿಯ ಸೇಟ್ ಲೈಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಾಖಾಧಿಕಾರಿ ವೆಂಕಟೇಶ ಸರ್ಜಾಪುರ ಅವರ ಮೂಲಕ ಭಾರತೀಯ ಜೀವವಿಮಾ ನಿಗಮಕ್ಕೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಲ್.ಐ.ಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಜು ತಡಸದ, ವಿಮಾ ಗ್ರಾಹಕರ ಹಿತದೃಷ್ಠಿ ಇಟ್ಟುಕೊಂಡು ಪಾಲಿಸಿಗಳ ಮೇಲಿರುವ ಬೋನಸ ಹೆಚ್ಚಿಸಿ, ಸಾಲದ ಬಡ್ಡಿದರ ಕಡಿತಗೋಳಿಸಿ, ವಿಮಾ ಕಂತಿನ ಜಿ.ಎಸ್.ಟಿ ರದ್ದು ಪಡಿಸಬೇಕು.
ಕಳೆದ 20-30 ವರ್ಷಗಳಿಂದ ವಿಮಾ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಹೊಸದಾಗಿ ಸೇವೆಯಲ್ಲಿರುವ ವಿಮಾ ಪ್ರತಿನಿಧಿಗಳ ಹಿತ ಕಾಪಾಡುವದು ಅವಶ್ಯವಾಗಿದೆ. ಈಗಾಗಲೇ ಹಲವಾರು ಬಾರಿ ವಿಮಾ ಪ್ರತಿನಿಧಿಗಳು ಮನವಿ ಮಾಡಿದರೂ ವಿಮಾ ಕಂಪನಿ ಬೇಡಿಕೆ ಇಡೆರಿಸಿಲ್ಲ. ಪ್ರತಿನಿಧಿಗಳ ಗ್ರಾಚ್ಯುಟಿ ಸಿಬ್ಬಂದಿ ಹೆಚ್ಚಿಸಿ, ಗುಂಪು ವಿಮೆಯನ್ನು 50 ಲಕ್ಷ ರೂಗಳ ವರೆಗೆ ವಿಸ್ತರಿಸಸಬೇಕು ಎಂದರು.
ನಂತರ ಮಾತನಾಡಿದ ಎಲ್.ಐ.ಸಿ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಭರತೇಶ ಉಂದ್ರಿ, ಪ್ರತಿನಿಧಿಗಳ ವೈದ್ಯಕೀಯ ಸೌಲಭ್ಯ ಹೆಚ್ಚಿಸಿ, ಕೋವಿಡ 19 ಗೆ ಬಲಿಯಾದ ಪ್ರತಿನಿಧಿಗಳ ಕುಟುಂಬಕ್ಕೆ ತಲಾ 5ಲಕ್ಷ ಪರಿಹಾರ ನೀಡಬೇಕು. ಕೋವಿಡ್ ನಿಂದ ಹೊಸ ವ್ಯವಹಾರಗಳಿಲ್ಲದೇ ಸಂಕಷ್ಟದಲ್ಲಿರುವ ಪ್ರತಿನಿಧಿಗಳ ಕುಟಂಬ ನಿರ್ವಹಣೆಗೆ 1ಲಕ್ಷ ರೂ ಮುಂಗಡ ನೀಡಬೇಕು. ಪ್ರತಿನಿಧಿಗಳ ಪೆನ್ಷನ್ ಸೌಲಭ್ಯ ಕಲ್ಪಿಸಿ, ಕಾರ್ಯಾಲಯ ಭತ್ಯೆ ಯನ್ನು ಹೆಚ್ಚಿಸಬೇಕು.ಕಾರಣ ಈ ನಮ್ಮ ಬೇಡಿಕೆಗಳು ಇಡೇರುವ ವರೆಗೆ ಅನಿರ್ಧಿಷ್ಟ ಅವದಿಯವರೆಗೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದರು.
ಎಲ್.ಐ.ಸಿ ಪ್ರತಿನಿಧಿಗಳಾದ ಈರಣ್ಣ ಹಲಗತ್ತಿ, ಅಶೋಕ ವಸ್ತ್ರದ, ಸತೀಶ ಮೋಟಗಿ, ಅರ್ಜುನ ಪನದಿ, ಬಾಬು ಸನದಿ, ಮಲ್ಲಿಕಾರ್ಜುನ ಕುಂಚನೂರ, ಅಶೋಕ ಬಿಜಾಪುರ, ಮಹೇಶ ಸವದಿ, ಈರಣ್ಣ ಸಪ್ತಸಾಗರ, ಮಹೇಶ ಆರಿ, ಪರಸು ಜಕ್ಕನ್ನವರ, ಕಾಡಯ್ಯ ಕಾಡದೇವರಮಠ, ಎಲ್ ಜಿ ಕಾಸನೀಸ್, ಶಂಕರ ಮುರುಗೋಡ, ಎಸ್.ಬಿ ಕಪಾಳಗಂಟಿ, ಮುರಿಗೇಪ್ಪ ಬಿಲವಾಡಿ, ಶಿವಾನಂದ ಮುತ್ತೂರ ಸೇರಿದಂತೆ ಹಲವರು ಇದ್ದರು.