ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಣೆ
ಲೋಕದರ್ಶನ ವರದಿ
ಶಿಗ್ಗಾವಿ 13: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ನೇರ ದೃಷ್ಟಿ ಆಂಜನೇಯ ದೇವಸ್ಥಾನದಲ್ಲಿ 15 ನೇ ವರ್ಷದ ಕಾರ್ತಿಕೋತ್ಸವ ವಿಶೇಷ ಪೂಜೆ ಹವನಗಳ ಮುಖಾಂತರ ಅತಿ ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳು ನಡೆದವು.
ಈ ಸಂಧರ್ಭದಲ್ಲಿ ಸಿ.ವ್ಹಿ. ಚಿಕ್ಕಮಠ, ಸುಬ್ರಾಯ ಶೇಜವಾಡಕರ, ಮಂಜುನಾಥ ಶೇಜವಾಡಕರ, ನಾಗರಾಜ ಬಾಣದ, ಸಿ.ಎಸ್.ಕಲ್ಲಮನಿ, ನೀಲಕಂಠ ಆಡರಕಟ್ಟಿ, ವಿಜಯಕುಮಾರ್ ವಿರಕ್ತಮಠ, ಪರಮೇಶಿ ಅಂದಲಗಿ, ಮುತ್ತು ವನಹಳ್ಳಿ, ನಂದೀಶ ಬಾಣದ, ಹನುಮಂತ ಅಂದಲಗಿ, ಸೇರಿದಂತೆ ಹೌಸಿಂಗ್ ಬೋರ್ಡ್ ಕಾಲನಿ ಸರ್ವ ಹಾಗೂ ಊರಿನ ಸಧ್ಬಕ್ತರು ಉಪಸ್ಥಿತರಿದ್ದರು.