ಮಹಲಿಂಗಪುರ

ಭಾಜಪ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಹಿಂದೆಂದಿಗಿಂತಲೂ ಮಹಿಳಾ ಜಾಗೃತಿ, ಸ್ವಾವಲಂಬನೆ: ಸಿದ್ದು ಸವದಿ

ಭಾಜಪ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಹಿಂದೆಂದಿಗಿಂತಲೂ ಮಹಿಳಾ ಜಾಗೃತಿ, ಸ್ವಾವಲಂಬನೆ: ಸಿದ್ದು ಸವದಿ

ಮಹಾಲಿಂಗಪುರ26: ಇಂದು ದೇಶದಲ್ಲಿ ಮಹಿಳಾ ಜಾಗೃತಿ ಮತ್ತು ಸ್ವಾವಲಂಬಿ ಬೆಳವಣಿಗೆಯಾಗುತ್ತಿದ್ದು, ರಾಷ್ಟ್ರೀಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ  ಗ್ರಾಮೀಣ ಮಹಿಳೆಯರ ಬಡತನ ನೀಗಿ, ಆರ್ಥಿಕ ಸಬಲತೆ, ಶಿಕ್ಷಣ, ಆರೋಗ್ಯ, ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.  

ಜಿಪಂ ಮತ್ತು ತಾಪಂ ವತಿಯಿಂದ ಸಮೀಪದ ಕೆಸರಗೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಗ್ರಾಮೀಣ ಜೀವನೋಪಾಯ ಅಭಿಯಾನ, ಆಶಾಕಿರಣ ಸಂಜೀವಿನಿ ಕೆಸರಗೊಪ್ಪ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ ಪ್ರಾರಂಭೋತ್ಸವ ಮತ್ತು ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯೋಜನಾಬದ್ಧ ಕಾರ್ಯದಿಂದ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಪರಿಶ್ರಮವಿಲ್ಲದೆ ಸಾಧನೆಯಿಂದ ಏನನ್ನು ಸಾಧಿಸಲಾಗುವುದಿಲ್ಲ.ಆ ನಿಟ್ಟಿನಲ್ಲಿ ಮಹಿಳೆಯರ ದುಡಿಮೆಗೆ ಸರ್ಕಾರ ನೀಡುತ್ತಿರುವ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು. 

ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲತೆಗಾಗಿ ಸಾಲ ಮತ್ತು ಸುತ್ತು ನಿಧಿಯಲ್ಲಿ ಗ್ರಾಪಂ ವ್ಯಾಪ್ತಿಯ 12 ಸ್ವಸಹಾಯ ಸಂಘಗಳಿಗೆ ಒಟ್ಟು 13.25 ಲಕ್ಷ ರೂ ಸಾಲ ಧನ ಮತ್ತು ಸಹಾಯ ಧನ ಚೆಕ್ ವಿತರಿಸಲಾಯಿತು, ಬಿಡಿಸಿಸಿ ಬ್ಯಾಂಕ್ ವತಿಯಿಂದ ಶಾಸಕ ಸಿದ್ದು ಸವದಿ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ 5 ಜನ ರೈತರಿಗೆ ಟ್ಯ್ರಾಕ್ಟರ್ ವಿತರಿಸಿದರು.  

ತಾಪಂ ಇಒ ಸಂಜೀವಕುಮಾರ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಢವಳೇಶ್ವರ, ಪಿಕೆಪಿಎಸ್ ಅಧ್ಯಕ್ಷ ಮಾರುತಿ ತೇಜಪ್ಪಗೋಳ, ಗ್ರಾಪಂ ಉಪಾಧ್ಯಕ್ಷ ಹನುಮಂತ ಮೋಪಗಾರ, ಸಂಗಪ್ಪ ಹಲ್ಲಿ, ಶಿವಲಿಂಗ ಕೌಜಲಗಿ, ಪರ​‍್ಪ ಬ್ಯಾಕೋಡ ಮಾರುತಿ ಖರೋಶಿ, ಶ್ರೀಶೈಲ ಸತ್ತಿಗೇರಿ, ಬಸಪ್ಪ ಚನ್ನಾಳ, ಶಿವಲಿಂಗಪ್ಪ ವಾಲಿ, ಶೈಲಾ ಮಠದ, ರತ್ನಬಾಯಿ ಚನ್ನಾಳ, ಯಂಕವ್ವ ಬಗಲಿ, ರಾಧ ಮಾದರ, ಕಲ್ಪನಾ ನಿಕ್ಕಂ, ಲಕ್ಷ್ಮೀ ಮರನೂರ, ತಿಪ್ಪವ್ವ ಬಾಡಿಗಿ, ರಂಗಪ್ಪ ಕರ್ಲಟ್ಟಿ, ಶಾಂತ ಚಿಂಚಲಿ, ಅಲ್ಲಪ್ಪ ದಡ್ಡಿಮನಿ, ಚನ್ನು ದೇಸಾಯಿ, ಭೀಮಶಿ ಸಸಾಲಟ್ಟಿ, ಶ್ರೀನಾಥ ಗುಳೆನ್ನವರ, ಕಾಶಪ್ಪ ಮಾಂಗ, ಶಿವಲಿಂಗಪ್ಪ ವಾಲಿ, ಶ್ರೀಮಂತ ಕಾರಜೋಳ, ಯಮನಪ್ಪ ಓಕಳಿ, ಸದಾಶಿವ ಕುರಿ, ಮಹಾಲಿಂಗ ನಾಯಕ, ವಿಠ್ಠಲ ಢವಳೇಶ್ವರ, ಮಲ್ಲಿಕಾರ್ಜುನ ಖಾನಟ್ಟಿ, ಮಾಳಪ್ಪ ದಡ್ಡಿಮನಿ, ಬಸವರಾಜ ಢವಳೇಶ್ವರ, ಶ್ರೀಶೈಲ ಬ್ಯಾಕೋಡ, ವಿಠ್ಠಲ ಬನಾಜ, ಚಂದ್ರು, ರಂಗಪ್ಪ, ಮಹಾಲಿಂಗ ಶಿರೋಳ, ಮಹಾಲಿಂಗ ನಾಯಕ ಇತರರು ಇದ್ದರು.  

ಲಕ್ಷ್ಮಿ ಅವರಾದಿ ಪ್ರಾರ್ಥಿಸಿ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಮಿರ್ಜಿ ಸ್ವಾಗತಿಸಿ, ನಾಣಯ್ಯ ಮಠಪತಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ