ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷರಾಗಿ ಕೊಮಾರಸ್ವಾಮಿ ಅವಿರೋಧ ಆಯ್ಕೆ
ಹಗರಿಬೊಮ್ಮನಹಳ್ಳಿ 11: ತಾಲೂಕಿನ ತಂಬ್ರಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಡಿವಾಳರ ಕೊಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರ ಆಯ್ಕೆಗೆ ತಂಬ್ರಹಳ್ಳಿ ಗ್ರಾಮದ ಮಡಿವಾಳರ ಕೊಮಾರಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಸಂಘದ ಚುನಾವಣಾಧಿಕಾರಿ ಮನೋಹರ, ಸಹಾಯಕ ಚುನಾವಣಾಧಿಕಾರಿ ಬಡಿಗೇರ್ ಹುಚ್ಪಪ್ಪ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ಈ ಕುರಿತು ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ಹಾಲು ಉತ್ಪಾದಕರು ಆರ್ಥಿಕವಾಗಿ ಸಧೃಡವಾಗಿ, ಸಂಘದ ಅಭಿವೃಧ್ದಿಗೆ ಶ್ರಮಿಸಬೇಕು. ಶಾಸಕ ಎಸ್.ಭೀಮಾನಾಯ್ಕ ರಾಬಕೊ ಒಕ್ಕೂಟದ ಅಧ್ಯಕ್ಷರಿರುವುದರಿಂದ ತಾಲೂಕಿಗೆ ಹೆಚ್ಚು ಅನುಕೂಲವಾಗಿದೆ. ಈಗೀರುವ ಹಾಲು ಉತ್ಪಾದಕರ ಕಟ್ಟಡ ಚಿಕ್ಕದಾಗಿರುವುದರಿಂದ ಇನ್ನೊಂದು ಕಟ್ಟಡ ನಿರ್ಮಾಣಕ್ಕೆ ಶಾಸಕರು 10ಲಕ್ಷರೂ ಅನುದಾನವನ್ನು ನೀಡಿದ್ದಾರೆ. ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಿ ಕಟ್ಟಡ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಮೈಲಾರ ಶಿವಕುಮಾರ, ಸದಸ್ಯರಾದ ಆನೇಕಲ್ ದೊಡ್ಡಬಸಪ್ಪ, ಬಸಲಿಂಗನಗೌಡ, ಹೆಚ್.ದೊಡ್ಡಬಸಪ್ಪ, ಮುಖಂಡರಾದ ಪಟ್ಟಣಶೆಟ್ಟಿ ಸುರೇಶ, ದೇವಿಪ್ರಸಾದ, ಗೌರಜ್ಜನವರ ಗಿರೀಶ್, ಗಡ್ಡಿ ಮಲ್ಲಿಕಾರ್ಜುನ, ಹಿರೇತನದ ಕೊಟ್ರೇಶ, ಗದ್ದಿಕೇರಿ ವೀರಣ್ಣ, ರೆಡ್ಡಿ ಮಂಜುನಾಥ ಪಾಟೀಲ್, ಸರಾಯಿ ಮಂಜುನಾಥ, ಕೊರವರ ಯಮನೂರಪ್ಪ, ಗದ್ದಿಕೇರಿ ಸುರೇಶ, ಮಡಿವಾಳ ಕೊಟ್ರೇಶ, ಗಡ್ಡಿ ನಿಂಗಪ್ಪ, ಮೈಲಪ್ಪ, ಸಾಲ್ಮನಿ ನೀಲಕಂಠಪ್ಪ, ಕೊಪ್ಪಳ ಶಾಹಿರ್, ಬಂಡಿ ತೋಟಪ್ಪ, ಜಹಾಂಗೀರ್, ಮಡಿವಾಳ ಮರಿಯಪ್ಪ, ರಮೇಶ, ಬಾಚಿನಳ್ಳಿ ನಿಂಗಪ್ಪ, ಡಿ.ಎಂ.ಬಸಯ್ಯ, ಗೌರಜ್ಜನವರ ಗೌರಮ್ಮ, ಅಜೀಜ್ಸಾಬ್, ಸಾಲ್ಮನಿ ಮಂಜುನಾಥ, ಪಕ್ಕೀರಪ್ಪ ಇತರರಿದ್ದರು.