ಬಳ್ಳಾರಿ

ಊರಮ್ಮ ದೇವಿಯ ಜಾತ್ರಾ ಕಮಿಟಿ ಅಧ್ಯಕ್ಷರಾಗಿ ಕೋಡಿಹಳ್ಳಿ ಮುದುಕಪ್ಪ ಆಯ್ಕೆ

ಊರಮ್ಮ ದೇವಿಯ ಜಾತ್ರಾ ಕಮಿಟಿ ಅಧ್ಯಕ್ಷರಾಗಿ ಕೋಡಿಹಳ್ಳಿ ಮುದುಕಪ್ಪ ಆಯ್ಕೆ

ಹೂವಿನಹಡಗಲಿ 23: ಗ್ರಾಮ ದೇವತೆ ತಾಯಿ ಊರಮ್ಮ ದೇವಿಯ ಜಾತ್ರಾ ಮಹೋತ್ಸವದ ಪದಾಧಿಕಾರಿಗಳನ್ನು ಇಂದು ಆದಿಶಕ್ತಿ ಭವನದಲ್ಲಿ ನೆರವೇರಿತು.  

ಶಾಸಕರಾದ ಕೃಷ್ಣ ನಾಯಕ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ ನವರು ಹಿಂದೆ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಹಾದಿಯಲ್ಲಿ ಈ ಜಾತ್ರೆಯನ್ನು ಎಲ್ಲ ಜಾತಿ ಧರ್ಮದವರು ಸೇರಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು. ನಂತರ ನಡೆದ ಜಾತ್ರಾ ಸಮಿತಿಯ ಆಯ್ಕೆಯಲ್ಲಿ ಗೌರವಾಧ್ಯಕ್ಷರಾಗಿ ಕೃಷ್ಣ ನಾಯಕ್, ಅಧ್ಯಕ್ಷರಾಗಿ ಕೋಡಿಹಳ್ಳಿ ಮುದುಕಣ್ಣ, ಕಾರ್ಯಧ್ಯಕ್ಷರಾಗಿ ಎಂ. ನಾಗಭೂಷಣ್, ಖಜಾಂಚಿಯಾಗಿ ವಿಸಿ ಪಾಟೀಲ್ ಮತ್ತು ಮುಂಡವಾಡದ ಉಮೇಶ್ ಆಯ್ಕೆಯಾದರು. ಕೆಲವು ಯುವಕರು ಮಲ್ಕಿ ಒಡೆಯರ್ ನಾಗಭೂಷಣ್ ರವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬೇಡಿಕೆ ಇಟ್ಟರು. ಆದರೆ ಬಹಳಷ್ಟು ಹಿರಿಯ ಮತ್ತು ಕಿರಿಯ ಸಮಾನ ಮನಸ್ಕರರು ಕೋಡಿಹಳ್ಳಿ ಮುದುಕಪ್ಪನವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬೆಂಬಲ ವ್ಯಕ್ತಪಡಿಸಿದಾಗ ಅಂತಿಮವಾಗಿ ಕೋಡಿಹಳ್ಳಿ ಮುದುಕಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾದರು. ಖಜಾಂಚಿಗಳಾಗಿ ವಿ ಸಿ ಪಾಟೀಲ್ ಮತ್ತು ಮುಂಡವಾಡದ ಉಮೇಶ್ ಆಯ್ಕೆಯಾದರು.ಈ ಒಂದು ಸಭೆಗೆ ಪುರಸಭೆಯ ಮಾಜಿ ಅಧ್ಯಕ್ಷರಾದ ವಾರದ್ ಗೌಸ್, ಜೆಡಿಎಸ್ ಮುಖಂಡರಾದ ಪುತ್ರೇಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ಹಣ್ಣಿ ಶಶಿಧರ, ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾದ ಕರಿಯತ್ತಿನ ರಾಜೇಂದ್ರ​‍್ಪ, ಗೋಣೆಪ್ಪ ಕಟಗರ್, ವಾಲ್ಮೀಕಿ ಸಮಾಜದ ಹಿರಿಯರಾದ ಹನುಮಂತಪ್ಪನವರು, ಪುರಸಭೆಯ ಸದಸ್ಯರಾದ ಊಳಿಗದ ಹನುಮಂತಪ್ಪ,ತಿಮ್ಮಪ್ಪ ಹಲೋ ಮುಖಂಡರು ಯುವಕರು ಹಾಜರಿದ್ದರು. ಈ ಒಂದು ಸಭೆ ರಾಮಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ರಾಕೇಶಯ್ಯನವರ ನೇತೃತ್ವದಲ್ಲಿ ಜರುಗಿತು. 


ಸುದ್ದಿ ಓದಿ