ಖಡಕಲಾಟ್ ಪೊಲೀಸರ ಕಾರ್ಯಾಚರಣೆ : ಇಬ್ಬರು ಮನೆಗಳ್ಳರ ಬಂಧನ : 12.49. ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಳಗಾವಿ : ವಿವಿಧ ಕಡೆಗಳಲ್ಲಿ ಮನೆಗಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಖಡಕಲಾಟ ಪೊಲೀಸರು ಬಂಧಿತರಿಂದ 12.49 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಈ ಕಳ್ಳತನ ಪ್ರಕರಣ ದಲ್ಲಿ ಅಕ್ಷಯ ನಾರೆ ಮತ್ತು ಅದಿತ್ಯಾ ಶ್ರೀಪನ್ನವರ ಇವರು ಬಂಧಿತ ಆರೋಪಿತರಾಗಿದ್ದಾರೆ. ದಿ. 3ರಂದು ಧೀರಜ ಅಶೋಕ ಶ್ರೀಪ್ಪನ್ನವರ ಸಾ : ಪಟ್ಟಣಕುಡಿ ತಾ : ಚಿಕ್ಕೋಡಿ ಇವರು ಖಡಕಲಾಟ ಪೊಲೀಸ್ ಠಾಣೆಗೆ ದೂರು ಒಂದನ್ನು ನೀಡಿ, ದಿ. 1ರಂದು ಪಟ್ಟಣಕುಡಿ ಗ್ರಾಮದಲ್ಲಿರುವ ಮನೆಯ ಹಿಂದಿನ ಬಾಗಿಲ ಮುರಿದು ಮನೆಯಲ್ಲಿನ ಟ್ರೇಜರಿಯಲ್ಲಿದ್ದ 2,33,500 ಕಿಮ್ಮತ್ತಿನ ಚಿನ್ಮಾಭರಣ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರಿನಲ್ಲಿ ತಿಳಿಸಿದ್ದರು.
ಸದರಿ ಪ್ರಕರಣದಲ್ಲಿ ಚಿಕ್ಕೋಡಿ ಡಿಎಸ್ ಪಿ ಜಿ.ಚಿ.ಗೌಡರ ಇವರ ಮಾರ್ಗದರ್ಶದಲ್ಲಿ ನಿಪ್ಪಾಣಿ ಸಿಪಿಐ ಬಿ.ಎಸ್.ತಳವಾರ ಇವರ ನೇತೃತ್ವದ ತನಿಖಾ ತಂಡದ ಸದಸ್ಯರುಗಳಾದ ಪಿಎಸ್ ಐ ಗಳಾದ ಅನಿಲ್ ಕುಂಬಾರ,. ಕು. ಅನಿತಾ ರಾಠೋಡ, ರಮೇಶ ಪವಾರ, ಡಿ.ಬಿ.ಕೊತವಾಲ, ಬಿಸಿಪಿಎಸ್ ನಿಲ್ದಾಣಿ &ಎ.ಎಸ್‌ಐ ಎನ್.ಎಚ್.ಪೂಜೇರಿ, ಎ. ಜಿ.ತಹಸಿಲ್ದಾರ, ಮತ್ತು ಸಿಬ್ಬಂದಿ ಜನರಾದ ಎಸ್.ಪಿ.ಅಸೋದೆ, ಜಿ.ಪಿ.ಬಡಿಗೇರ, ಎಸ್. ಎಲ್.ಗಳತಗಿ, ಜಿ.ಎನ್.ನಾಯಿಕ, ಡಿ.ಆರ್.ಪೂಜೇರಿ, ಎಮ್.ಎ.ತೇರದಾಳ, ಎಮ್.ಎಫ್.ನದಾಫ, ಎ.ವಿ.ಚಂದನಶಿವ, ಆರ್.ವೈ.ಮೇಲ್ಗಡೆ, ಆರ್.ಬಿ.ಪಾಟೀಲ, ಎಮ್.ಬಿ.ಕಾಂಬಳೆ, ವಿ.ಎಮ್.ಸಂಭಾಜಿ, ಬಿ.ಕೆ.ತಳವಾರ ಇವರು ಕಾರ್ಯಾಚರಣೆ ನಡೆಯಿಸಿ ಪಟ್ಟಣಕುಡಿ, ನವಹಾಳ ಮತ್ತು ನಿಲ್ದಾಣಿ ಸಾಯಿ ಶಂಕರ ನಗರದಲ್ಲಿ ಆದ ಮೂರು ಮನೆ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಇಬ್ಬರೂ ಆರೋಪಿತರನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ಇದ್ದ 111,46,750 ರೂ. ಮೌಲ್ಯದ 208.5 ಗ್ರಾಂ ಬಂಗಾರದ ಆಭರಣಗಳು, 53,200 ರೂ. ಮೌಲ್ಯದ 760 ಗ್ರಾಂ ತೂಕಿನ ಬೆಳ್ಳಿಯ ವಸ್ತುಗಳು ಕಳ್ಳತನಕ್ಕೆ ಉಪಯೋಗಿಸಿದ ಹಿರೋ ಸ್ಟೆಂಡರ್ ಪ್ಲಸ್ ಮೋಟರ ಸೈಕಲ ನಂ.ಕೆಎ-23-ಇಎಸ್-0344 ಅ.ಕಿ.50,0೦೦ ಹೀಗೆ ಒಟ್ಟು 12,49.950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಸದರಿ ಕಾರ್ಯಾಚರಣೆ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಮತ್ತು ಹೆಚ್ಚುವರಿ ಎಸ್. ಪಿ. ವೇಣುಗೋಪಾಲ ಇವರು ಶ್ಲಾಘಿಸಿರುತ್ತಾರೆ.