ಜೂ.27ಕ್ಕೆ ರಜತ ಮಹೋತ್ಸವಕ್ಕೆ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು

ಜೂ.27ಕ್ಕೆ ರಜತ ಮಹೋತ್ಸವಕ್ಕೆ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು

ಯರಗಟ್ಟಿ, 21 : ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್‌. ಕ್ರೆಡಿಟ್ ಸೊಸೈಟಿ ಲಿ., 25ನೇ ವರ್ಷದ ರಜತ ಮಹೋತ್ಸವ ಜೂ.27ಕ್ಕೆ ಮುಂಜಾನೆ 9 ರಿಂದ ಸಂಜೆ 6 ರ ವರೆಗೆ ಪಟ್ಟಣದ ಶ್ರೀ ಶ್ರೀಶೈಲ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. 

ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್‌. ಕ್ರೆಡಿಟ್ ಸೊಸೈಟಿ ಲಿ., ಅಧ್ಯಕ್ಷ ಮಹಾಬಳೇಶ್ವರ ಹಾದಿಮನಿ ಕಛೇರಿಯ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠ ಜಗದ್ಗುರು ಗವಿಸಿದ್ದೇಶ್ವರ ಶ್ರೀಗಳು, ಎಡೆಯೂರು ತೋಂಟದಾರ್ಯಮಠ ಗದಗ-ಡಂಬಳ ಡಾ.ಽಽಜಗದ್ಗುರು ಸಿದ್ದರಾಮ ಶ್ರೀಗಳು, ಕಡಕೋಳ ಸಚ್ಚಿದಾನಂದ ಶ್ರೀಗಳು, ಮುನವಳ್ಳಿ ಮುರುಘೇಂದ್ರ ಶ್ರೀಗಳು, ಗೋಕಾಕ ಮುರುಘರಾಜೇಂದ್ರ ಶ್ರೀಗಳು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಶಾಸಕರಾದ ರಮೇಶ ಜಾರಕಿಹೊಳಿ, ವಿಶ್ವಾಸ್ ವೈಧ್ಯ, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಉಡಪಿ ಖ್ಯಾತ ಸ್ಯಾಕ್ಸೋಫೋನ್ ವಾದಕಿ ಮೇಘನಾ ಸಾಲಿಗ್ರಾಮ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಈಳಗಿ ಸಿದ್ದಪ್ಪ ಬಿದರಿ, ಜಾನಪದ ವಿದ್ವಾಂಸ ಡಾಽಽ ಶಂಭು ಬಳಿಗಾರ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನೆ ಹೀಗೆ ಮುಂತಾದವರು ಉಪಸ್ಥಿತರಿರುವರು ಎಂದು ಹೇಳಿದರು.  

ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಪತ್ತಾರ, ಸದಸ್ಯರಾದ ಗುರ​‍್ಪ ಶೆಟ್ಟರ, ಮಂಜುನಾಥ ತೋಟಗಿ, ಬಸವರಾಜ ಪಟ್ಟಣಶೆಟ್ಟಿ, ಬಸವರಾಜ ಆರಿಬೆಂಚಿ, ಈರ​‍್ಪ ಮುಳಕೂರ, ರಾಜೇಶಂಗಡಿ, ಮಹಾಂತೇಶ ಕೊಪ್ಪದ, ಬಸಪ್ಪ ಚನ್ನಮೇತ್ರಿ, ವಿಜಯಕುಮಾರ ಸಣ್ಣಕ್ಕಿ, ನಿರೂಪಾದ ಭಾಂವಿಹಾಳ, ಹನಮಂತ ಭೂಶಿ, ಪ್ರಭಾವತಿ ವಾಲಿ, ಸುಜಾತಾ ಪಟ್ಟೇದ, ಎಸ್‌.ಎಸ್‌.ಶೀಲವಂತರ ಹಾಗೂ ದೇಶನೂರ, ಯಾದವಾಡ, ಮಮದಾಪೂರ ಶಾಖಾ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ