ಕ್ರಿಕೆಟ್ ಬೆಟ್ಟಿಂಗ ಹಣಕ್ಕಾಗಿ ಚಾಕು ಇರಿತ : ಇಬ್ಬರು ಯುವಕರಿಗೆ ಗಂಭೀರ ಗಾಯ : ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು
ಬೆಳಗಾವಿ : ಬೆಟ್ಟಿಂಗ್ ವಿಷಯವಾಗಿ ಎರಡು ಗುಂಪಿನನಡುವೆ ನಡೆದ ಗಲಾಟೆಯಲ್ಲಿ ಬ್ಲೇಡ್ ಹಾಗೂ ಚಾಕುವಿನಿಂದ ಇರಿತವಾಗಿ ಇಬ್ಬರು ಯುವಕರು ತೀವ್ರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ನಡೆದಿದ್ದು, ಗಾಯಗೊಂಡ ಇಬ್ಬರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಅಲ್ತಾಮೇಶ್ ನಾಯಕ್, ಇರ್ಫಾನ್ ಸುಬಾನಿ ಇವರಿಬ್ಬರು ಗಾಯಾಳುಗಾಳಾಗಿದ್ದಾರೆ.
ಸೌದಿ ಅರೇಬಿಯಾಗೆ ಹೋದ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಗಾಯಾಳು ಅಲ್ಪಾಮೇಶ್ ನಾಯ್ಕ್ ಎಂಬುವವನ್ನು ಸೋತಿದ್ದನು. ಊರಿಗೆ ವಾಪಾಸ್ ಆದ ಬಳಿಕ ಹಣ ಕೊಡುವುದಾಗಿ ಹೇಳಿದ್ದನು. ಆದರೆ, ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ಲೋಂಡಾ ಗ್ರಾಮದಲ್ಲಿ ಬೆಳಗಾವಿ ನಗರದ ನಿವಾಸಿ ಆಸೀಫ್ ಜಮಾದಾರ ಸೇರಿ ಮೂವರು ಜನರು ಸೇರಿ ಅಲ್ಪಾಮೇಶ್ ನಾಯ್ಕ್ ಎಂಬುವವ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಸ್ಪರ ಹೊಡೆದಾಟದಲ್ಲಿ ಇಬ್ಬರಿಗೂ ಚಾಕೂ ಇರಿತವಾಗಿದೆ. ಇದರಿಂದ ತೀವ್ರ ಗಾಯಗೊಂಡಿರುವ ಇಬ್ಬರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಖಾನಾಪೂರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.