ಈರಣ್ಣ ಹಲಗತ್ತಿಗೆ ಒಲಿದ ಕಾಯಕ ರತ್ನ ಪ್ರಶಸ್ತಿ
ಮಹಾಲಿಂಗಪುರ 02: ನೇಕಾರ ಕುಟುಂಬದಲ್ಲಿ ಜನಿಸಿ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ತಮ್ಮನ್ನು ತಾವು ತೊಡಗಿಸಿಕೊಂಡು ನಗರದ ವಿವಿಧ ಸಂಘ ಸಂಸ್ಥೆಗಳ ಸದಸ್ಯರಾಗಿ ಯಾವುದೇ ಕಾರ್ಯಕ್ರಮವಿದ್ದರೂ ತನು ಮನ ಧನ ಅರ್ಿಸಿ ಕಾರ್ಯ ಪೂರ್ತಿ ಮುಗಿಯುವವರೆಗೆ ವಿರಮಿಸದೆ ಚಿಕ್ಕಮಕ್ಕಳಂತೆ ಓಡಾಡಿ ಪೂರ್ತಿಗೊಳಿಸಿ ಯಶಸ್ಸುಗೊಳಿಸುವ ನಗರದ ಕುರುವಿನಶೆಟ್ಟಿ ಸಮಾಜದ ಮುಖಂಡರಾದ ಈರಣ್ಣ ಹಲಗತ್ತಿ ಅವರಿಗೆ ರನ್ನ ಬೆಳಗಲಿ ವಿದ್ಯಾವರ್ಧಕ ಸಂಘದ ಎಸ್.ಜಿ.ಎಮ್ ಕಲಾ ಹಾಗೂ ವಾಣಿಜ್ಯ ಪೂರ್ವ ಮಹಾವಿದ್ಯಾಲಯದವರು "ಕಾಯಕ ರತ್ನ "ಪ್ರಶಸ್ತಿ ಗೌರವಿಸಿದ್ದಾರೆ.
ಈ ಪ್ರಶಸ್ತಿ ಪಡೆದ ಈರಣ್ಣ ಹಲಗತ್ತಿಯವರನ್ನು ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಸೇರಿದಂತೆ ಕುರುವಿನಶೆಟ್ಟಿ ಸಮಾಜದ ಗುರು-ಹಿರಿಯರು ಮತ್ತು ಮಹಾಲಿಂಗಪುರದ ಸರ್ವ ಸಮಾಜ ಭಾಂಧವರು ಇವರಗೆ ಅಭಿನಂದನೆ ತಿಳಿಸಿದ್ದಾರೆ.