ಮುದ್ದೆಬಿಹಾಲ್

ಸರ್ಕಾರಿ ಆದೇಶವಿಲ್ಲದೆ ಉರ್ದು ಶಾಲಾ ಕಟ್ಟಡ ಕೆಡವಿದ ಕುಂಟೋಜಿ ಗ್ರಾಪಂ ಆಡಳಿತ : ಸಚಿನ ಚಲವಾದಿ

ಸರ್ಕಾರಿ ಆದೇಶವಿಲ್ಲದೆ ಉರ್ದು ಶಾಲಾ ಕಟ್ಟಡ ಕೆಡವಿದ ಕುಂಟೋಜಿ ಗ್ರಾಪಂ ಆಡಳಿತ : ಸಚಿನ ಚಲವಾದಿ

ಮುದ್ದೇಬಿಹಾಳ: ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಬಳಲುತ್ತಿರುವ ಸದಸ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ದಿನೆ ದಿನೆ ಕುಸಿಯುತಿದ್ದರು ಶಾಲಾ ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸಬೆಕಿದ್ದ ಸ್ಥಳಿಯ ಗ್ರಾಮ ಪಂಚಾಯತಿ ಆಡಳಿತದವರು ಉರ್ದು ಶಾಲಾ ಕಟ್ಟಡವನ್ನು ಸರ್ಕಾರದ ಯಾವುದೆ ಆದೇಶವಿಲ್ಲದೆ ಕೆಡವಿ ಉರ್ದು ಕಲಿಯುವ ಮಕ್ಕಳ ಶಿಕ್ಷಣಕ್ಕೆ ಕುತ್ತು ತರುವಂತ ಘಟನೆ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ. 

ಕುಂಟೋಜಿ ಗ್ರಾಮದಲ್ಲಿ ಕನ್ನಡ ಮತ್ತು ಉರ್ದು ಶಾಲೆಗಳು ಅಕ್ಕಪಕ್ಕದಲ್ಲಿಯೆ ಇವೆ ಇದೆ ಜಾಗದಲ್ಲಿ ಕಳೆದ ಸಾಲಿನಲ್ಲಿ ಒಂದು ನೂತನ ಶಾಲಾ ಸಮುಚ್ಚಯ ನಿರ್ಮಾಣವಾಗುತ್ತಿದೆ ಸದರಿ ಶಾಲಾ ಕಟ್ಟಡಗಳು ಕಳಪೆ ನಡೆಯುತ್ತಿವೆ ಎಂದು ಹಲವಾರು ಸಾರಿ ಗ್ರಾಮಸ್ಥರು ಆರೋಪಿಸಿದರು ತಲೆ ಕೆಡಿಸಿಕೋಳ್ಳದ ಗ್ರಾಮ ಪಂಚಾಯತಿ ಅಧ್ಯಕ್ಷರು ಈಗ ಎಕಾ,ಎಕಿ ಉರ್ದು ಶಾಲಾ ಕಟ್ಟಡವನ್ನು ಕೆಡವಿರುವದು ಹಲವಾರು ಕಾರಣಗಳಿಗೆ ಎಡೆ ಮಾಡಿಕೋಟ್ಟಿದೆ. 

ಗ್ರಾಮೀಣ ಪ್ರದೇಶದಲ್ಲಿ ಓದುವಮಕ್ಕಳು ಕನ್ನಡ, ಉರ್ದು ಎಂಬ ಬೇದಭಾವವಿಲ್ಲದೆ ತಮಗೆ ಇಷ್ಟವಾದ ಬಾಷೆಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಕನ್ನಡ ಪ್ರಾಥಮೀಕ ಮತ್ತು ಪ್ರೌಡ ಶಾಲೆಗಳ ಜೋತೆಯಲ್ಲಿಯೆ ಕುಂಟೋಜಿ ಗ್ರಾಮದಲ್ಲಿ ಉರ್ದು ಶಾಲೆಯು ಕೂಡಾ ಹಲವಾರು ದಶಕಗಳಿಂದ ಮಕ್ಕಳು ಶಿಕ್ಷಣ ಪಡೆಯುತಿದ್ದಾರೆ. ಇಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ಅವರು ಶಿಕ್ಷಣ ಇಲಾಖೆಯ ಯಾವುದೆ ಆದೇಶವಿಲ್ಲದಿದ್ದರು ಉರ್ದು ಶಾಲಾ ಕಟ್ಟಡವನ್ನು ಕೆಡವಿ ದ್ವಂಸ ಮಾಡಿರುವದು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ಅವರು ಶಿಕ್ಷಣದಲ್ಲಿ ತಾರತಮ್ಯ ಎಸಗುತಿದ್ದಾರೆ ಎಂದು ಶಿಕ್ಷಣ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾದ ಆಟದ ಮೈದಾನ, ಶೌಚಾಲಯ, ಸುಸಜ್ಜಿತ ಶಾಲಾ ಕಟ್ಟಡ, ನುರಿತ ಶಿಕ್ಷಕರು ಇಲ್ಲದೆ ಕೋರೋನ ನಂತರ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಶಿಕ್ಷಣವೆ ಅದೋಗತಿಯಲ್ಲಿದೆ. ಇಂತಹ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಸುಧಾರಣೆ ಮಾಡಬೆಕಿದ್ದ ಸ್ಥಳಿಯ ಗ್ರಾಮ ಪಂಚಾಯತಿ ಆಡಳಿತದವರೆ ಮಕ್ಕಳ ಮನೋಬಲ ಕುಗ್ಗಿಸುವ ಕಾರ್ಯ ಮಾಡಿರುವದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಕುಂಟೋಜಿ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲಾ ಕಟ್ಟಡವನ್ನು ಕೆಡವಿ ದ್ವಂಸಗೋಳಿಸಿರುವ ಕುರಿತು ಶಿಕ್ಷಣ ಇಲಾಖೆಯವರನ್ನು ಸಂಪರ್ಕಿಸಿದರೆ ನಾವು ಶಾಲಾ ಕಟ್ಟಡ ಕೆಡವಲು ಯಾವುದೆ ಆದೇಶ ನೀಡಿಲ್ಲ ಎಂದು ಹೆಳುತ್ತಾರೆ. ಗ್ರಾಮ ಪಂಚಾಯತಿ ಪಿಡಿಓ ಅವರನ್ನು ಕೆಳಿದರೆ ಅಧ್ಯಕ್ಷರನ್ನು ಕೇಳಿ ನನಗೆ ಎನು ಗೋತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಒಟ್ಟಿನಲ್ಲಿ ಕುಂಟೋಜಿ ಗ್ರಾಮ ಪಂಚಾಯತಿ ಅಧ್ಯಕ್ಷರ ಶಿಕ್ಷಣ ವಿರೋದಿ ವರ್ತನೆಗೆ ಉರ್ದು ಶಾಲಾ ಮಕ್ಕಳಿಗೆ ಕುತ್ತು ತಂದಿದ್ದು ಶಿಕ್ಷಣ ಇಲಾಖೆಯವರು ಯಾವ ಕ್ರಮ ಜರುಗಿಸುತ್ತಾರೆ ಎಂದು ಕಾದು ನೋಡಬೇಕಿದೆ. 


ಸುದ್ದಿ ಓದಿ