ಜ. 3ರಿಂದ 15ರಿಂದ 18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ
ಬಳ್ಳಾರಿ 29: ಬಳ್ಳಾರಿ ಜಿಲ್ಲೆಯ 15ರಿಂದ 18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಜ. 03ರಿಂದ ನೀಡಲಾಗುವುದು ಎಂದು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಆರ್.ಅನಿಲ್ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸೆಂಟ್ ಜೋನ್ಸ್ ಶಾಲೆಯ ಸಭಾಂಗಣದಲ್ಲಿ ಪ್ರೌಢಶಾಲೆ ಮುಖ್ಯೋಪದ್ಯಾಯರಿಗೆ ಮತ್ತು ಕಾಲೇಜು ಪ್ರಾಂಶುಪಾಲರಿಗೆ ಹಮ್ಮಿಕೊಂಡ ತರಬೇತಿಯಲ್ಲಿ ಬುಧವಾರ ಮಾತನಾಡಿದರು.
ಪ್ರೌಢಶಾಲೆ ಮುಖ್ಯೋಪದ್ಯಾಯರು ಮತ್ತು ಕಾಲೇಜು ಪ್ರಾಂಶುಪಾಲರು ಪೋಷಕರ ಹಂತದ ಸಭೆಯನ್ನು ಕರೆದು ಲಸಿಕೆ ಬಗ್ಗೆ ಮಾಹಿತಿ ನೀಡುವುದು ಹಾಗೂ ಸದರಿ ದಿನದಂದು ಶಾಲೆಯಲ್ಲಿ ಲಸಿಕಾಕರಣಕ್ಕೆ ಮೂರು ಕೊಠಡಿಗಳನ್ನು ಕಾಯ್ದಿರಿಸಿ ಪ್ರತಿಯಯೊಂದು ಮಗುವಿನ ಆಧಾರ್ ಕಾಡರ್್ ಹಾಗೂ ಪಾಲಕರ ಮೊಬೈಲ್ ನಂ ಪೂರ್ವದಲ್ಲಿ ಪಡೆದುಕೊಂಡು ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜ.01ರಿಂದ ಕೊವಿನ್ ಪೋರ್ಟಲ್ನಲ್ಲಿ ಮಕ್ಕಳ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು ಹಾಗೂ ಕ್ರೀಯಾಯೋಜನೆ ಅನ್ವಯ ಆಯಾ ಶಾಲೆಗಳಲ್ಲಿ ಲಸಿಕೆ ಹಮ್ಮಿಕೊಂಡ ಸಂದರ್ಭದಲ್ಲಿ ಕೋವಿಡ್ ನಿಯಮವಳಿಗಳಾದ ಮಾಸ್ಕ್ ಧರಿಸುವುದು, ಸಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಜರ್ ವ್ಯವಸ್ಥೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳಾರಿಯ ತಾಲೂಕು ಆರೋಗ್ಯ ಅಧಿಕಾರಿ, ಪೂರ್ವ ಮತ್ತು ಪಶ್ಚಿಮ ಕ್ಷೇತ್ರ ಶೀಕ್ಷಣಾಧಿಕಾರಿಗಳು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹಾಗೂ ಸಿ.ಆರ್.ಪಿ ಸೇರಿದಂತೆ ಇತರರು ಹಾಜರಿದ್ದರು.