ಕರ್ನಾಟಕ ದಲಿತ ಚರಿತ್ರೆ ಲೇಖನ ಶಾಸ್ತ್ರ ಮಂಡನೆ ಕಾರ್ಯಕ್ರಮ
ಹಂಪಿ 16: ಕನ್ನಡ ವಿಶ್ವವಿದ್ಯಾಲಯ ಹಂಪಿ ಚರಿತ್ರೆ ವಿಭಾಗದ ವತಿಯಿಂದ ದಿನಾಂಕ 16 ರಂದು ಪಾಕ್ಷಿಕ ಮಾತು 37 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಯಾದಂತಹ ಶಂಕರ್ಪ ಟಿ. ಅವರು ಕರ್ನಾಟಕ ದಲಿತ ಚರಿತ್ರೆ ಲೇಖನಶಾಸ್ತ್ರ ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು.
ಚರಿತ್ರೆ ಬರವಣಿಗೆ ಮತ್ತು ವಿಶ್ಲೇಷಣೆ ಸಂಬಂಧಿಸಿದಂತೆ ಅನೇಕ ಪಂಥಗಳು ಹುಟ್ಟಿಕೊಂಡವು ಅವುಗಳಲ್ಲಿ ವಸಾಹತುಶಾಹಿ, ರಾಷ್ಟ್ರೀಯವಾದಿ, ಮಾರ್ಕ್ಸವಾದಿ, ಸಬಾಲ್ಟರ್ನ ಪಂಥ ಆಧುನಿಕ ಉತ್ತರವಾದ ನವಾಚಾರಿತಕವಾದ ಎಂಬ ಪಂಥಗಳ ಬಗ್ಗೆ ವಿವರಿಸುವುದರ ಜೊತೆಗೆ ಬುದ್ಧ ಬಸವಾದಿ ಶರಣರ ತತ್ವಪದಕಾರರು ಕೀರ್ತನಕಾರರ ಹಿನ್ನೆಲೆಯಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೂ ನಡೆದು ಬಂದ ಚರಿತ್ರೆ ಲೇಖನಶಾಸ್ತ್ರದ ಬಗ್ಗೆ ವಿಷಯವನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಪ್ರಾಧ್ಯಾಪಕರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಅಧ್ಯಕ್ಷೀಯ ನುಡಿಯನ್ನಾಡಿದರು. ಕನ್ನಡ ಕಾವ್ಯಗಳಲ್ಲಿ ನವ್ಯ, ನವೋದಯ, ಪ್ರಗತೀಶೀಲ, ಬಂಡಾಯ ಸಾಹಿತ್ಯದಲ್ಲಿ ದಲಿತ ಚರಿತ್ರೆಯನ್ನು ಕಾಣಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚರಿತ್ರೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಕೆ.ಮೋಹನ್ಕೃಷ್ಣ ರೈ ಅವರು ಕರ್ನಾಟಕ ದಲಿತ ಚರಿತ್ರೆಯನ್ನು ಕೃತಿ, ಕೃತಿಕಾರ, ಆತನ ಸಿದ್ದಾಂತ ಒಳಗೊಳ್ಳುವುದರ ಜೊತೆಗೆ ಸೈದ್ಧಾಂತಿಕತೆ ವೈಧಾನಿಕ ವಿಮರ್ಶೆ ಮಿತಿ ಇದನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಕಟ್ಟಿಕೊಡುವುದರ ಜೊತೆಗೆ ದಲಿತ ಸಮುದಾಯದ ಬದುಕಿನ ದೃಷ್ಟಿಕೋನದ ಹಿನ್ನೆಲೆಯಲ್ಲಿ ಚರಿತ್ರೆಯನ್ನು ಕಟ್ಟುವ ಅತ್ಯವಿದೆ ಎಂದು ಹೇಳಿದರು.
ಪಾಕ್ಷಿಕಮಾತು ಕಾರ್ಯಕ್ರಮದ ಸಂಯಿಯಿಯಿಯಿಯಿಚಾಲಕರಾದ ಪ್ರದೀಪ ಹೆಚ್. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿಭಾಗದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.