ಸಂಕ್ರಾಂತಿ ಹಬ್ಬಕ್ಕೆ ಮೆರಗು ನೀಡಿದ ಗಾಳಿಪಟ ಉತ್ಸವ
ಬಳ್ಳಾರಿ 18: ನೊಪಾಸನ (ನ್ಯಾಷನಲ್ ಆರ್ಗ ನೈಜೆಸೇಶನ್ & ಪ್ರಮೋಶನ್ ಆಫ್ ಆಡ್ವೆಂಚರ್ ಸ್ಪೋರ್ಟ್ಸ್ ಅಂಡ್ ನೇಚರ್ ಅವೇರ್ನೆಸ್) ಸಂಸ್ಥೆ ಹಾಗೂ ಬಳ್ಳಾರಿ ಸ್ಕೌಡ್ ಮತ್ತು ಗೈಡ್ ಫೆಲೋಶಿಪ್ ಇವರು ಜಂಟಿಯಾಗಿ ಗಾಳಿಪಟ ಉತ್ಸವನ್ನು ಜ. 17ರಂದು ಬೆಳಿಗ್ಗೆ 11ಗಂಟೆಯಿಂದ ಬಳ್ಳಾರಿ ನಗರದ ಪ್ರಸಿದ್ಧ ಹೋಟೆಲ್ ಪೋಲಾ ಪ್ಯಾರಡೈಸ್ ಮೇಲ್ಭಾಗದಲ್ಲಿ ಏರ್ಪಡಿಸಿದ್ದರು.
ಲಾಕ್ ಡೌನ್ ಪರಿಣಾಮವಾಗಿ ಮೂಲೆಸೇರಿದ್ದ ಗಾಳಿಪಟಗಳು ಕೊರೊನಾ ವ್ಯಾಪ್ತಿ ಮೀರಿ ಹಾರಾಟವಾಡಿದವು ಬಿಸಿಲು ಲೆಕ್ಕಿಸದೆ ಚಿಣ್ಣರು ಯುವಕ ಯುವತಿಯರು, ದಂಪತಿ ಸೇರಿ ಎಲ್ಲಾ ವಯೋಮಾನದವರು ಸೋತ್ರದ ದಾರ ಹಿಡಿದು ಗಾಳಿಪಟಗಳನ್ನು ಹಾರಿಸಿಸಂಭ್ರಮಿಸಿದರು, ಗಾಳಿಪಟವನ್ನೆ ನೋಡುತ್ತಿದ್ದ ಮಕ್ಕಳಂತೂ ಕುಣಿದು ಕುಪ್ಪಳಿಸಿದರು ಗಾಳಿಯೂ ಅವರ ಜತೆಗೆ ಸೇರಿದ್ದರಿಂದ ಗಾಳಿಪಟಗಳು ಉಯ್ಯಾಲೆಯಾಡಿದವು, ಉತ್ಸವದಲ್ಲಿ ಪಾಲ್ಗೊಂಡ ಯುವತಿ ಯುವಕರಿಗೆ ಮತ್ತು ಮಕ್ಕಳಿಗೆ ಅನೇಕ ಬಗೆಯ ಗಾಳಿಪಟಗಳನ್ನು ಉಚಿತವಾಗಿ ನೀಡಲಾಯಿತು. ಹೀಗೆ ಬಾನಿನಲ್ಲಿ ಸುಮಾರು 50 ಗಾಳಿಪಟಗಳ ಮೆರವಣಿಗೆ ನಡೆಯಿತು ಹೀಗೆ ಗಾಳಿಪಟ ಕೆಳಗಿಳಿಯುವಾಗ ಮರಗಳಕೊಂಬೆಗಳಿಗೆ ಸಿಲುಕಿಕೊಂಡ ಪಟಗಳನ್ನು ನಾಜೂಕಾಗಿ ಬಿಡಿಸಿಕೊಳ್ಳುವ ಸಾಹಸವೂ ಗಮನ ಸೆಳೆಯಿತು. ಹಾಗೇ ದಂಪತಿಗಳೂಬ್ಬರು ನಹಿದಾ ಅವರು ನಮ್ಮ ಆರು ವರ್ಷದ ಮಗನಿಗೆ ಗಾಳಿಪಟ ಎಂದರೇನೆಂದೇ ಗೊತ್ತಿರಲಿಲ್ಲ ಈ ಗಳಿಪಟಉತ್ಸವವನ್ನು ಅವನ ಜೋತೆ ಸೇರಿ ಆಚರಿಸಿದ್ದು ಮತ್ತು ಅವನ ಕಣ್ಣಿನಲ್ಲಿ ತುಂಬಿದ ಸಂತೂಷವನ್ನು ಕಂಡು ತುಂಬಾ ಖುಷಿಎನಿಸಿದೆ, ಎಂದು ಸಂತಸ ಹಂಚಿಕೊಂಡರು.
ಸಂಕ್ರಾಂತಿ ಹಬ್ಬದ ವಿಶೇಷವಾದ ಏಳ್ಳು ಬೆಲ್ಲ ಹಾಗೂ ಹಣ್ಣಿನ ರಸದ ಸವಿಯನ್ನೂ ಉಣಬಡಿಸುತ್ತಾ ಸಂಭ್ರಮಿಸಿದರು. ಪಾಲ್ಗೊಂಡಿದ್ದ ಸ್ಕೌಟ್ ಮತ್ತು ಗೈಡ್ ಫೆಲೋಶಿಪ್ ಜಿಲ್ಲಾ ಘಟಕದ ಅಧ್ಯಕ್ಷ ಪೋಲಾ ವಿಕ್ರಂ, ಕಾರ್ಯದರ್ಶಿ ಎಂ.ಎ.ಷಕೀಬ್, ಜಿಲ್ಲಾ ಪ್ರತಿನಿಧಿಗಳಾದ ಬೇಪರ್ ಮಹಮ್ಮದ್ ಇಜಾಜ್, ವಿರೂಪಾಕ್ಷ, ಸದಸ್ಯರಾದ ಖಾಜಾ ಮೂಯಿನ್ನುದ್ದೀನ್, ಮೆಹಬೂಬ್ ಭಾಷಾ, ಉಮಾಮಹೇಶ್ವರಿ ಇನ್ನೂ ಇತರರು ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು.