ಶಿಗ್ಗಾವ್

ಕೆಂಪೇಗೌಡರ ದೂರದೃಷ್ಟಿಯುಳ್ಳ ಆಲೋಚನೆ ಬಹಳಷ್ಟು ಮಾದರಿ : ಪಾಲಯ್ಯನಕೋಟೆ ವಿಶ್ವನಾಥ

ಕೆಂಪೇಗೌಡರ ದೂರದೃಷ್ಟಿಯುಳ್ಳ ಆಲೋಚನೆ ಬಹಳಷ್ಟು ಮಾದರಿ : ಪಾಲಯ್ಯನಕೋಟೆ ವಿಶ್ವನಾಥ

ಶಿಗ್ಗಾವಿ 29: ವಾಣಿಜ್ಯ, ಉದ್ಯೋಗದ ದೃಷ್ಟಿಯಿಂದ ಬೆಂಗಳೂರನ್ನ ಕಟ್ಟಲು ಅಂದು ಕೆಂಪೇಗೌಡರ ದೂರದೃಷ್ಟಿಯುಳ್ಳ ಆಲೋಚನೆ ಬಹಳಷ್ಟು ಮಾದರಿ ಕಾರ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ ಹೇಳಿದರು. 

ಪಟ್ಟಣದ ಸಂತೆ ಮೈದಾನದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ, ಪುರಸಭೆ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ಅಂದೇ ಅವರು ಅಂತಹ ದೊಡ್ಡ ನಗರಕ್ಕೆ ನೀರಿನ ಅಭಾವವನ್ನ ನೀಗಿಸಲು ಕೆರೆಗಳನ್ನ ನಗರದ ಸುತ್ತಲೂ ನಿರ್ಮಾಣ ಮಾಡಿದ್ದರು, ಇಂದಿನ ಯುವ ಪೀಳಿಗೆಗೆ ಮೊಬೈಲ್ ಅನಿವಾರ್ಯವಾಗಿದೆ, ಅವಶ್ಯಕತೆಗೆ ಅನುಗುಣವಾಗಿ ಬಿಟ್ಟು ಅನವಶ್ಯಕವಾಗಿ ಮೊಬೈಲ್ ಬಳಕೆಯನ್ನ ಯುವ ಸಮೂಹ ಹೊಂದುತ್ತಿದೆ ಎಂದು ವಿಷಾಧಿಸಿದರು. 

ಉಪನ್ಯಾಸಕ ಚಂದ್ರ​‍್ಪ ಸೊಬಟಿ ಉಪನ್ಯಾಸ ನೀಡಿ ಮಾತನಾಡಿ, ಕೆಂಪೆಗೌಡರು ಒಂದು ಪ್ರಾಂತ್ಯದ ದೊರೆಯಾಗಿದ್ದರು, ಅವರು ಒಂದು ನಾಡಿನ ಪ್ರಭು, ತಂದೆ-ತಾಯಿ ಕೆಂಪಮ್ಮನ ಆರಾಧಕರಾಗಿದ್ದರ ಪರಿಣಾಮ ಕೆಂಪರಾಯ ಅಥವಾ ಕಂಪೇಗೌಡರು ಎಂಬ ಹೆಸರು ಅವರಿಗೆ ಬಂತು, ಕೆಂಪೇಗೌಡರು ಶೈಕ್ಷಣಿಕ ಸಿದ್ದಾಂತವನ್ನ ಬಲ್ಲವರಾಗಿದ್ದರು, ಕನಸು ಕಂಡಂತೆ ನಡೆದವರು, ಈಗಿನ ಮಕ್ಕಳಿಗೆ ಕನಸೇ ಕಾಣಲು ಸಾದ್ಯವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.  

ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಿ, ಭಹುತ್ವದ ಸಂಸ್ಕೃತಿಯನ್ನ ಬೆಳೆಸುವ ನಿಟ್ಟಿನಲ್ಲಿ ವ್ಯಾಪಾರ, ವಹಿವಾಟು, ವಾಣಿಜ್ಯವನ್ನ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರುನ್ನ ಜನಪರವಾಗಿ ಜನಪದವನ್ನ ಕಟ್ಟಿ ಬೆಂಗಳೂರನ್ನ ಬೆಳೆಸಿ ಕಟ್ಟಿದರು,  ಇತಿಹಾಸದ ಪರಿಕಲ್ಪನೆ ಎಲ್ಲರಿಗೂ ಇರಬೇಕು ಎಂದರು. 

ಗ್ರೇಡ್ 2 ತಹಶೀಲ್ದಾರ ಶ್ರೀಮತಿ ಎಂ ಎಚ್ ಗಾಮನಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಇದಕ್ಕೂ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ಜರುಗಿತು. 

ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ ಹರಿಜನ, ಪಕ್ಕೀರ​‍್ಪ ಕುಂದೂರ, ನಿಂಗಪ್ಪ ಹರಿಜನ, ಅಶೋಕ ಕಾಳೆ, ಕಾಳಪ್ಪ ಬಡಿಗೇರ, ಕರಿಯಪ್ಪ ಕಟ್ಟಿಮನಿ, ಶಿವನಾಂದ ಸಣ್ಣಕ್ಕಿ, ಐ ಎಂ ಪಾಟೀಲ ಸೇರಿದಂತೆ ತಾಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ