ಕನ್ನಡ ನೆಲದಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಇಲ್ಲ ಅವಕಾಶ ; ಅನುಮತಿ ಇಲ್ಲವೆಂದು ಪ್ರತಿಮೆ ತೆರವು ಮಾಡಿದ ಪೊಲೀಸರ‌ ವಿರುದ್ದ ಕನ್ನಡಿಗರ ಆಕ್ರೋಶ, ಕೆಲವರು ಪೊಲೀಸ ವಶಕ್ಕೆ

ಕನ್ನಡ ನೆಲದಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಇಲ್ಲ ಅವಕಾಶ ; ಅನುಮತಿ ಇಲ್ಲವೆಂದು ಪ್ರತಿಮೆ ತೆರವು ಮಾಡಿದ ಪೊಲೀಸರ‌ ವಿರುದ್ದ ಕನ್ನಡಿಗರ ಆಕ್ರೋಶ, ಕೆಲವರು ಪೊಲೀಸ ವಶಕ್ಕೆ

ಬೆಳಗಾವಿ : ಜಿಲ್ಲೆಯ ಗಡಿ ಗ್ರಾಮದ ಕನ್ನಡ ನೆಲದಲ್ಲಿ ರಸ್ತೆ ಪಕ್ಕ ಪ್ರತಿಷ್ಠಾಪಿಸಿದ್ದ ಚನ್ನಮ್ಮನ‌ ಪ್ರತಿಮೆಗೆ ಅನುಮತಿ ಇಲ್ಲ ಎಂಬ ಕಾರಣ ಹಿನ್ನೆಲೆ ಪೊಲೀಸರು ತೆರವುಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಪ್ರತಿಮೆ ಹಾಗೂ ಕೆಲ ಯುವಕರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಇದರಿಂದ ಗ್ರಾಮದಲ್ಲಿ ವಾತಾವರಣ ತಿಳಿಯಾಗಿರುವ ಘಟನೆ ತಾಲೂಕಿನ ಗಡಿ ಗ್ರಾಮವಾದ ಧಾಮನೆಯಲ್ಲಿ ನಡೆದಿದೆ.


   ಹೌದು ಓದುಗರೇ ಅದು ಕನ್ನಡದ ನೆಲ ಕರ್ನಾಟಕದ ಗಡಿ ಗ್ರಾಮ. ಅಲ್ಲಿರುವದು ಕನ್ನಡ ನೆಲ, ಆ‌ ನೆಲದಲ್ಲಿ ಸ್ವಾತಂತ್ರ್ಯದ ಬೆಳ್ಳಿಚ್ಯುಕ್ಕೆಯಾಗಿರುವ ವೀರ ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಅವಕಾಶ ನೀಡದೆ ಇರುವದು ಕನ್ನಡಿಗರ ಆಕ್ರೋಶ ಕ್ಕೆ ಕಾರಣವಾಗಿದೆ.  ಬೆಳಗಾವಿ ಪೊಲೀಸರ ನಡೆಯ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾಳೆಯೇ ಸ್ವಾತಂತ್ರ್ಯ ದಿನ ಬೆಳಗಾವಿಯಲ್ಲಿ ಚನ್ನಮ್ಮನಿಗೆ ಇಲ್ಲವಾ ಅಸ್ತಿತ್ವ? ಎನ್ನುವ ಪ್ರಶ್ನೆ ಕನ್ನಡಿಗರಲ್ಲಿ ವ್ಯಕ್ತವಾಗಿದೆ. ಬೆಳಗಾವಿಯ ಧಾಮನೆ ಗ್ರಾಂ ಪಂ ವ್ಯಾಪ್ತಿಯಲ್ಲಿ ಕಿತ್ತೂರ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು‌ ಪೊಲಿಸರು ಅನುಮತಿ ಇಲ್ಲ ಎನ್ನುವ ಕಾರಣದಿಂದ ಪ್ರತಿಮೆ ಮತ್ತು ಹಾಗೂ ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸುದ್ದಿ ಓದಿ