ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.90
ರಾಯಬಾಗ 26: ಪಟ್ಟಣದ ಕರ್ನಾಟಕ ಪಬ್ಲಿಕ್ ಸರ್ಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.90 ರಷ್ಟು ಆಗಿದೆ.
ನಿರ್ಮಲಾ ದಯಾನಂದ ಮೇತ್ರಿ ಶೇ.93.44 (584) ಪ್ರಥಮ, ಸುನಿಲ್ ಭುಜಪ್ಪ ನಾಯಿಕವಾಡಿ ಶೇ.90.08 (563) ದ್ವಿತೀಯ, ಹಾಲಪ್ಪ ಸಿದ್ದಪ್ಪ ನಾಯಿಕ ಶೇ.87.04 (549) ತೃತೀಯ ಸ್ಥಾನ ಪಡೆದಿದ್ದಾರೆ.
ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲೆಯ ಉಪ ಪ್ರಾಚಾರ್ಯರು, ಗುರು ಬಳಗ, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಕೋರಿ, ಹರ್ಷ ವ್ಯಕ್ತಪಡಿಸಿದ್ದಾರೆ.