ಮೂಡಲಗಿ

ವಿಜೃಂಭನೆಯಿಂದ ಬಲಭೀಮ ದೇವರ ಕಾರ್ತಿಕೋತ್ಸವ

ವಿಜೃಂಭನೆಯಿಂದ ಬಲಭೀಮ ದೇವರ ಕಾರ್ತಿಕೋತ್ಸವ

ಮೂಡಲಗಿ 18: ತಾಲೂಕಿನ ಕುಲಗೋಡ ಗ್ರಾಮದ ಬಲಭೀಮ ದೇವರ ಕಾರ್ತಿಕೋತ್ಸವದ ಅಂಗವಾಗಿ ಶ್ರೀರಾಮ ರಥೋತ್ಸವ ಶನಿವಾರ ಸಂಜೆ 6.15 ಕ್ಕೆ ವಿಜೃಂಭನೆಯಿಂದ ಜರುಗಿತು.  

ಶನಿವಾರ  ಬೆಳಿಗ್ಗೆ 5.30 ಕ್ಕೆ ಶ್ರೀ ರಾಮ ಜಪ, 8 ಕ್ಕೆ ವಾಯುಸ್ತುತಿ ನಂತರ ಮಹಾಭೀಷೇಕ ಮುಂಜಾನೆ 7 ರಿಂದ 10 ರ ವರೆಗೆ ಶ್ರೀರಾಮ ಜಪ ಯಜ್ಞ, ಮಧ್ಯಾಹ್ನ 1.30 ಕ್ಕೆ ಶ್ರೀ ಬಲಭೀಮ ದೇವರ ಮಹಾಪೂಜೆ, ಮಹಾಮಂಗಳಾರುತಿ ನಂತರ ಮಹಾ ಪ್ರಸಾದ ನಡೆಯುವದು ಸಂಜೆ 6.15 ಕ್ಕೆ ಶ್ರೀರಾಮರ ಮಹಾರಥೋತ್ಸವ ಜರುಗಿತು. 

ಕುದುರೆ ಕುಣಿತ,ಡೋಳ್ಳು ಕುಣಿತ, ಹಲಗೆ ಮೇಳ, ಝಂಜ ಪಥಕ, ಮುತ್ತೈದೆಯರ ಆರತಿ ಮತ್ತು ಕುಂಭ ಮೇಳದೊಂದಿಗೆ ದೇವಸ್ಥಾನದ ಆವರಣದಿಂದ ಅಂಗಡಿ ಕಟ್ಟಿ ಓಣಿಯ ಹತ್ತಿರದ ಪಾದಕಟ್ಟಿವರೆಗೆ ಮಹಾ ರಥೋತ್ಸವ ಜರುಗಿತು. 

ಸೇರಿರುವ ಭಕ್ತರು ಜೈಶ್ರೀರಾಮ ಎಂದು ಜೇಂಕಾರ ಹಾಕುತ್ತಾ ರಥಕ್ಕೆ ಕಾರಿಕು,ಬೆಂಡು, ಬೇತಸು, ಹೂ ಹಾರಿಸಿ ಹರಕೆ ತಿರಿಸಿದರು.  ರಥವು ಮರುಳಿ ಮೊದಲು ನಿಂತ ಸ್ಥಳಕೆ ಆಗಮಿಸಿದ ಕೂಡಲೇ ಭಕ್ತರು ಚಪ್ಪಾಳೆ ತಟ್ಟುತ್ತಾ ಜೈಶ್ರೀರಾಮ ಎಂದು ಜೈಕಾರ ಕೂಗಿ ಇಷ್ಟಾರ್ಥ ಬೇಡಿಕೊಳ್ಳುತ್ತಾರೆ. 


ಸುದ್ದಿ ಓದಿ