ಮಹಲಿಂಗಪುರ

ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿ: 1.25 ಲಕ್ಷ ಗೆದ್ದ ಚಾಂಪಿಯನ್ ಕುಡಚಿ ತಂಡ, ಮುಧೋಳ ರನ್ನರ್ ಅಪ್.

ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿ: 1.25 ಲಕ್ಷ ಗೆದ್ದ ಚಾಂಪಿಯನ್ ಕುಡಚಿ ತಂಡ, ಮುಧೋಳ ರನ್ನರ್ ಅಪ್.

ಮಹಾಲಿಂಗಪುರ: ದಿ. ಮಹಾಂತೇಶ ಭಜಂತ್ರಿ ಇವರ ಸ್ಮರಣಾರ್ಥ ಎಲ್ ಬಿ ಬಾಯ್ಸ್ ವತಿಯಿಂದ ಫೆ. 15 ರಿಂದ 19 ರವರೆಗೆ 5 ದಿನಗಳ ಕಾಲ ನಡೆದ ಫುಲ್ ಪಿಚ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಕುಡಚಿ ತಂಡ  1.25 ಲಕ್ಷ ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. 

ದ್ವಿತೀಯ 65 ಸಾವಿರ ನಗದು ಮತ್ತು ಟ್ರೋಫಿ ಮುಧೋಳ ತಂಡ ಹಾಗೂ ತೃತೀಯ ಬಹುಮಾನ ತಲಾ 15 ಸಾವಿರ ನಗದು ಮತ್ತು ಟ್ರೋಫಿ ಕುರಂದವಾಡ ಮತ್ತು ಮೀರಜ್ ತಂಡಗಳು ಪಡೆದವು. 

ಪಂದ್ಯಶ್ರೇಷ್ಠ ಕುಡಚಿ ತಂಡದ ಮಜೀದ್ ಬೈಸಿಕಲ್, ಉತ್ತಮ ಬ್ಯಾಟರ್ ಮುಧೋಳ ತಂಡದ ತೌಸಿಫ್ ಏರ್ ಕೂಲರ್,  ಉತ್ತಮ ಬೌಲರ್ ಕುಡಚಿ ಪಾಷಾ ಫ್ಯಾನ್ ಬಹುಮಾನವಾಗಿ ಪಡೆದರು. 

ಪ್ರಥಮ ಬಹುಮಾನ  1.25 ಲಕ್ಷ ಮಾಜಿ ಯೋಧ ಶ್ರೀಶೈಲ ಭಜಂತ್ರಿ, ದ್ವಿತೀಯ 65 ಸಾವಿರ ಮಲ್ಲು ಕುಂಬಾಳೆ, ಟ್ರೋಫಿ ನೀಡಿದ ಬಸವರಾಜ ರಾಯರ ಮುಂತಾದ ದಾನಿಗಳನ್ನು ಗೌರವಿಸಲಾಯಿತು. 

ಲಕ್ಕಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಿ, ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮಾಜಿ ಯೋಧ ಶ್ರೀಶೈಲ ಭಜಂತ್ರಿ, ಮಲ್ಲು ಕುಂಬಾಳೆ, ರವಿ ಜವಳಗಿ, ರಮೇಶ ಕೆಸರಗೊಪ್ಪ, ರವಿ ಬಿದರಿ, ಮಹಾದೇವ ಕಡಬಲ್ಲವರ, ಅರುಣ ಬಂತಿ, ಸಿರಾಜ ಪಾಂಡು ಇತರರಿದ್ದರು, ಪತ್ರಕರ್ತ ಮೀರಾ ತಟಗಾರ, ಎಸ್. ಡಿ. ಮಾಗಿ ನಿರೂಪಿಸಿದರು. 


*ಸಸಿ ನೆಟ್ಟರೆ ಮರವಾಗಿ ನೆರಳು ಕೊಡುತ್ತದೆ ಹಾಗೆಯೇ ಬಡ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದರೆ ದೇಶಕ್ಕೆ ಕೀರ್ತಿ ತರುತ್ತಾರೆ:  ಶ್ರೀಶೈಲ ಭಜಂತ್ರಿ ಮಾಜಿ ಸೈನಿಕ ಹಾಗೂ ಪ್ರಥಮ ಬಹುಮಾನದ ದಾನಿ 

ಸುದ್ದಿ ಓದಿ