ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 ಬಿರುದಿಗೆ ಕಿತ್ತೂರಿನ ಕುವರಿ ಭಾಜನ : ಮೈಸೂರಿನಲ್ಲಿ ಹಾರಿತು ಕಿತ್ತೂರಿನ ಕೀರ್ತಿ ಪತಾಕೆ

ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 ಬಿರುದಿಗೆ ಕಿತ್ತೂರಿನ ಕುವರಿ ಭಾಜನ : ಮೈಸೂರಿನಲ್ಲಿ ಹಾರಿತು ಕಿತ್ತೂರಿನ ಕೀರ್ತಿ ಪತಾಕೆ

ಬೆಳಗಾವಿ : ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 ಬಿರುದಿಗೆ ಜಿಲ್ಲೆಯ ಕಿತ್ತೂರಿನ ಕುವರಿ ಕು. ಆರೋಹಿ ಮಲ್ಲಿಕಾರ್ಜುನ ಲಿಂಗೋಟಿ ಇವಳು ಆಯ್ಕೆಯಾಗುವ ಮೂಲಕ ಕಿತ್ತೂರು ಹಾಗೂ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. 

   ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ತಾಣವಾದ ತಾಯಿ ಚನ್ನಮ್ಮನ ನಾಡಿನಲ್ಲಿ ಹುಟ್ಟಿ ಬೆಳೆದ ಕು. ಆರೋಹಿ ಲಂಗೋಟಿ ಇವಳು ಮೈಸೂರಿನಲ್ಲಿ ಶಾಲಿನಿ ಚಂಚಲಾ ಮತ್ತು ಕಬೀರ್ ಸಿಂಗ್ ಇವರ ಆಶ್ರಯದಲ್ಲಿ ಜನವರಿ 29ರಂದು  ಮಾಡೆಲಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. 

   ಈ ಕಾರ್ಯಕ್ರಮದಲ್ಲಿ ಸ್ಪರ್ಧೆಗಿಳಿದ ಕು. ಆರೋಹಿ ಅವಳು ಪ್ರಥಮ ಸ್ಥಾನ ಪಡೆದು  ಜಯಶಾಲಿ ಆಗುವುದರ ಜೊತೆಗೆ  ಪ್ರೈಡ್ ಐಕಾನ್ ಆಫ್ ಕರ್ನಾಟಕ 2024 (Pride Icon of Karnataka) ಎಂಬ ಬಿರುದು ಪಡೆದಿರುತ್ತಾಳೆ. 

   ಕಿತ್ತೂರಿನ ರಾಜಗುರು ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿಯಲ್ಲಿ ಓದುತ್ತಿರುವ ಈ ಪುಟಾಣಿ ತನ್ನ ವೈಯಕ್ತಿಕ ಕೌಶಲ್ಯಗಳಿಂದ  ಕಿತ್ತೂರ ಜನತೆಯ ಮನಸ್ಸನ್ನು ಗೆದ್ದಿದ್ದಾಳೆ. ಈ ಕುವರಿಯ ಸಾಧನೆಗೆ ಲಂಗೋಟಿ ಕುಟುಂಬಸ್ಥರು ಹಾಗೂ ಕಿತ್ತೂರು ಜನ ಅಭಿನಂದಿಸಿ, ಮುಂದಿನ ಸಾಧನೆಗೆ ಹರಿಸಿ ಹಾರೈಸಿದ್ದಾರೆ. 

ಸುದ್ದಿ ಓದಿ