ಮುತಗಾ ಗ್ರಾಮದಲ್ಲಿ ಖದೀಮರ ಕೈಚಳಕ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು ಫರಾರಿ
ಬೆಳಗಾವಿ :ಮನೆಯಲ್ಲಿ ಇದ್ದ ಲಕ್ಷಾಂತರ ರೂಗಳ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳರು ಫರಾರಿಯಾಗಿತುವ ಘಟನೆ ತಾಲೂಕಿನ ಮುತಗಾ ಗ್ರಾಮದ ಗೋಕುಳ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಮುತಗಾ ಗ್ರಾಮದ ರಸ್ತೆ ಪಕ್ಕದಲ್ಲಿ ಇರುವ ಮನೆಯೊಂದಕ್ಕೆ ಸೋಮವಾರ ತಡರಾತ್ರಿ ಕನ್ನ ಹಾಕಿದ ಖದೀಮರ ತಂಡವು ಸುಮಾರು 40 ಗ್ರಾಂ (4 ತೋಲಿ) ಚಿನ್ನಾಭರಣವನ್ನು ಕದ್ದು ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮನೆಯವರು ಹೇಳುವ ಪ್ರಕಾರ 40 ಗ್ರಾಂ (4 ತೋಲಿ) ಎಂದಾದರೆ ಮರಿಹಾಳ ಪೊಲೀಸ ಠಾಣೆಯಲ್ಲಿ 20 ಗ್ರಾಂ ಚಿನ್ನಾಭರಣ ಕಳವಾಗಿರುವ ಕುರಿತು ದೂರು ದಾಖಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಮಾರಿಹಾಳ ಪೊಲೀಸ ಠಾಣೆಯಲ್ಲಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಆಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.