ಕಂಪ್ಲಿ

ಕನ್ನಡ ನಾಡು ನುಡಿ ಬೆಳವಣಿಗೆಯಲ್ಲಿ ಕಸಾಪ ಪಾತ್ರ ಅವಶ್ಯಕ ಆರ್‌.ರುದ್ರಮುನಿ

ಕನ್ನಡ ನಾಡು ನುಡಿ ಬೆಳವಣಿಗೆಯಲ್ಲಿ ಕಸಾಪ ಪಾತ್ರ ಅವಶ್ಯಕ ಆರ್‌.ರುದ್ರಮುನಿ

ಲೋಕದರ್ಶನ ವರದಿ 

ಕಂಪ್ಲಿ 05:  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಸಡಗರ ಸಂಭ್ರಮಗಳಿಂದ ಜರುಗಿತು ಕನ್ನಡ ಅತಿಥಿ ಉಪನ್ಯಾಸಕ ಆರ್‌.ರುದ್ರಮುನಿ ‘ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ’ ಕುರಿತು ಉಪನ್ಯಾಸ ನೀಡಿ, ಕಸಾಪ ಕನ್ನಡಪರವಾದ ಅತಿದೊಡ್ಡ ಸಂಸ್ಥೆಯಾಗಿದ್ದು 1915ರಲ್ಲಿ ಸ್ಥಾಪನೆಗೊಂಡಿತು. ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ ಸ್ಥಾಪನೆಗೆ ಚಾಲನೆ ನೀಡಿದರು. ಆರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ಕರೆಯುತ್ತಿದ್ದ ಈ ಸಂಸ್ಥೆಯು 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣಗೊಂಡು ಕನ್ನಡಿಗರ ಆರಾಧ್ಯ ಸಂಸ್ಥೆಯಾಯಿತು.

ನಾನಾ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಸಾರಸ್ವತ ಲೋಕಕ್ಕೆ ಕಸಾಪವು ಮಹತ್ವದ ಕೊಡುಗೆ ನೀಡಿದೆ. ಕನ್ನಡ ಭಾಷೆಯ ಪ್ರೋತ್ಸಾಹಕ್ಕಾಗಿ, ಕನ್ನಡ ಕಲಿಯಲು ಬಯಸುವವರಿಗೆ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ನಡೆಸುವ ಮೂಲಕ ಕನ್ನಡ ಪ್ರೀತಿಯನ್ನು ಬೆಳೆಸುವಲ್ಲಿ ಸದಾ ಕ್ರಿಯಾಶೀಲವಾಗಿದೆ ಎಂದರು. ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ಡಾ.ಜಂಬುನಾಥಗೌಡ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿ, ಕಸಾಪ ಸದಸ್ಯರಾಗುವ ಮೂಲಕ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಪ್ರೇರೇಪಿಸಬೇಕಿದೆ. ನಾಡಿನಲ್ಲಿ ಮನೆಗೊಬ್ಬರಾದರೂ ಕಸಾಪ ಸದಸ್ಯರಾಗಬೇಕಿದೆ ಎಂದರು.

ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆವಹಿಸಿ ಮಾತನಾಡಿದರುವಿವಿದಕ್ಷೇತ್ರಗಳ ಸಾಧಕರಾದ ಡಾ.ಜಂಬುನಾಥಗೌಡ, ಡಾ.ಕೃಷ್ಣಕುಮಾರ್, ಡಿ.ವಿ.ಸತ್ಯನಾರಾಯಣ, ಪ್ರೋ.ರತನ ಚವ್ಹಾಣ, ಕೃಷ್ಣ ಎಸ್‌.ಪೋಳ, ಸಿ.ರುದ್ರ​‍್ಪ, ಶಂಕರ ಉಬಾಳೆ, ಚಂದ್ರಶೇಖರಗೌಡ, ಎಲಿಗಾರ ವೆಂಕಟರೆಡ್ಡಿ, ಡಾ.ಹಾದಿಮನಿ ಕಾಳಿಂಗವರ್ಧನ, ಎಸ್‌.ಡಿ.ಬಸವರಾಜ, ಪರಶುರಾಮ ಬುಸಾರೆ, ಕೊರವರ ಗೋಪಾಲರನ್ನು ಗೌರವಿಸಲಾಯಿತು.ಪ್ರಾಚಾರ್ಯ ಡಾ.ಶ್ರೀನಿವಾಸರೆಡ್ಡಿ, ಪದಾಧಿಕಾರಿಗಳಾದಅಂಬಿಗರ ಮಂಜುನಾಥ, ಎಸ್‌.ಡಿ.ಬಸವರಾಜ, ಎಸ್‌.ಶಾಮಸುಂದರ ಯು.ಎಂ.ವಿದ್ಯಾಶಂಕರ, ಅಶೋಕ ಕುಕನೂರು, ಎಸ್‌.ರಾಮಪ್ಪ, ಬಡಿಗೇರ ಜಿಲಾನ್‌ಸಾಬ್, ಡಾ.ಅನ್ನಪೂರ್ಣ ಗುಡದೂರು  ಎಸ್‌.ರಾಮಪ್ಪ ಸೇರಿ ಇತರರಿದ್ದರು 


ಸುದ್ದಿ ಓದಿ