ಬಳ್ಳಾರಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಧರಣಿ ಯಶಸ್ವಿ

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಧರಣಿ ಯಶಸ್ವಿ

ಬಳ್ಳಾರಿ 19: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಬಳ್ಳಾರಿಯ ಪ್ರಧಾನ ಕಚೇರಿಯ ಮುಂದೆ ಸುಮಾರು 200ಕ್ಕೂ ಹೆಚ್ಚು ನಿವೃತ್ತ ಸದಸ್ಯರು ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬ್ಯಾಂಕಿನ ಅಧ್ಯಕ್ಷರಾದ ಆರ್‌. ದಿಲ್ಲಿಬಾಬು ಅವರ ಮುಖಾಂತರ ಕೆನರಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿ ಸಲ್ಲಿಸಿದರು. 

ಧರಣಾ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷರಾದ ಕಾಂಽಽ ಗಣಪತಿ ಹೆಗಡೆಯವರು ಮಾತನಾಡುತ್ತಾ, ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೆ ವಾಣಿಜ್ಯ ಬ್ಯಾಂಕ್ ಉದ್ಯೋಗಿಗಳಿಗೆ ಸಮಾನವಾಗಿ ವೇತನ, ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ಕೊಡಬೇಕೆಂದು ಮಾನ್ಯ ಸುಪ್ರೀಂಕೋರ್ಟ್‌ನ ಆದೇಶದಂತೆ ನೇಮಕಗೊಂಡ ರಾಷ್ಟ್ರೀಯ ನ್ಯಾಯ ಮಂಡಳಿ ತೀರ​‍್ುಕೊಟ್ಟಿತ್ತು. ಆ ತೀರ​‍್ುನ್ನು ಮಾನ್ಯ ಸುಪ್ರೀಂಕೋರ್ಟ್‌ ಮಾನ್ಯ ಮಾಡಿ ವಾಣಿಜ್ಯ ಬ್ಯಾಂಕಗಳಲ್ಲಿ ಕಾಲಕಾಲಕ್ಕೆ ಮಾಡಿಕೊಂಡ ಒಪ್ಪಂದಗಳ ಪ್ರಕಾರ ಕೊಡಲ್ಪಡುವ ಎಲ್ಲಾ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಕೊಡಬೇಕು ಎಂದು ನಿರ್ದೇಶಿಸಿತ್ತು ಎಂದರು. 

ದಿ.  29-10-1993ರ ಒಪ್ಪಂದದ ಮೂಲಕ ವಾಣಿಜ್ಯ ಬ್ಯಾಂಕ್ ಉದ್ಯೋಗಿಗಳಿಗೆ ನಿವೃತ್ತ ವೇತನ ಹಾಗೂ ಒಂದು ಹೆಚ್ಚುವರಿ ಇಂಕ್ರಿಮೆಂಟ್ ಕೊಡಲಾಗಿತ್ತು. ಆದರೆ ಈ ಸವಲತ್ತುಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೆ ಕೊಟ್ಟಿರಲಿಲ್ಲ. ಆ ಹಿನ್ನೆಲೆಯಲ್ಲಿ All India Regional Rural Bank Employees Association (AIRRBEA)ನಡೆಸಿದ  ಕಾನೂನು ಹೋರಾಟಗಳ ಫಲವಾಗಿ ಸುಪ್ರೀಂಕೋರ್ಟ್‌ 25-04-2018ರ ಆದೇಶದಂತೆ ನಿವೃತ್ತಿ ವೇತನ ಯೋಜನೆಯನ್ನು ಜಾರಿ ಮಾಡಲಾಯಿತು. ನಿವೃತ್ತಿ ವೇತನ ಜಾರಿಯಲ್ಲಿ ಆದ ನ್ಯೂನ್ಯತೆಗಳನ್ನು ಸರಪಡಿಸುವ ಸಲುವಾಗಿ ಂಋಖಃಇಂ ನೇತೃತ್ವದಲ್ಲಿ ಸಂಘಟನಾ ಮತ್ತು ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

ದಿನಾಂಕ 29-10-1993ರ ಒಪ್ಪಂದದಂತೆ ಕೊಡಬೇಕಾದ ಒಂದು ಹೆಚ್ಚುವರಿ ಇಂಕ್ರಿಮೆಂಟ್ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೆ ಕೊಟ್ಟಿರುವುದಿಲ್ಲ. ಸುಪ್ರೀಂಕೋರ್ಟ್‌ ಆದೇಶದ ನಂತರವೂ ಈ ಇಂಕ್ರಿಮೆಂಟ್ ಕೊಡದ ಪ್ರಯುಕ್ತ ನ್ಯಾಯಾಲಯ ನಿಂದನೆ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ದಿನಾಂಕ 04-08-2023 ರಂದು ಒಂದು ಆದೇಶ ಹೊರಡಿಸಿ ಈ ಹೆಚ್ಚುವರಿ ಇಂಕ್ರಿಮೆಂಟ್ ಜಾರಿಮಾಡಲು ಆದೇಶ ಮಾಡಿತ್ತು ಎಂದರು. 

ಈ ಆದೇಶದಂತೆ ದೇಶದ ಬಹುತೇಕ ಗ್ರಾಮೀಣ ಬ್ಯಾಂಕುಗಳು ಈ ಇಂಕ್ರೀಮೆಂರ್ಟ್ ತಮ್ಮ ಉದ್ಯೋಗಿ ಗಳಿಗೆ ಕೊಟ್ಟಿದ್ದಾರೆ ಮತ್ತು ಕೊಡುತ್ತಿದ್ದಾರೆ. ಆದರೆ ಕೆನರಾ ಬ್ಯಾಂಕ್ ಪ್ರೇರಿತ ನಾಲ್ಕೂ ಗ್ರಾಮೀಣ ಬ್ಯಾಂಕುಗಳು ಈ ಆದೇಶವನ್ನು ತಮಗೆ ಬೇಕಾದಂತೆ ಬೇಕಾಬಿಟ್ಟಿ ಅರ್ಥೈಸಿ ದಿನಾಂಕ 01-04-2018ಕ್ಕೆ ಮೊದಲು ನಿವೃತ್ತಿ ಹೊಂದಿರುವ ಎಲ್ಲರಿಗೂ ಈ ಇಂಕ್ರಿಮೆಂಟ್‌ನ್ನು ನಿರಾಕರಿಸಿದ್ದೇವೆ ಎಂದು ತಿಳಿಸಿದರು. 

ಈ ಅನ್ಯಾಯವನ್ನು ಪ್ರತಿಭಟಿಸಲು 18-01-2024 ರಂದು ಕೆನರಾ ಬ್ಯಾಂಕ್ ಪ್ರೇರಿತ ನಾಲ್ಕು ಗ್ರಾಮೀಣ ಬ್ಯಾಂಕುಗಳಲ್ಲಿನ ನಿವೃತ್ತ ನೌಕರರ ಸಂಘಗಳ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಬೇಡಿಕೆಯನ್ನು ಧರಣಿಗೆ ಹೋಗುವ ಮುಂಚಿ ಪತ್ರ ವ್ಯವಹಾರ, ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ನಮ್ಮ ಬಯಕೆ ಈಡೇರಿರುವುದಿಲ್ಲ. 

ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಖಜಾಂಚಿಗಳಾದ ಬಿ.ಪುಣ್ಯಮೂರ್ತಿ ಅವರು ಮಾತನಾಡುತ್ತಾ, ಅನುಕಂಪ ಆಧಾರಿತ ಉದ್ಯೋಗ ಯೋಜನೆಯು ವಾಣಿಜ್ಯ ಬ್ಯಾಂಕಗಳಲ್ಲಿ ದಿನಾಂಕ 05-08-2014 ರಿಂದಲೇ ಜಾರಿ ಇದ್ದರೂ ಗ್ರಾಮೀಣ ಬ್ಯಾಂಕಗಳಲ್ಲಿ ಜಾರಿ ಮಾಡದೇ ಇದ್ದಿದ್ದರ ವಿರುದ್ದ ಹೋರಾಟ ಮಾಡಿ ಇದೀಗ ಈ ಯೋಜನೆ ಜಾರಿಯಾದಾಗಿನಿಂದ ಐದು ವರ್ಷಗಳ ಹಿಂದಿನ ಕೇಸುಗಳನ್ನೂ ಪರಿಗಣಿಸಬೇಕೆಂದು ಆದೇಶ ಬಂದಾಗ ಅದನ್ನು ಜಾರಿ ಮಾಡುವಲ್ಲಿ ಕೂಡ ಬ್ಯಾಂಕ್ ತನ್ನದೇ ಷರತ್ತು ಹಾಕಿ ಹಲವು ಕುಟುಂಬಗಳಿಗೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ವಿರೋದಿಸುವುದು ಮತ್ತು ಆ ಎಲ್ಲರಿಗೂ ನ್ಯಾಯ ಒದಗಿಸಿ ಕೊಡುವುದು ಕೂಡ ಈ ಧರಣಿಯ ಒಂದು ಬೇಡಿಕೆಯಾಗಿದೆ. 

ಇದಲ್ಲದೇ ಸ್ವಯಂ ನಿವೃತ್ತಿ ಹೊಂದಿರುವವರಿಗೆ ಅವರ ಖಾತೆಯಲ್ಲಿದ್ದ ರಜೆಗಳ ನಗದೀಕರಣವನ್ನು ನಿರಾಕರಿಸಲಾಗುತ್ತಿದ್ದು ಈ ಅನ್ಯಾಯವನ್ನು ಸರಿಪಡಿಸುವುದು ಇನ್ನೊಂದು ಬೇಡಿಕೆಯಾಗಿದೆ. ಈ ವಿಷಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠದಲ್ಲಿ ಓಂಃಂಖಆ ಈ ವಿಷಯ ತನಗೆ ಸಂಬಂಧಪಟ್ಟಿದ್ದಲ್ಲ, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲವೆಂದು ಪ್ರಾಮಾಣಿತ ಆಫಿಡವಿಟ್ ಹಾಕಿದ್ದರೂ ಓಂಃಂಖಆ ಅನುಮತಿ ಬಂದಿಲ್ಲವೆಂಬ ಕುಂಟು ನೆಪವೊಡ್ಡಿ ರಜೆಗಳ ನಗದಿಕರರಣ ನಿರಾಕರಿಸಲಾಗುತ್ತಿದೆ. 

ಇವಲ್ಲದೇ ಇಕಈನ ಮರುಪಾವತಿ ಮಾಡಿಸಿಕೊಂಡ ಕುರಿತಾದ ಲೆಕ್ಕಾಚಾರ, ಅರೋಗ್ಯ ವಿಮೆಯ ಕಂತಿನ ಪಾವತಿ, ಪೆನ್ಷನ್ ವಿಶ್ವಸ್ತ ಮಂಡಳಿಯಲ್ಲಿ ನಮ್ಮ ಸಂಘಕ್ಕೆ ಪ್ರಾತಿನಿಧ್ಯ ಮುಂತಾದವು ಈ ಧರಣಿ ಕಾರ್ಯಕ್ರಮದ ಬೇಡಿಕೆಗಳಾಗಿವೆ ಎಂದರು. ಬಿಇಎಫ್‌ಐನ ಮುಖಂಡರಾದ ಎಸ್‌.ಟಿ.ವೇಣುಗೋಪಾಲಶೆಟ್ಟಿ, ವಿಕ್ರಮ್, ಘನಮಲ್ಲಿ. ರಾಜ್ಯ ಸರ್ಕಾರಿ ನೌಕರರ ಪಿಂಚಿಣಿದಾರರ ಸಂಘದ ಮುಖಂಡರಾದ ಗುರುಸಿದ್ಧಮೂರ್ತಿ, ಎಲ್‌ಐಸಿ ಸಂಘದ ಮುಖಂಡರಾದ ಕಾಂಽಽ ಸೂರ್ಯನಾರಾಯಣ, ಸುನೀಲ್, ಸಿಐಟಿಯು ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ಜೆ.ಸತ್ಯಬಾಬು, ಕೆಜಿಬಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ತೇರದಾಳ, ಕೆಜಿಬಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಮದಕುಂಟೆ, ರೆವಾ ಪ್ರಧಾನ ಕಾರ್ಯದರ್ಶಿಗಳಾದ ಕಾಂಽಽ ಗಂಗಣ್ಣ ಪತ್ತಾರ್, ಉಪಾಧ್ಯಕ್ಷರಾಧ ಡಿ.ವಿ.ದೇಶ್‌ಮುಖ್ ಮುಂತಾದವರು ಮಾತನಾಡಿದರು. 

ಈ ಧರಣಿ ಕಾರ್ಯಕ್ರಮದ ನಂತರವೂ ನಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ನಾಲ್ಕೂ ಗ್ರಾಮೀಣ ಬ್ಯಾಂಕುಗಳ ನಿವೃತ್ತ ಉದ್ಯೋಗಿಗಳ ಸಂಘಗಳು ಸಭೆ ಸೇರಿ ಮುಂದಿನ ಹೋರಾಟ ಕಾರ್ಯಕ್ರಮಗಳನ್ನು ರೂಪಿಸಲಿವೆ. 

ಬ್ಯಾಂಕಿನ ನಿವೃತ್ತ ಉದ್ಯೋಗಿಗಳ ಬೇಡಿಕೆಗಳ ಬಗ್ಗೆ ತಾತ್ಸಾರ ಮತ್ತು ಹಠಮಾರಿತನದ ಧೋರಣೆ ಹೊಂದಿ ಈ ಬ್ಯಾಂಕಿನಲ್ಲಿ ತಮ್ಮ ಜೀವಿತ ಕಾಲಾವಧಿ ಎಲ್ಲ ದುಡಿದು ಇದೀಗ ಇಳಿ ವಯಸ್ಸಿನಲ್ಲಿ ನ್ಯಾಯಕ್ಕಾಗಿ ಬೀದಿಗಿಳಿಯುವಂತೆ ಮಾಡಿದ ಬ್ಯಾಂಕಿನ ಪ್ರಮುಖವಾಗಿ ಪ್ರೇರಕ ಬ್ಯಾಂಕ್ ಕೆನರಾ ಬ್ಯಾಂಕಿನ ಧೋರಣೆಗಳ ಬಗ್ಗೆ ಸಂಬಂಧಪಟ್ಟವರಿಗೂ, ಗ್ರಾಹಕರಿಗೂ ತಮ್ಮ ಮಾಧ್ಯಮಗಳ ಮೂಲಕ ದಯವಿಟ್ಟು ಗಮನಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. 


ಸುದ್ದಿ ಓದಿ