ಕೃಷ್ಣಾ ನದಿಗೆ ಅಪಾರ ನೀರು : ನದಿಯಿಂದ ಬಂದ ಬೃಹತಾಕಾರದ ಮೊಸಳೆ : ಬೆಚ್ವಿಬಿದ್ದ ಜನಾ
ಬೆಳಗಾವಿ : ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನಿಂದ ಬೃಹತ್ ಆಕಾರದ ಮೊಸಳೆ ಒಂದು ಪ್ರತ್ಯಕ್ಷವಾಗಿದೆ. ನದಿ ದಡದ ಮೇಲೆ ಈ ಬೃಹತ್ ಮೊಸಳೆ ಕಂಡ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಬಳಿ ಕೃಷ್ಣಾ ನದಿಯ ದಡದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಸುಮಾರು 10 ಅಡಿ ಉದ್ಧದ ಮೊಸಳೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಕೃಷ್ಣಾ ಕಿತ್ತೂರು ಗ್ರಾಮದ ರೈತರೊಬ್ಬರ ಮೊಬೈಲ್‌ನಲ್ಲಿ ಈ ಬೃಹತ್ತಾದ ಮೊಸಳೆಯ ವಿಡಿಯೋ ಸೆರಯಾಗಿದೆ.