ಖಾನಾಪೂರ ತಾಲೂಕಿನ ಗೋದೋಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ರೈತರ ಬೆಳೆ ನಾಶ, ಗ್ರಾಮಸ್ಥರಲ್ಲಿ ಆತಂಕ
ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಗಡಿ ಗ್ರಾಮವಾದ ಗೋದೋಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬುಧವಾರ ಬೆಳಿಗ್ಗೆ ಪ್ರತ್ಯೇಕವಾಗಿದ್ದು, ರೈತರ ಬೆಳೆ ನಾಶ ಮಾಡಿರುವದು ವರದಿಯಾಗಿದೆ. ಅಲ್ಲದೆ ಈ ಕಾಡಾನೆಗಳ ಹಿಂಡಿನಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಬುಧವಾರ ಬೆಳಿಗ್ಗೆ ಖಾನಾಪೂರ ತಾಲೂಕಿನ ಗೋದೋಳಿ ಗ್ರಾಮದ ರೈತರ ಜಮೀನಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ರೈತರು ಕಾಡನೆಗಳನ್ನು ಓಡಿಸುವ ನಿಟ್ಟಿನಲ್ಲಿ ನಾಯಿ ಗಳು ಛೂ ಬಿಟ್ಟಿದ್ದಾರೆ. ಆದರೆ ಅದರಲ್ಲಿನ ಕಾಡನೆಯೊಂದು ನಾಯಿಯ ಬೆನ್ನಟಿ ಹೋಗಿದೆ. ಇದರಿಂದ ರೈತರು ಮತ್ತು ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.