ಮಹಲಿಂಗಪುರ

ಹಾರ್ಮೋನಿಯಂ ಕಲಾವಿದ ರಾಮಪ್ಪ ನಿಂಗಪ್ಪ ಮಾಳಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ

ಹಾರ್ಮೋನಿಯಂ ಕಲಾವಿದ ರಾಮಪ್ಪ ನಿಂಗಪ್ಪ ಮಾಳಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ

ಮಹಾಲಿಂಗಪುರ 15: ಸಮೀಪದ ಮದಭಾಂವಿ ಗ್ರಾಮದ ಪೇಟೆ ಮಾಸ್ತರ್ ಎನಿಸಿದ ಹಾರ್ಮೋನಿಯಂ ಕಲಾವಿದ ರಾಮಪ್ಪ ನಿಂಗಪ್ಪ ಮಾಳಿ ಅವರಿಗೆ ಕೌಜಲಗಿ ನಿಂಗಮ್ಮ ಪ್ರಶಸ್ತಿ ದೊರೆತಿದೆ. ಬಾಗಲಕೋಟ ಜಿಲ್ಲಾ ಸಂಚಲನದಲ್ಲಿ, ಬ್ಯಾಕೋಡ ಗ್ರಾಮದ ಲಕ್ಕಮ್ಮದೇವಿ ಕಲಾಪೋಷಕ ಸಂಘದವರು ಬಾದಾಮಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಖಿಲ ಕರ್ನಾಟಕ ದ್ವಿತೀಯ ಬಯಲಾಟ ಉತ್ಸವ, 4ನೇ ಜಾನಪದ ನೃತ್ಯ ಕಲಾ ಉತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6ನೇ ವಯಸ್ಸಿನಿಂದಲೇ ಸಂಗೀತ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಮಾಯಣ, ಬಯಲಾಟ, ಅಮೇಚ್ಯೂರ ನಾಟಕ ನಿರ್ದೇಶನ ಮಾಡಿದ್ದಲ್ಲದೇ ಭಜನಾ ಸವೆಯಲ್ಲಿ ನಿರಂತರ ಸಕ್ರಿಯರಾದ ರಾಮಪ್ಪನಿಗೆ ಪ್ರಶಸ್ತಿ ಬಂದಿದ್ದಕ್ಕೆ ಗ್ರಾಮಸ್ಥರು ಹೆಮ್ಮೆಯಿಂದ ಹರ್ಷಗೊಂಡಿದ್ದಾರೆ. 


ಸುದ್ದಿ ಓದಿ